ನೈಋತ್ಯ ರೈಲ್ವೆಯಲ್ಲಿ ಮೇ ತಿಂಗಳು ದಾಖಲೆಯ ಆದಾಯ: 770.71 ಕೋಟಿ ರೂ. ಗಳಿಕೆ

Date:

ನೈಋತ್ಯ ರೈಲ್ವೆ 2026ರ ಮೇಯಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಆದಾಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ. ಈ ಅವಧಿಯಲ್ಲಿ ವಲಯವು ಒಟ್ಟು 4.4 ಮಿಲಿಯನ್ ಟನ್ ಸರಕು ಸಾಗಣೆ ನಡೆಸಿದ್ದು, ಇದು ಮೇ ತಿಂಗಳಲ್ಲಿನ ಇದುವರೆಗಿನ ಅತಿ ಹೆಚ್ಚು ಸಾಧನೆಯಾಗಿದೆ.

- Advertisement -

ಈ ಕುರಿತು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ‌.ಮಂಜುನಾಥ ಕನಮಡಿ ಪ್ರಕಟಣೆ ಹೊರಡಿಸಿದ್ದು, “ಸರಕು ಸಾಗಣೆಯಿಂದ 425 ಕೋಟಿ ರೂ. ಆದಾಯ ಗಳಿಸಲಾಗಿದೆ. ಪ್ರಯಾಣಿಕರ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, 302 ಕೋಟಿ ರೂ. ಆದಾಯ ದಾಖಲಿಸುವುದರ ಜತೆಗೆ 16.4 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದೆ. ಒಟ್ಟಾರೆ, ಮೇ ತಂಗಳಲ್ಲಿ ನೈಋತ್ಯ ರೈಲ್ವೆಯ ಒಟ್ಟು ಆದಾಯ 770.71 ಕೋಟಿ ರೂ.ಗಳಷ್ಟಾಗಿದೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ನೈಋತ್ಯ ರೈಲ್ವೆ 4.40 ಮಿಲಿಯನ್ ಟನ್ ಮೂಲ ಸರಕು ಸಾಗಣೆ ಮಾಡಿದ್ದು, ಇದು ಕಳೆದ ವರ್ಷದ ಇದೇ ಅವಧಿಯ 4.22 ಮಿಲಿಯನ್ ಟನ್‌ಗೆ ಹೋಲಿಸಿದರೆ 4.3% ಹೆಚ್ಚಾಗಿದೆ. ಅಲ್ಲದೆ, ಈ ಸಾಧನೆಯು 2008ರ ಮೇ ತಿಂಗಳಲ್ಲಿ ಸ್ಥಾಪಿತವಾದ 4.25 ಮಿಲಿಯನ್ ಟನ್ ದಾಖಲೆಯನ್ನು ಮೀರಿಸಿದೆ. ದಿನಕ್ಕೆ ಸರಾಸರಿ 2,275 ವ್ಯಾಗನ್‌ಗಳನ್ನು ಲೋಡ್ ಮಾಡಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 2,193 ವ್ಯಾಗನ್‌ಗಳಾಗಿತ್ತು, ಅಂದರೆ ಶೇ 3.7ರಷ್ಟು ಬೆಳವಣಿಗೆ ಕಂಡುಬಂದಿದೆ.

ಸರಕುಗಳ ವಿಭಾಗದಲ್ಲಿ, 1.766 ಮಿಲಿಯನ್ ಟನ್ ಕಬ್ಬಿಣದ ಅದಿರು, 0.921 ಮಿಲಿಯನ್ ಟನ್ ಉಕ್ಕು ಹಾಗೂ 0.108 ಮಿಲಿಯನ್ ಟನ್ ಕಚ್ಚಾ ವಸ್ತು ಸಾಮಗ್ರಿ ಸಾಗಿಸಲಾಗಿದೆ. ಕಲ್ಲಿದ್ದಲು ಲೋಡಿಂಗ್ 0.93 ಮಿಲಿಯನ್ ಟನ್‌ಗೆ ಏರಿಕೆಯಾಗಿದ್ದು, 2025ರ ಮೇ ತಿಂಗಳಲ್ಲಿ 0.76 ಮಿಲಿಯನ್ ಟನ್‌ಗೆ ಹೋಲಿಸಿದರೆ 23.3% ಗಣನೀಯ ಬೆಳವಣಿಗೆ ಕಂಡಿದೆ. ಆಹಾರ ಧಾನ್ಯಗಳ ಲೋಡಿಂಗ್ 0.022 ಮಿಲಿಯನ್ ಟನ್‌ಗಳಾಗಿದ್ದು, ಕಂಟೇನರ್ ಸಾಗಣೆ 0.09 ಮಿಲಿಯನ್ ಟನ್ ತಲುಪಿದೆ. ಕಳೆದ ವರ್ಷದ 0.07 ಮಿಲಿಯನ್ ಟನ್‌ಗೆ ಹೋಲಿಸಿದರೆ, ಈ ಬಾರಿ ಶೇ.16.9ರಷ್ಟು ಹೆಚ್ಚಳವಾಗಿದೆ. ಜತೆಗೆ, ಇತರೆ ಸರಕುಗಳ (BOG) ಲೋಡಿಂಗ್ 0.14 ಮಿಲಿಯನ್ ಟನ್‌ನಿಂದ 0.22 ಮಿಲಿಯನ್ ಟನ್‌ಗೆ ಏರಿಕೆಯಾಗಿದ್ದು, ಶೇ.56.3ರಷ್ಟು ಗಣನೀಯ ವೃದ್ಧಿಯನ್ನು ದಾಖಲಿಸಿದೆ.

ಆರ್ಥಿಕ ಕಾರ್ಯಕ್ಷಮತೆಯ ದೃಷ್ಟಿಯಿಂದ, 2026ರ ಮೇ ತಂಗಳಲ್ಲಿ ಒಟ್ಟು ಗಳಿಕೆ 770.71 ಕೋಟಿ ರೂ.ಗಳಾಗಿದ್ದು, ಪ್ರಯಾಣಿಕರ ಆದಾಯ 302.34 ಕೋಟಿ ರೂ.ಗಳಾಗಿ ಶೇ.21.37ರಷ್ಟು ಬೆಳವಣಿಗೆ ಕಂಡಿದೆ. ಪ್ರಯಾಣಿಕರ ಸಂಖ್ಯೆ 16.36 ಮಿಲಿಯನ್‌ಗೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕಿಂತ ಶೇ.6.72ರಷ್ಟು ಹೆಚ್ಚಳ ಹಾಗೂ ಗುರಿಯನ್ನು ಶೇ. 8.09ರಷ್ಟು ಮೀರಿದೆ. ಸರಕು ಸಾಗಣೆ ಆದಾಯ 425.67 ಕೋಟಿ ರೂ.ಗಳಾಗಿದ್ದು, ಇತರ ಕೋಚಿಂಗ್ ಆದಾಯ 26.10 ಕೋಟಿ ರೂ., ಪಾರ್ಸೆಲ್ ಆದಾಯ 13.82 ಕೋಟಿ ರೂ. ಹಾಗೂ ಇತರೆ ಆದಾಯ 16.60 ಕೋಟಿ ರೂ.ಗಳಾಗಿವೆ. ಟಿಕೆಟ್ ಪರಿಶೀಲನೆ ಆದಾಯ 5.53 ಕೋಟಿ ರೂ. ಮತ್ತು ವಾಣಿಜ್ಯ ಇತರ ಆದಾಯ 5.70 ಕೋಟಿ ರೂ.ಗಳಾಗಿದೆ.

ಇದನ್ನೂ ಓದಿದ್ದೀರಾ? ಬೀದರ್ | ಇಂಗ್ಲಿಷ್‌ನಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ

ಹಣಕಾಸು ವರ್ಷದ 2026ರ ಮೇವರೆಗಿನ ಅವಧಿಯಲ್ಲಿ ಸಂಚಿತ ಆದಾಯವು ಉತ್ತಮ ಪ್ರಗತಿ ಕಂಡಿದೆ. ಪ್ರಯಾಣಿಕರ ಆದಾಯ 609.68 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.16.2ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಸರಕು ಸಾಗಣೆ ಆದಾಯ 782.92 ಕೋಟಿ ರೂ.ಗೆ ತಲುಪಿದ್ದು, ಇತರ ಕೋಚಿಂಗ್ ಆದಾಯ 54.75 ಕೋಟಿ ರೂ. ಮತ್ತು ಇತರೆ ಆದಾಯ 34.11 ಕೋಟಿ ರೂ.ಗಳಾಗಿದೆ. ಈ ಅವಧಿಯ ಒಟ್ಟು ಆದಾಯ 1,481.46 ಕೋಟಿ ರೂ.ಗಳಾಗಿದ್ದು, ವಲಯದ ಒಟ್ಟಾರೆ ಆರ್ಥಿಕ ಸಾಧನೆ ಮಾಡಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ‌.ಮಂಜುನಾಥ ಕನಮಡಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನಗಣತಿಯಲ್ಲೂ ಆರೆಸ್ಸೆಸ್‌ ಹಸ್ತಕ್ಷೇಪದ ಆತಂಕ: ಕೇಂದ್ರದ ಹೊಸ ನಿಯಮಕ್ಕೆ ಕಾಂಗ್ರೆಸ್ ಆಕ್ಷೇಪ!

2027ರ ಜನಗಣತಿಗೆ ಗಣತಿದಾರರಾಗಿ ಕಾರ್ಯನಿರ್ವಹಿಸುವವರ ಅರ್ಹತಾ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿರುವುದು...

ಬಬಲೇಶ್ವರ ನಾಕಾ ರಸ್ತೆ ಕಾಮಗಾರಿ ವಿಳಂಬಕ್ಕೆ ಆಪ್ ಆಕ್ರೋಶ; ಪಾಲಿಕೆಗೆ ಒಂದು ವಾರ ಗಡುವು

ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬಬಲೇಶ್ವರ ನಾಕಾದಿಂದ ನಾಯರಾ ಪೆಟ್ರೋಲ್ ಪಂಪ್‌ವರೆಗಿನ ರಸ್ತೆಯ...

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...