ಮಲೆನಾಡು, ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಮಾತ್ರವಲ್ಲದೆ, ಕರ್ನಾಟಕದ ಗಡಿಗೆ ಹೊಂದಿರುವ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ತೊರೆ, ನದಿಗಳು ತುಂಬಿ ಹರಿಯುತ್ತಿವೆ. ರಾಜ್ಯದ ಹಲವು ನದಿಗಳು ತುಂಬಿ ಹರಿಯುತ್ತಿದ್ದು, ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ.
ರಾಜ್ಯದ ಪ್ರಮುಖ ನದಿಗಳಲಾದ ತುಂಗಾಭದ್ರ, ಕೃಷ್ಣ, ಕಾವೇರಿ, ಹೇಮಾವತಿ, ಕಾಳಿ, ಮಲಪ್ರಭಾ, ಶರಾವತಿ ನದಿಗಳು ತುಂಬಿ ಹರಿಯುತ್ತಿವೆ. ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಅಣೆಕಟ್ಟುಗಳ ಪ್ರಸ್ತುತ ನೀರಿನ ಮಟ್ಟ ಹೀಗಿದೆ;
ಜಲಾಶಯಗಳು ಮತ್ತು ನೀರಿನ ಮಟ್ಟ | ||||||
ಪ್ರಮುಖ ಜಲಾಶಯಗಳು | ಗರಿಷ್ಠ ನೀರಿನ ಮಟ್ಟ (ಮೀ) | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ನೀರಿನ ಮಟ್ಟ (ಟಿಎಂಸಿ) | ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
ಆಲಮಟ್ಟಿ ಜಲಾಶಯ | 519.6 | 123.08 | 95.47 | 24.41 | 61683 | 17221 |
ತುಂಗಭದ್ರಾ ಜಲಾಶಯ | 497.71 | 105.79 | 35.47 | 9.51 | 28153 | 377 |
ಮಲಪ್ರಭಾ ಜಲಾಶಯ | 633.8 | 37.73 | 13.46 | 6.76 | 5865 | 194 |
ಕೆ.ಆರ್.ಎಸ್ | 38.04 | 49.45 | 29.38 | 15.51 | 25933 | 2289 |
ಲಿಂಗನಮಕ್ಕಿ ಜಲಾಶಯ | 554.44 | 151.75 | 58.37 | 23.54 | 77911 | 50.55 |
ಕಬಿನಿ ಜಲಾಶಯ | 696.13 | 19.52 | 18.47 | 11.78 | 22840 | 23333 |
ಭದ್ರಾ ಜಲಾಶಯ | 657.73 | 71.54 | 30.14 | 27.78 | 27839 | 166 |
ಘಟಪ್ರಭಾ ಜಲಾಶಯ | 662.91 | 51 | 27.85 | 6.9 | 15601 | 567 |
ಹೇಮಾವತಿ ಜಲಾಶಯ | 890.58 | 37.1 | 23.84 | 16.03 | 14027 | 250 |
ವರಾಹಿ ಜಲಾಶಯ | 594.36 | 31.1 | 8.7 | 4.69 | 10581 | 0 |
ಹಾರಂಗಿ ಜಲಾಶಯ | 871.38 | 8.5 | 6.55 | 4.55 | 12827 | 18750 |
ಸೂಫಾ | 564 | 145.33 | 8.7 | 4.69 | 10581 | 0 |
ನಾರಾಯಣಪುರ ಜಲಾಶಯ | 492.25 | 33.31 | 24.68 | 13.99 | 22621 | 205 |
ವಾಣಿವಿಲಾಸ ಸಾಗರ | 652.24 | 30.42 | 17.99 | 24.79 | 0 | 147 |
ಕಾವೇರಿ ನೀರು ಬಿಡದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆಯಂತೆ ತಮಿಳುನಾಡು ಸರ್ಕಾರ.
ಕಾವೇರಿ ತುಂಬಿ ತುಳುಕುತ್ತಿದೆ. ಉಕ್ಕಿ ಹರಿಯುತ್ತಿದೆ.
ತಮಿಳುನಾಡಿಗೆ ನೀರು ಬಿಡಲು ನಮಗೇನು ಕಷ್ಟ ?
ಬಿಟ್ಟರೆ ಕರ್ನಾಟಕಕ್ಕೇನು ನಷ್ಟ ?
ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರರು ಮತ್ತು ಸಹೋದರಿಯರು…!
ಸಹೋದರರು ಮತ್ತು ಸಹೋದರಿಯರಿಗೆ ಸಹಾಯ ಮಾಡುವುದರಲ್ಲಿ ತಪ್ಪೇನಿದೆ ?
ಮಾಡೋಣ ಸಹಾಯ ! ಮೆರೆಯೋಣ ಭಾತೃತ್ವ ! ಪಡೋಣ ಸಂತೋಷ !