ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯು ಒಟ್ಟಾರೆಯಾಗಿ 17 ಕ್ರಮಗಳನ್ನು ಕೈಗೊಂಡಿದೆ. ಇನ್ನು ಕಲ್ಯಾಣ ಕರ್ನಾಟಕದಲ್ಲಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯು ಪ್ರತ್ಯೇಕ ವಿಶೇಷ ಕ್ರಮಗಳನ್ನು ಕೈಗೊಂಡಿದೆ.
ಇಂದು 2025-26ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ (SSLC Result) ಪ್ರಕಟವಾಗಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೇ.94.10 ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡರೆ ಉಡುಪಿ ಎರಡನೇ ಸ್ಥಾನದಲ್ಲಿದೆ. ಈ ನಡುವೆ ಯಾವುದೇ ಮಗು ಕಲಿಕೆಯಲ್ಲಿ ಹಿಂದುಳಿಯದಂತೆ ನೋಡಿಕೊಳ್ಳುವ ಉದ್ದೇಶದಿಂದ, ಎಸ್ಎಸ್ಎಲ್ಸಿ ಫಲಿತಾಂಶವನ್ನು ಸುಧಾರಿಸಲು ಶಿಕ್ಷಣ ಇಲಾಖೆಯು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ.
ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯು ಒಟ್ಟಾರೆಯಾಗಿ 17 ಕ್ರಮಗಳನ್ನು ಕೈಗೊಂಡಿದೆ. ಇನ್ನು ಕಲ್ಯಾಣ ಕರ್ನಾಟಕದಲ್ಲಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯು ಪ್ರತ್ಯೇಕ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಇನ್ನು ಫಲಿತಾಂಶ ಸುಧಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯೋಪಾಧ್ಯಾಯರು, ಬಿಇಒ, ಡಿಡಿಪಿಐ, ಸಿಇಒ, ಜಿಲ್ಲಾಧಿಕಾರಿಗಳಿಗೆ 29 ಅಂಶಗಳ ಸಮಗ್ರ ಸುತ್ತೋಲೆಯನ್ನೂ ಇಲಾಖೆ ಹೊರಡಿಸಿತ್ತು.
ಇದನ್ನು ಓದಿದ್ದೀರಾ? BREAKING NEWS | SSLC ಫಲಿತಾಂಶ ಪ್ರಕಟ: ಶೇ. 94.01 ವಿದ್ಯಾರ್ಥಿಗಳು ಉತ್ತೀರ್ಣ
- ಮುಖ್ಯಮಂತ್ರಿಯವರ ನಿರ್ದೇಶನ ಮತ್ತು ಬದ್ಧತೆ:
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಉನ್ನತ ಶಿಕ್ಷಣಕ್ಕೆ ಸೇತುವೆ ಮತ್ತು ಮಾನವ ಸಂಪನ್ಮೂಲದ ಮೂಲಾಧಾರ ಎಂದು ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ.
- ಮಹಾ ಪೋಷಕ-ಶಿಕ್ಷಕರ ಸಭೆ
ನವೆಂಬರ್ 14 ರಂದು ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಏಕಕಾಲದಲ್ಲಿ ಮೆಗಾ ಪಿಟಿಎಂ ನಡೆಸಲಾಗಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಮೇಲೆ ಕುಟುಂಬದ ಗಮನ ಹೆಚ್ಚಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ.
- ಅತಿಥಿ ಶಿಕ್ಷಕರ ನೇಮಕಾತಿ
ಶೈಕ್ಷಣಿಕ ವರ್ಷದ ಆರಂಭದಲ್ಲಿ (ಜೂನ್ 1 ರಿಂದಲೇ) ಅಗತ್ಯವಿರುವಷ್ಟು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಇದರಿಂದ ಬೋಧನೆಗೆ ಯಾವುದೇ ಅಡೆತಡೆಯಿಲ್ಲದಂತೆ ನೋಡಿಕೊಳ್ಳಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ನಿರಂತರ ಬೋಧನೆ ದೊರಕಿದೆ.
- 29 ಅಂಶಗಳ ಸಮಗ್ರ ಸುತ್ತೋಲೆ
ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ 29 ಅಂಶಗಳ ಮಾರ್ಗಸೂಚಿಯನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಸಿ.ಇ.ಒಗಳು ಇದರ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿದ್ದಾರೆ. ಡಿಸೆಂಬರ್ ಒಳಗಡೆ ಪಠ್ಯಕ್ರಮ ಪೂರ್ಣಗೊಳಿಸುವಿಕೆ, ವಿದ್ಯಾರ್ಥಿಗಳ ವರ್ಗೀಕರಣ (ಉತ್ತಮ / ಸರಾಸರಿ / ಕಡಿಮೆ), ಹೆಚ್ಚುವರಿ ತರಗತಿಗಳನ್ನು ನಡೆಸುವುದು, ಮಾನಸಿಕ ಆರೋಗ್ಯದ ಕಡೆ ಗಮನ, ಮೊಬೈಲ್ ಮತ್ತು ಸೋಷಿಯಲ್ ಮೀಡಿಯಾ ಬಳಕೆ ನಿಯಂತ್ರಣ, ವೃತ್ತಿ ಮಾರ್ಗದರ್ಶನ,
ಪಾಠವಾರು ಪರೀಕ್ಷೆಗಳು, ನಿರಂತರ ಮೌಲ್ಯಮಾಪನ, ಪರೀಕ್ಷೆಯಲ್ಲಿ ಪಾರದರ್ಶಕತೆ (ವೆಬ್ಕಾಸ್ಟಿಂಗ್) ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.
- ನಿರಂತರ ಕಲಿಕೆ ಮತ್ತು ಪಾಠ ಆಧಾರಿತ ಮೌಲ್ಯಮಾಪನ
ಪಾಠ ಆಧಾರಿತ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಅಂತರ ಗುರುತಿಸಲಾಗಿದೆ. ತಕ್ಷಣ ಶೈಕ್ಷಣಿಕ ಬೆಂಬಲ ನೀಡಲಾಗಿದೆ. ನಿರಂತರ ಮೌಲ್ಯಮಾಪನ ವ್ಯವಸ್ಥೆ ಬಲಪಡಿಸಲಾಗಿದೆ.
- ಪಠ್ಯಕ್ರಮ ಪೂರ್ಣಗೊಳಿಸುವಿಕೆ
ಎಲ್ಲಾ ಶಾಲೆಗಳಿಗೆ ಡಿಸೆಂಬರ್ ಒಳಗೆ ಪಠ್ಯಕ್ರಮ ಪೂರ್ಣಗೊಳಿಸಲು ಸೂಚನೆ ನೀಡಲಾಗಿತ್ತು. ಇದರಿಂದಾಗಿ ಪುನರಾವರ್ತನೆಗೆ ಸಾಕಷ್ಟು ಸಮಯ ಸಿಕ್ಕಿದೆ.
- SSLC ವಿದ್ಯಾರ್ಥಿ ಕಾರ್ನರ್
KSEAB ವೆಬ್ಸೈಟ್ನಲ್ಲಿ “Student Corner” ಪ್ರಾರಂಭಿಸಲಾಗಿದೆ. ಇದರಲ್ಲಿ ವಿಷಯವಾರು ನೀಲನಕ್ಷೆ, ಮಾದರಿ ಪ್ರಶ್ನೆಪತ್ರಿಕೆಗಳು, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು, ಉತ್ತರ ಕೀ ಮೊದಲಾದ ಮಾಹಿತಿಗಳನ್ನು ನೀಡಲಾಗಿತ್ತು.
- ಪರೀಕ್ಷಾ ವೇಳಾಪಟ್ಟಿ ಮುಂಚಿತ ಪ್ರಕಟಣೆ
ಸಿದ್ಧತೆಗಾಗಿ ಮತ್ತು ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ಅಂತಿಮ ಪರೀಕ್ಷೆ 1 ಮತ್ತು 2 ರ ವೇಳಾಪಟ್ಟಿಯನ್ನು ಸಾಕಷ್ಟು ಮೊದಲೇ ಪ್ರಕಟಿಸಲಾಗಿದೆ. ಇದು ಫಲಿತಾಂಶ ಸುಧಾರಣೆಗೆ ಸಹಕಾರಿಯಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಓದುವುದನ್ನು ಸರಿಯಾಗಿ ಯೋಜಿಸಿಕೊಳ್ಳಲು ಸಾಧ್ಯವಾಗಿದೆ.
- ಪ್ರಗತಿ ಪರಿಶೀಲನಾ ಸಭೆಗಳು
ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ನಿಯಮಿತ ಸಭೆಗಳು ನಡೆಸಲಾಗಿದೆ. ಇದರ ಮೂಲಕ ಫಲಿತಾಂಶ ಸುಧಾರಣೆ ಮೇಲೆ ನಿಗಾ ಇಡಲಾಗಿದೆ. ಕೈಗೊಳ್ಳುತ್ತಿರುವ ಕ್ರಮಗಳು ಸರಿಯಾದ ರೀತಿಯಲ್ಲಿ ಜಾರಿಯಾಗುತ್ತಿದೆಯೇ ಎಂದು ಈ ಮೂಲಕ ಪರಿಶೀಲಿಸಲಾಗಿದೆ.
- ಪರಿಶೀಲನಾ ಕಾರ್ಯಾಗಾರಗಳು
ಎಸ್ಎಸ್ಎಲ್ಸಿ (SSLC) ಫಲಿತಾಂಶ ಸುಧಾರಣೆಯ ಕುರಿತು ಕೆ.ಎಸ್.ಇ.ಎ.ಬಿ (KSEAB) ಮತ್ತು ಡಿ.ಎಸ್.ಇ.ಆರ್.ಟಿ (DSERT) ವತಿಯಿಂದ ಎಲ್ಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗಾಗಿ ವಿಭಾಗ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗಿದೆ.
- ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ (DIETS) ಎಲ್ಲಾ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸಾಮರ್ಥ್ಯ ವರ್ಧನೆ ತರಬೇತಿ ಆಯೋಜಿಸಲಾಗಿತ್ತು. ಈ ತರಬೇತಿ ಅವಧಿಗಳಲ್ಲಿ ಬೋಧನಾ ವಿಧಾನಗಳ ಸುಧಾರಣೆ ಮತ್ತು ಪರಿಣಾಮಕಾರಿ ತರಗತಿ ಸಂವಹನದ ಮೇಲೆ ಹೆಚ್ಚು ಗಮನ ಹರಿಸಲಾಗಿತ್ತು.
- ಡಿ.ಎಸ್.ಇ.ಆರ್.ಟಿ (DSERT) ಮೂಲಕ ವಿಶೇಷ ಆನ್ಲೈನ್ ತರಬೇತಿ
ಪ್ರಶ್ನೆ ಕೋಠಿಗಳು ಮತ್ತು ನೀಲ ನಕ್ಷೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡಲು ಡಿ.ಎಸ್.ಇ.ಆರ್.ಟಿ ಮೂಲಕ ವಿಶೇಷ ಆನ್ಲೈನ್ ತರಬೇತಿಯನ್ನು ಆಯೋಜಿಸಲಾಗಿತ್ತು. ಈ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಬಗ್ಗೆಯೂ ಸಹ ಒತ್ತು ನೀಡಲಾಯಿತು.
- ಎಸ್ಎಸ್ಎಲ್ಸಿ ಸುಧಾರಣೆಗಾಗಿ ರಾಜ್ಯ ಮಟ್ಟದ ಪೂರ್ವಸಿದ್ದತಾ ಪರೀಕ್ಷೆಗಳು:
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರೀಕೃತವಾಗಿ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಗಳನ್ನು ಬಳಸಿ ಮೂರು ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಯಿತು. ಇದು ಮೌಲ್ಯಮಾಪನದಲ್ಲಿ ಏಕರೂಪತೆಯನ್ನು ತರಲು ಮತ್ತು ವಿದ್ಯಾರ್ಥಿಗಳಿಗೆ ಮಂಡಳಿಯ ಪರೀಕ್ಷಾ ವಿಧಾನದ ಪರಿಚಯ ಮಾಡಿಕೊಡಲು ಸಹಕಾರಿಯಾಯಿತು.
ಪರೀಕ್ಷೆ 1: 05-01-2026 ರಿಂದ 10-01-2026
ಪರೀಕ್ಷೆ 2: 27-01-2026 ರಿಂದ 02-02-2026
ಪರೀಕ್ಷೆ 3: 23-02-2026 ರಿಂದ 28-02-2026
- ದತ್ತಾಂಶ ಆಧಾರಿತ ಕ್ರಮಗಳು
ಮೂರೂ ಪೂರ್ವಸಿದ್ಧತಾ ಪರೀಕ್ಷೆಗಳ ಸಾಧನೆಯ ದತ್ತಾಂಶದ ಆಧಾರದ ಮೇಲೆ, ಗುರಿ ಆಧಾರಿತ ಫಲಿತಾಂಶ ಸುಧಾರಣೆಗಾಗಿ ಏಕರೂಪದ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು. ವಿದ್ಯಾರ್ಥಿವಾರು ಮತ್ತು ವಿಷಯವಾರು ದತ್ತಾಂಶವನ್ನು ಮುಖ್ಯ ಶಿಕ್ಷಕರಿಗೆ/ಮತ್ತು ಉಪಪ್ರಾಂಶುಪಾಲರಿಗೆ ಒದಗಿಸುವ ಮೂಲಕ ವಿಷಯವಾರು ಅನುಸರಣೆಯ ಮೇಲೆ ವಿಶೇಷ ಗಮನ ಹರಿಸಲು ಕ್ರಮ ಕೈಗೊಳ್ಳಲಾಯಿತು.
- ಆಡಿಯೋ/ವಿಡಿಯೋ ಕಾನ್ಸರೆನ್ಸ್ ಮೂಲಕ ರಾಜ್ಯಾದ್ಯಂತ ಶೈಕ್ಷಣಿಕ ಮೇಲ್ವಿಚಾರಣೆ:
ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಲು ಮತ್ತು ಎಸ್ಎಸ್ಎಲ್ಸಿ ಸಿದ್ಧತೆಯನ್ನು ಮೇಲ್ವಿಚಾರಣೆ ಮಾಡಲು ಸೆಪ್ಟೆಂಬರ್ ತಿಂಗಳಿನಿಂದಲೇ ವಿವಿಧ ಹಂತಗಳಲ್ಲಿ ನಿಯಮಿತವಾಗಿ ಆಡಿಯೋ ಮತ್ತು ವಿಡಿಯೋ ಸಂವಾದಗಳನ್ನು (Conferences) ನಡೆಸಲಾಯಿತು.
- ಪರೀಕ್ಷಾ ಸಿದ್ದತಾ ಪ್ರಕ್ರಿಯೆಯಲ್ಲಿ ಸಮುದಾಯ ಸಹಭಾಗಿತ್ವ
ಪರೀಕ್ಷಾ ಸಿದ್ಧತಾ ಪ್ರಕ್ರಿಯೆಯು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ (SDMCS) ಮಾರ್ಗದರ್ಶನದಲ್ಲಿ ಒಂದು ಸಮುದಾಯ ಚಟುವಟಿಕೆಯಾಗಿ ನಡೆಯಿತು. ಅನೇಕ ಎಸ್ಡಿಎಂಸಿಗಳು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಿದ್ದವು. ವಿಶೇಷ ತರಗತಿಗಳ ನಂತರ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ತಲುಪಲು ಸಾರಿಗೆ ಸೌಲಭ್ಯವನ್ನು ಒದಗಿಸಿದ್ದವು ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬಿದವು. ಈ ಅವಧಿಯಲ್ಲಿ ಸಂಜೆಯ ವೇಳೆ ಅನೇಕ ಹಳ್ಳಿಗಳಲ್ಲಿ ಟಿವಿ ವೀಕ್ಷಣೆ ರಹಿತ ಅವಧಿ’ಯನ್ನು (No TV hours) ಪಾಲಿಸಲಾಯಿತು.
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗೊಳ್ಳಲಾದ ವಿಶೇಷ ಕ್ರಮಗಳು
ಕಲಬುರಗಿ ವಿಭಾಗದ ಅಪರ ಆಯುಕ್ತರ (ACPI) ಮೇಲ್ವಿಚಾರಣೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶಗಳನ್ನು ಸುಧಾರಿಸಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷ ಕ್ರಮಗಳು ಕೈಗೊಳ್ಳಲಾಗಿದೆ.





