ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಭವ್ಯ ಬಸವಜ್ಯೋತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಬಸವ ಸಮಿತಿ ಹಾಗೂ ಸಿದ್ದೇಶ್ವರ ಬ್ಯಾಂಕ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮತ್ತು ಗಣ್ಯರು ಪಾದಯಾತ್ರಿಗಳನ್ನು ಸ್ವಾಗತಿಸಿದರು.
ನಿನ್ನೆ ರಾತ್ರಿ ಬಸವನ ಬಾಗೇವಾಡಿಯಿಂದ ಆರಂಭಗೊಂಡ ಈ ಪಾದಯಾತ್ರೆಯು ಮಸಬಿನಾಳ, ಉಕ್ಕಲಿ, ಉಕುಮನಾಳ ಮಾರ್ಗವಾಗಿ ಸಾಗಿ ನಸುಕಿನ ಜಾವ ಶಿವಗಿರಿಗೆ ತಲುಪಿತು. ಈ ಸಂದರ್ಭದಲ್ಲಿ ಶಿವಗಿರಿ ಕ್ಷೇತ್ರದಲ್ಲಿ ಪಾದಯಾತ್ರಿಕರಿಗೆ ಸ್ವಾಗತ ಕೋರಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಪಾದಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಗ್ರಾಮಸ್ಥರು ಭಕ್ತಿಯಿಂದ ಪುಷ್ಪಗುಚ್ಚ ನೀಡಿ, ಬಸವಣ್ಣನವರ ಘೋಷಣೆಗಳನ್ನು ಕೂಗುತ್ತ ಅತ್ಯಂತ ಸಂಭ್ರಮದಿಂದ ಪಾದಯಾತ್ರಿಕರನ್ನು ಬರಮಾಡಿಕೊಂಡರು. ಪಾದಯಾತ್ರೆಯಲ್ಲಿ ಬೆಂಗಳೂರಿನ ಜಗದೀಶ ದಮನಿಯಾ, ಸಂದೀಪ ಡಿಯೋ, ಉಮಾಶಂಕರ ಮೆಳ್ಳಿಗೆರೆ, ಬಿ. ಎಸ್. ಸಜ್ಜನ, ಕೃಪಾಕರ, ಹುಬ್ಬಳ್ಳಿಯ ರೂಪಾ ಕಳ್ಳಿಗುಡ್ಡ ಹಾಗೂ ಡಾ. ಶಿಲ್ಪಾ ಚರಂತಿಮಠ ಇದ್ದರು.
ಇದನ್ನೂ ಓದಿ> ವಿಜಯಪುರ | ಕಾರ್ಮಿಕ ಹೋರಾಟಗಳ ಹತ್ತಿಕ್ಕುವ ಪ್ರಯತ್ನ; ಬಿಜೆಪಿ ಸರ್ಕಾರಗಳ ವಿರುದ್ಧ CITU ಆಕ್ರೋಶ
ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ, ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯರಾದ ಡಾ. ರಾಜು ಯಲಗೊಂಡ, ಡಾ. ಮಹಾಂತೇಶ ಹೊಸಮನಿ, ಡಾ. ಉದಯಕುಮಾರ ಜಾಧವ, ಸಚಿನ ಪಾಟೀಲ, ಡಾ. ಪ್ರವೀಣ ಚೌರ, ಡಾ. ಚೌಕಿಮಠ ಶಿವಕುಮಾರ, ಅಮೋಘ ಬಸನಾಳ, ಧ್ರುವ ಮಠ, ಸೋಮು ಮಠ, ಸಂದೀಪ ಮಡಗೊಂಡ, ಸತ್ಯ ವಿಜಯನ್, ಶಿವಾನಂದ ಯರನಾಳ, ಸಂಕೇತ ಬಗಲಿ, ಉಮೇಶ ಮೇಟಗಾರ, ನದೀಶ ಹುಂಡೇಕರ, ಶ್ರೀನಿವಾಸ, ವಿನಯ ಪಾಟೀಲ ಸೇರಿದಂತೆ ನೂರಾರು ಬಸವ ಅಭಿಮಾನಿಗಳು ಇದ್ದರು.





