ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂ ಬೆಳಿಗ್ಗೆ ರಾಜ್ಯದ ಎಂಟು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರು ಸೇರಿದಂತೆ ಸುಮಾರು ಎಂಟು ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳು
ಮಲ್ಲಿಕಾರ್ಜುನ ಅಲಿಪುರ, ಮಾಜಿ ಎಂಜಿನಿಯರ್, ಆಡಿಪಿಆರ್, ಕಲಬುರಗಿ
ರಾಮಚಂದ್ರ, ಪಿಡಿಒ ಕಲಬುರಗಿ
ಲತಾ ಮಣಿ, ಲೆಕ್ಕಾಧಿಕಾರಿ, ಚಿಕ್ಕಮಗಳೂರು ಪುರಸಭೆ
ಕೆ.ಜಿ. ಅಮರನಾಥ್, ಮುಖ್ಯಾಧಿಕಾರಿ, ಆನೇಕಲ್ ಪುರಸಭೆ
ಪ್ರಕಾಶ, ಬಿಬಿಎಂಪಿ ಸಹಾಯಕ ಎಂಜಿನಿಯರ್ (ಗೋವಿಂದರಾಜನಗರ, ಬೆಂಗಳೂರು)
ಡಾ. ಎಸ್. ಪ್ರದೀಪ, ಸಹ ಸಂಶೋಧನಾ ನಿರ್ದೇಶಕ, ಸಾವಯವ ಕೃಷಿ (ಶಿವಮೊಗ್ಗ)
ಧ್ರುವರಾಜ್, ನಗರ ಪೊಲೀಸ್ ನಿರೀಕ್ಷಕ, ಗದಗ
ಅಶೋಕ್ ವಲ್ಸಂದ್, ಎಂಜಿನಿಯರ್, ಮಲಪ್ರಭಾ ಪ್ರಾಜೆಕ್ಟ್, ಧಾರವಾಡ
