ರಾಜ್ಯದ ಮುಸ್ಲಿಂ ಸಮುದಾಯದವರಿಗೆ ‘ಪ್ರತ್ಯೇಕ ಮೀಸಲಾತಿ’ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ(ಎನ್‌ಸಿಬಿಸಿ) ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ಜಾರಿಗೊಳಿಸಿದೆ.
ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಎನ್‌ಸಿಬಿಸಿ ಇಂತಹ ಪ್ರತ್ಯೇಕ ಮೀಸಲಾತಿಯನ್ನು ವರ್ಗೀಕರಿಸಿ ಸಂಪೂರ್ಣ ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗದಡಿ ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯ ತತ್ವವನ್ನು ದುರ್ಬಲಗೊಳಿಸುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಎನ್‌ಸಿಬಿಸಿ ಅಧ್ಯಕ್ಷ ಹನ್ಸ್‌ರಾಜ್ ಅಹೀರ್, ಸರ್ಕಾರವು ಕರ್ನಾಟಕದ ಮುಸ್ಲಿಂ ಧರ್ಮದ ಎಲ್ಲ ಜಾತಿಗಳು ಮತ್ತು ಸಮುದಾಯಗಳನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಾಗರಿಕರೆಂದು ಪರಿಗಣಿಸಲಾಗಿದೆ ಹಾಗೂ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕವಾಗಿ ರಾಜ್ಯ ಹಿಂದುಳಿದ ವರ್ಗಗಳ 2ಬಿ ಪ್ರವರ್ಗದಲ್ಲಿ ವರ್ಗೀಕರಿಸಲಾಗಿದೆ” ಎಂದು ಅಹೀರ್ ತಿಳಿಸಿದ್ದಾರೆ.
“ಈ ವರ್ಗೀಕರಣದಿಂದ ಆ ಸಮುದಾಯದವರು ಶೈಕ್ಷಣಿಕ ಸಂಸ್ಥೆಗಳ ಪ್ರವೇಶಗಳು ಹಾಗೂ ರಾಜ್ಯ ಸರ್ಕಾರಿ ಸೇವೆಗಳ ನೇಮಕಾತಿಯಲ್ಲಿ ಭಾರತ ಸಂವಿಧಾನದ ವಿಧಿ 15(4) ಹಾಗೂ 16(4)ರಡಿ ಮೀಸಲಾತಿಗೆ ಅರ್ಹರಾಗುತ್ತಾರೆ” ಎಂದು ಎನ್‌ಸಿಬಿಸಿ ಅಧ್ಯಕ್ಷರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದ್ವೇಷ -ವಿರಸ- ವೈಷಮ್ಯಗಳ ಮೇಲೆ ಮತಯಾಚನೆ ಪರಮವಿಕೃತಿ
ಮುಸ್ಲಿಂ ಸಮುದಾಯದಲ್ಲಿ ಹಿಂದುಳಿದವರು ಹಾಗೂ ತೀರ ಬಡತನದಲ್ಲಿರುವವರು ಇದ್ದರೂ ಸಂಪೂರ್ಣ ಸಮುದಾಯಕ್ಕೆ ಮೀಸಲಾತಿ ನೀಡುವುದು ಮುಸ್ಲಿಂ ಸಮುದಾಯಲ್ಲಿನ ವೈವಿದ್ಯತೆ ಹಾಗೂ ಸಂಕೀರ್ಣತೆಗಳಿಗೆ ಚ್ಯುತಿ ಉಂಟಾಗುತ್ತದೆ ಎಂದು ಎನ್‌ಸಿಬಿಸಿ ತಿಳಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆ ಪಡೆದರೂ ಅದು ತೃಪ್ತಿಕರವಾಗಿಲ್ಲ. ಆದ ಕಾರಣದಿಂದ ವಿವರಣೆ ನೀಡುವಂತೆ ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ನೀಡಲಾಗಿದೆ ಎಂದು ಎನ್‌ಸಿಬಿಸಿ ಅಧ್ಯಕ್ಷರು ಹೇಳಿದ್ದಾರೆ.
ಎನ್‌ಸಿಬಿಸಿ ಕಳೆದ ವರ್ಷದ ರಾಜ್ಯದ ಭೇಟಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿ ಸಮುದಾಯಕ್ಕೆ ನೀಡುವ ಕರ್ನಾಟಕ ಮೀಸಲಾತಿ ನೀತಿಯನ್ನು ಪರಿಶೀಲನೆಗೊಳಪಡಿಸಿತ್ತು.
2011ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯವು ಶೇ.12.92 ರಷ್ಟು ಪ್ರಾತಿನಿಧ್ಯ ಹೊಂದಿದೆ.
