ಚಿಕ್ಕಮಗಳೂರು ತಾಲೂಕಿನ ಹಳಿಯೂರು ಗ್ರಾಮದ ಧರ್ಮೇಶ್ ಎಂಬುವರ ಕಾಫಿ ತೋಟದಲ್ಲಿದ್ದ ಸುಮಾರು 20 ಅಡಿ ಎತ್ತರದ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ.
- Advertisement -
ಸಿಡಿಲು ಬಡಿದ ಸಂದರ್ಭದಲ್ಲಿ ಮರದ ತುದಿಯಿಂದ ಬುಡದವರೆಗೆ ಬೆಂಕಿ ವ್ಯಾಪಿಸಿದ್ದು, ಇಡೀ ಮರ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸಾಕು ನಾಯಿಗಳಿಂದ ದಾಳಿ; ಬಾಲಕ ಗಂಭೀರ ಗಾಯ
ಹತ್ತಾರು ವರ್ಷ ಹಳೆಯದಾದ ಈ ಮರ ಬೆಂಕಿಯುಂಡೆಯಂತೆ ಉರಿಯುತ್ತಿರುವ ಈ ಅಪರೂಪದ ದೃಶ್ಯವನ್ನು ಅಲ್ಲಿದ್ದವರು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.





