ತಮಿಳುನಾಡಿಗೆ ಕರ್ನಾಟಕವು ಹರಿಸುತ್ತಿರುವ ಕಾವೇರಿ ನೀರು ಹರಿಸುತ್ತಿರುವ ಪ್ರಮಾಣ ತೃಪ್ತಿಕರ ಎಂದು ಅಭಿಪ್ರಾಯಪಟ್ಟಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ,ಹೊಸ ಆದೇಶ ನೀಡಲು ನಿರಾಕರಿಸಿದೆ.
ಪ್ರಾಧಿಕಾರದ 32ನೇ ಸಭೆ ನವದೆಹಲಿಯಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಗಳು ವಾದ ಮಂಡಿಸಿ, ‘ಜೂನ್‌ನಿಂದ ಜುಲೈ 22ರವರೆಗೆ ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಸಂಚಿತ ಒಳಹರಿವು 118 ಟಿಎಂಸಿ ಇದೆ. ಆದರೆ, ಇದೇ ಅವಧಿಯಲ್ಲಿ 30 ವರ್ಷಗಳ ಸರಾಸರಿ (1989-90 ರಿಂದ 2018-19) ಒಳಹರಿವು 98.679 ಟಿಎಂಸಿ’ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿಜಕ್ಕೂ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದು
‘ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಜುಲೈ 11ರಂದು ಶಿಫಾರಸು ಮಾಡಿತ್ತು. ನಾಲ್ಕು ಜಲಾಶಯಗಳ ಕೇವಲ ಶೇ 15.72 ವಿಸ್ತೀರ್ಣ ಪರಿಗಣಿಸಿ ಸಮಿತಿ ಈ ಸೂಚನೆ ನೀಡಿತ್ತು. ಜೂನ್‌ನಿಂದ ಜುಲೈ 12ರವರೆಗೆ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು. ಆದರೆ, ತಮಿಳುನಾಡಿನ ನದಿ ಮುಖಜ ಭೂಮಿಯಲ್ಲಿ ಉತ್ತಮ ಮಳೆಯಾಗಿತ್ತು. ತಮಿಳುನಾಡಿನ ಮೂರು ಜಲಾಶಯಗಳ ಜಲವರ್ಷದ ಅಂತ್ಯಕ್ಕೆ ಕ್ಯಾರಿ ಓವರ್ ಸಂಗ್ರಹ ಮತ್ತು ಜಲಾನಯನ ಪ್ರದೇಶದ ಜಲ ವಿಜ್ಞಾನ ಪರಿಸ್ಥಿತಿ ಪರಿಣಿಸಿ ಪ್ರಾಧಿಕಾರ ಹಾಗೂ ಸಮಿತಿ ಆದೇಶ ನೀಡಬೇಕು’ ಎಂದು ಆಗ್ರಹಿಸಿದರು.
ಕಾವೇರಿ ಜಲವಿವಾದ ನ್ಯಾಯಮಂಡಳಿಯ ಆದೇಶದ ಪ್ರಕಾರ ಕರ್ನಾಟಕವು ತಮಿಳುನಾಡಿಗೆ ನೀರು ಬಿಡದ ಕಾರಣ ಕುರುವೈ ಬೆಳೆಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಅಲ್ಲಿನ ರೈತರಿಗೆ ಪರಿಹಾರ ನೀಡಲಾಗುತ್ತಿದೆ ಎಂದು ತಮಿಳುನಾಡಿನ ಅಧಿಕಾರಿಗಳು ಪ್ರಾಧಿಕಾರದ ಗಮನಕ್ಕೆ ತಂದರು.
ಪ್ರಾಧಿಕಾರದ ಅಧಿಕಾರಿಗಳೇ ,ಈಗ ವರುಣನ ಕೃಪೆಯಿಂದ ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ ,ನೀರನ್ನು ಕರ್ನಾಟಕ ಹಿಡಿದು ಇಟ್ಟುಕೊಳ್ಳಲು ಸಾದ್ಯವೇ ?.ಮಳೆ ಬಂದಾಗ ಎಲ್ಲವೂ ಒ ಕೆ ,ಮಳೆ ಕೈ ಕೊಟ್ಟಾಗ ಸಂಕಷ್ಟದ ಸಮಯದಲ್ಲಿ ಇಲ್ಲೇ ನೀರು ಇಲ್ಲದಾಗ ಬೃಹಸ್ಪತಿಗಳಾದ ನೀವು ನೀರು ಬಿಡಿ ,ನೀರು ಬಿಡಿ ಅಂತ ಸೂಚನೆ ಕೊಟ್ಟರೆ ಎಲ್ಲಿಂದ ನೀರು ತರುವುದು .ಕುಡಿಯಲಿಕ್ಕೆ ನೀರು ಇಲ್ಲದಾಗ ,ತಮಿಳುನಾಡಿನ ಬೆಳೆಗಳಿಗೆ ನೀರು ಕೊಡಿ ಅಂತ ಹೇಳುತ್ತಿರಲ್ಲ ನಿಮಗೆ ವಿವೇಚನೆ ಬೇಡವೇ ?.