ನವಕರ್ನಾಟಕ ಪ್ರಕಾಶನದ ರೂವಾರಿ, ಪ್ರಗತಿಪರ ಚಿಂತಕರಾದ ಆರ್. ಎಸ್. ರಾಜಾರಾಮ್ (83) ನಿಧನರಾಗಿದ್ದಾರೆ.
ನವಕರ್ನಾಟಕದ ಮುಖ್ಯಸ್ಥರಾಗಿದ್ದ ಎಸ್ ಆರ್ ಭಟ್ ನಿವೃತ್ತರಾದಾಗ 1972ರಲ್ಲಿ ರಾಜಾರಾಮ್ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾಗಿ ಅದರ ಚುಕ್ಕಾಣಿ ಹಿಡಿದರು. 2017ರಲ್ಲಿ ಹುದ್ದೆಯಿಂದ ನಿರ್ಗಮಿಸಿದ್ದರು.
ದಕ್ಷಿಣ ಕನ್ನಡದಲ್ಲಿ ಬಿ ವಿ ಕಕ್ಕಿಲ್ಲಾಯರ ಹೋರಾಟದ ರೀತಿಗೆ ಮಾರುಹೋಗಿದ್ದ ರಾಜಾರಾಮ್ ಅವರು ಪುತ್ತೂರಿನಲ್ಲಿ ರೈತ ಕಾರ್ಮಿಕರ ಸಂಘಟನೆ ಆರಂಭಿಸಿದ್ದರು.
ಇದನ್ನು ಓದಿದ್ದೀರಾ? ಕನ್ನಡೇತರರಿಗೆ ಕನ್ನಡ ಕಲಿಸುವುದು ಸುಲಭವಲ್ಲ, ಹಾಗೆಂದು ಕಷ್ಟವೂ ಅಲ್ಲ; ಬನ್ನಿ, ಎಲ್ಲರಿಗೂ ಕನ್ನಡ ಕಲಿಸೋಣ
ಅದಾದ ಬಳಿಕ ಬೆಂಗಳೂರಿನ ನವಕರ್ನಾಟಕವನ್ನು ಮುನ್ನಡೆಸಿದರು. ಜನಶಕ್ತಿ ಮುದ್ರಣಾಲಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ರಾಜಾರಾಮ್ ಅವರಿಗೆ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
‘ನವಕರ್ನಾಟಕ ಪ್ರಕಾಶನದ ರೂವಾರಿ ಆರ್.ಎಸ್. ರಾಜಾರಾಮ್’ ಮತ್ತು ಪರಂಜ್ಯೋತಿ ಸ್ವಮಿ ಬರೆದ ‘ಸೃಷ್ಟಿಯ ಸೆಲೆ ಆರ್.ಎಸ್. ರಾಜಾರಾಮ್ ಬದುಕು-ಸಾಧನೆ’ ಎಂಬ ಎರಡು ಪುಸ್ತಕಗಳು ಪ್ರಕಟಗೊಂಡಿದೆ.