ಹಿರಿಯ ಸರ್ವೋದಯ ಕಾರ್ಯಕರ್ತೆ ಚನ್ನಮ್ಮ ಹಳ್ಳಿಕೇರಿ ಅವರು ವಯೋಸಹಜ ಅನಾರೋಗ್ಯದಿಂದಾಗಿ ಬುಧವಾರ ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದವರಾದ ಚನ್ನಮ್ಮ ಅವರು ಮಹಾರಾಷ್ಟ್ರದ ವಾರ್ಧಾ ಬಳಿ ವಿನೋಬಾ ಭಾವೆಯವರು ಸ್ಥಾಪಿಸಿದ್ದ ಪೌನಾರ್ ಆಶ್ರಮದಲ್ಲಿ ವಾಸವಾಗಿದ್ದರು. ಅಲ್ಲಿಯೇ ನಿಧನರಾಗಿದ್ದಾರೆ. ಅವರಿಗೆ 92 ವರ್ಷವಾಗಿತ್ತು.
ಚನ್ನಮ್ಮ ಅವರು ವಿನೋಬಾ ಭಾವೆ ಮತ್ತು ಮಹಾತ್ಮಾ ಗಾಂಧೀಜಿ ಅವರೊಡನೆ ಭೂದಾನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಗಳೊಂದಿಗೆ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗಿಯಾಗಿ, ಜೈಲು-ವಾಸ ಅನುಭವಿಸಿದ್ದರು.
ಚನ್ನಮ್ಮ ಅವರಿಗೆ ಕರ್ನಾಟಕ ಸರ್ಕಾರದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ 2016 ರಲ್ಲಿ ದೊರೆತಿತ್ತು.