SIR | ಅನಿವಾಸಿ ಭಾರತೀಯರಿಗೆ ಆನ್‌ಲೈನ್ ವಿಚಾರಣೆಗೆ ಅವಕಾಶ ನೀಡಲು ಸಿಇಒಗೆ ‘ಜಾಗೃತ ಕರ್ನಾಟಕ’ ಆಗ್ರಹ

Date:

ಉದ್ಯೋಗ ಮತ್ತು ಇತರೆ ಕಾರಣಗಳಿಗಾಗಿ ವಿದೇಶದಲ್ಲಿ ನೆಲೆಸಿರುವ ರಾಜ್ಯದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ತಡೆಯಲು ಮುಖ್ಯ ಚುನಾವಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ‘ಜಾಗೃತ ಕರ್ನಾಟಕ’ ಮನವಿ ಮಾಡಿದೆ.

- Advertisement -

ಈ ಕುರಿತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಜಾಗೃತ ಕರ್ನಾಟಕ, ವಿದೇಶದಲ್ಲಿರುವ ಮತದಾರರಿಗೆ ಅನುಕೂಲವಾಗುವಂತೆ ವಿಶೇಷ ನಿಯಮಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಇದನ್ನೂ ಓದಿ: SIRನ ಎಲ್ಲಾ ಗೊಂದಲಗಳಿಗೆ ಜಾಗೃತ ಕರ್ನಾಟಕದ ʼಡಿಜಿಟಲ್ ಮಾರ್ಗದರ್ಶಿʼ

“ಮತದಾರರಿಗೆ ಆನ್‌ಲೈನ್ ಮೂಲಕ ಎನುಮರೇಷನ್‌ ಫಾರ್ಮ್ (ಮತದಾರರ ಪಟ್ಟಿ ವಿವರ) ಸಲ್ಲಿಸಲು ಅವಕಾಶ ನೀಡಿರುವುದು ಸ್ವಾಗತಾರ್ಹ. ಈ ಅವಕಾಶವನ್ನು ಬಳಸಿಕೊಂಡು ಅನೇಕ ಮತದಾರರು ಉದ್ಯೋಗಕ್ಕಾಗಿ ವಿದೇಶದಲ್ಲಿ ಇದ್ದಿದ್ದರಿಂದ ಅಲ್ಲಿಂದಲೇ ಎನುಮರೇಷನ್ ಫಾರಂ ಸಲ್ಲಿಸಿದ್ದರು, ಆದರೆ ನೋಟಿಸ್‌ ಬಂದ ನಂತರ ಖುದ್ದಾಗಿ ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗುವುದು ಉದ್ಯೋಗದ ನಿರ್ಬಂಧ, ಪ್ರಯಾಣ ವೆಚ್ಚ ಹಾಗೂ ಇತರ ಪ್ರಾಯೋಗಿಕ ಕಾರಣಗಳಿಂದ ಕಷ್ಟಕರವಾಗಿದೆ” ಎಂದು ತಿಳಿಸಿದೆ. ಹಾಗಾಗಿ, ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ.

“ವಿದೇಶದಲ್ಲಿರುವ ಮತದಾರರ ಪರವಾಗಿ ಅವರ ತಕ್ಷಣದ ಕುಟುಂಬ ಸದಸ್ಯರು/ಅಧಿಕೃತ ಪ್ರತಿನಿಧಿಗಳು ERO/AEROಗೆ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಬೇಕು. ಈ ಮತದಾರರು ವೀಡಿಯೋ ಕಾನ್ಫರೆನ್ಸ್/ಆನ್‌ಲೈನ್ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ಕಲ್ಪಿಸಬೇಕು. ಅಗತ್ಯ ದಾಖಲೆಗಳು ಮತ್ತು ಸ್ಪಷ್ಟೀಕರಣಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ನೀಡಬೇಕು. ದಾಖಲೆಗಳನ್ನು ಸಿದ್ಧಪಡಿಸಲು ನೀಡಿರುವ ಅವಧಿಯನ್ನು ಕನಿಷ್ಠ ಒಂದು ತಿಂಗಳಿಗೆ ವಿಸ್ತರಿಸಬೇಕು” ಎಂದು ಸಂಘಟನೆ ವಿವರಿಸಿದೆ.

ವಿದೇಶದಲ್ಲಿ ವಾಸಿಸುತ್ತಿರುವ ಕಾರಣಕ್ಕೆ ಯಾವುದೇ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ, ಮೇಲೆ ಹೇಳಿದ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಾಗೃತ ಕರ್ನಾಟಕ ಸಂಘಟನೆ ಮನವಿ ಮಾಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕತ್ತಲಲ್ಲಿ ಗುರುಗ್ರಾಮ್: ವಿದ್ಯುತ್‌ ಬಿಕ್ಕಟ್ಟಿನಿಂದ 1,800 ಕೈಗಾರಿಕೆಗಳ ಕೆಲಸ ಸ್ಥಗಿತ, ನೀರಿಗಾಗಿ ಜನರ ಪರದಾಟ

ಹರಿಯಾಣ ವಿದ್ಯುತ್ ಇಲಾಖೆಯ ನೌಕರರು ನಡೆಸುತ್ತಿರುವ ಮೂರು ದಿನಗಳ ಮುಷ್ಕರದಿಂದ ‌ಗುರುಗ್ರಾಮ್...

ದೆಹಲಿಯಲ್ಲಿ ಭುಗಿಲೆದ್ದ ಆಕ್ರೋಶ: ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರು

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಉದ್ದೇಶಪೂರ್ವಕವಾಗಿ...

ಚೀನಾ ವಿಚಾರದಲ್ಲಿ ಮೋದಿ ಮೌನ; ಕೇಂದ್ರದ ವಿರುದ್ಧ ಜೈರಾಮ್ ರಮೇಶ್ ತೀವ್ರ ವಾಗ್ದಾಳಿ

ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಸೇನೆಯೊಂದಿಗೆ ಮುಖಾಮುಖಿ ಸಂಘರ್ಷ ಮುಂದುವರಿದಿದೆ ಎಂದು...

ಐಫೋನ್‌ ಹ್ಯಾಕ್‌ನಿಂದ ಟ್ರಂಪ್ ಅಳಿಯನ ಬರೋಬ್ಬರಿ 31,500 ಕೋಟಿ ರೂ.ಗಳ ಬೃಹತ್ ಹಗರಣ ಬಯಲು!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್...