‌ವ್ಯಕ್ತಿಚಿತ್ರ | ’31 ದಿನಗಳ ದೊರೆ’ ನಾದೆಂಡ್ಲ ಭಾಸ್ಕರ್‌ ರಾವ್!

Date:

1984ರಲ್ಲಿ ಮುಖ್ಯಮಂತ್ರಿ ಎನ್‌ಟಿಆರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ಸಂದರ್ಭದ ಲಾಭ ಪಡೆದ ಅವರ ಆಪ್ತ ನಾದೆಂಡ್ಲ ಭಾಸ್ಕರ ರಾವ್, ಟಿಡಿಪಿಯ ಕೆಲ ಶಾಸಕರನ್ನು ಸೆಳೆದು, ಕಾಂಗ್ರೆಸ್‌ನ ಬಾಹ್ಯ ಬೆಂಬಲ ಪಡೆದರು. ಇಂದಿರಾ ಗಾಂಧಿ ಮತ್ತು ರಾಜ್ಯಪಾಲ ರಾಮ್ ಲಾಲ್, ಎನ್‌ಟಿಆರ್ ಸರ್ಕಾರವನ್ನು ವಜಾಗೊಳಿಸಿ, ನಾದೆಂಡ್ಲ ಭಾಸ್ಕರ ರಾವ್‌ಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರು. ಆದರೆ, ಸಮಾಜದಲ್ಲಿ 'ನಾದೆಂಡ್ಲ' ಎನ್ನುವ ಹೆಸರು ದ್ರೋಹದ ಸಂಕೇತವಾಗಿ ಇತಿಹಾಸದ ಪುಟಗಳಲ್ಲಿ ಸೇರಿಹೋಯಿತು.

ನಾದೆಂಡ್ಲ ಭಾಸ್ಕರ ರಾವ್ ಅವರು ಆಂಧ್ರ ಸೀಮೆ ಕಂಡ 31 ದಿನಗಳ ಸಿಎಂ. 1935ರ ಜೂನ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಿರಂಗಿಪುರಂನಲ್ಲಿ ಜನಿಸಿದರು. ವೃತ್ತಿಯಿಂದ ವಕೀಲರಾಗಿದ್ದ ಅವರು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು. ರಾಜಕೀಯಕ್ಕೆ ಬರುವ ಮುನ್ನ ಹೈದರಾಬಾದ್ ಉಚ್ಚ ನ್ಯಾಯಾಲಯದಲ್ಲಿ ಯಶಸ್ವಿ ವಕೀಲರಾಗಿ ಗುರುತಿಸಿಕೊಂಡಿದ್ದ ಭಾಸ್ಕರ್‌ ರಾವ್, ನ್ಯಾಯಾಂಗ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಪರಿಣಿತರಿದ್ದರು.

- Advertisement -

ಅವರ ಹಿರಿಯ ಮಗ ನಾದೆಂಡ್ಲ ಮನೋಹರ್ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಸಂಯೋಜಿತ ಆಂಧ್ರಪ್ರದೇಶದ ವಿಧಾನಸಭೆಯ ಕೊನೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಭಾಸ್ಕರ್ ರಾವ್ ತಮ್ಮ ಕೊನೆಯ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರವಿದ್ದರು. ಅವರು ಕೇವಲ 31 ದಿನಗಳ ಮುಖ್ಯಮಂತ್ರಿಯಾದ ಇತಿಹಾಸ ಒಂದು ರೋಚಕ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ತೆಲುಗು ರಾಜಕಾರಣದ ಇತಿಹಾಸದಲ್ಲಿ ನಾದೆಂಡ್ಲ ಭಾಸ್ಕರ ರಾವ್ ಎನ್ನುವ ಹೆಸರು ಅಧಿಕಾರ ರಾಜಕಾರಣದ ಅತ್ಯಂತ ಚರ್ಚಿತ ಅಧ್ಯಾಯಗಳಲ್ಲಿ ಒಂದು. 1977ರ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದರೂ, ಇಡೀ ದಕ್ಷಿಣ ಭಾರತ ಮಾತ್ರ ಇಂದಿರಾ ಗಾಂಧಿಯವರ ಪರವಾಗಿ ನಿಂತಿತ್ತು. ಈ ಭದ್ರಕೋಟೆ ಅಲುಗಾಡಲು ಶುರುವಾದದ್ದು 80ರ ದಶಕದ ಆರಂಭದಲ್ಲಿ. ಆಗ ಹುಟ್ಟಿಕೊಂಡ ಪ್ರಾದೇಶಿಕ ಅಸ್ಮಿತೆಗಳು ಕಾಂಗ್ರೆಸ್‌ ಹಾಗೂ ಇಂದಿರಾಗಾಂಧಿಯವರ ಭದ್ರ ಬುನಾದಿಯನ್ನ ಇಂಚಿಂಚಾಗಿ ಸಡಿಲಗೊಳಿಸಿತು. ಕೇರಳ ಮತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್ಸೇತರ ಧ್ರುವೀಕರಣ ಆರಂಭವಾಗಿದ್ದ ಕಾಲವದು. ಇದೇ ಹೊತ್ತಿನಲ್ಲಿ ಆಂಧ್ರಪ್ರದೇಶದ ರಾಜಕೀಯ ರಂಗಕ್ಕೆ ಕಾಲಿಟ್ಟವರು ತೆಲುಗು ಜನಪ್ರಿಯ ನಟ ಎನ್.ಟಿ. ರಾಮರಾವ್. ಕಾಂಗ್ರೆಸ್ ವಿರುದ್ಧ ರಾಜ್ಯದಲ್ಲಿ ಸೃಷ್ಟಿಯಾಗಿದ್ದ ಅತೃಪ್ತಿಯನ್ನು ಅರಿತ ಎನ್.ಟಿ.ಆರ್, 1982ರಲ್ಲಿ ‘ತೆಲುಗು ದೇಶಂ ಪಕ್ಷ’ ಕಟ್ಟಿದರು. ಟಿಡಿಪಿ ಉದಯದ ಹಿಂದೆ ಸಂಘಟನಾತ್ಮಕ ಶಕ್ತಿಯಾಗಿ ನಿಂತಿದ್ದವರು ಇದೇ ನಾದೆಂಡ್ಲ ಭಾಸ್ಕರ ರಾವ್.

image 2026 04 23T133827.474
ಎನ್‌ಟಿಆರ್

ವೃತ್ತಿಯಿಂದ ವಕೀಲರಾಗಿದ್ದ ಅವರು, ಎನ್.ಟಿ.ಆರ್ ಅವರ ಆಪ್ತ ಸಲಹೆಗಾರರಾಗಿ ಪಕ್ಷ ಕಟ್ಟುವಲ್ಲಿ ಯಶಸ್ವಿಯಾದರು. 1983ರ ಚುನಾವಣೆಯಲ್ಲಿ ಟಿಡಿಪಿ ಅಭೂತಪೂರ್ವ ಬಹುಮತದೊಂದಿಗೆ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಆಂಧ್ರದಲ್ಲಿ ರಚಿಸಿತು. ಎನ್‌ಟಿಆರ್‌ ಮುಖ್ಯಮಂತ್ರಿಯಾದರು. ಈ ಯಶಸ್ಸಿನ ಬೆನ್ನಲ್ಲೇ ಅಧಿಕಾರದ ಹಪಾಹಪಿಯೂ ಶುರುವಾಯಿತು. ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕಲು ಕಾಯುತ್ತಿದ್ದ ಕೇಂದ್ರದ ಇಂದಿರಾ ಗಾಂಧಿ ಸರ್ಕಾರಕ್ಕೆ ನಾದೆಂಡ್ಲ ಭಾಸ್ಕರ ರಾವ್ ಅವರ ಸಂಚು ಹಾಗೂ ಅಧಿಕಾರ ಹಿಡಿಯಬೇಕೆಂಬ ಮಹತ್ವಾಕಾಂಕ್ಷೆ ಒಂದು ಅಸ್ತ್ರವಾಗಿ ಸಿಕ್ಕಿತು.

1984ರ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಎನ್‌ಟಿಆರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹೃದಯದ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದರು. ಭಾಸ್ಕರ್‌ ರಾವ್‌ ಬಣ ಇದೇ ಸಂದರ್ಭವನ್ನು ಅವರ ವಿರುದ್ಧ ಸಂಚು ರೂಪಿಸಲು ಬಳಸಿಕೊಂಡಿತು. ಎನ್‌ಟಿಆರ್ ವಿದೇಶದಲ್ಲಿದ್ದ ಸಮಯದಲ್ಲಿ ನಾದೆಂಡ್ಲ ಭಾಸ್ಕರ ರಾವ್ ಟಿಡಿಪಿಯ ಕೆಲವು ಶಾಸಕರನ್ನು ತಮ್ಮತ್ತ ಸೆಳೆದುಕೊಂಡು ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ಬಂಡಾಯವೆದ್ದರು. ಅಂದಿಗೆ ಇಂದಿರಾಗಾಂಧಿಯವರ ತಾಳಕ್ಕೆ ಕುಣಿಯುತ್ತಿದ್ದ ರಾಜ್ಯಪಾಲ ರಾಮ್ ಲಾಲ್ ಅವರು ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ, ಬಹುಮತ ಹೊಂದಿದ್ದ ಎನ್‌ಟಿಆರ್ ಸರ್ಕಾರವನ್ನು ವಜಾಗೊಳಿಸಿ ನಾದೆಂಡ್ಲ ಭಾಸ್ಕರ ರಾವ್ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿ ಪ್ರಮಾಣವಚನ ಬೋಧಿಸಿದರು. ಸಚಿವ ಸಂಪುಟದ ಬಲ ಪರೀಕ್ಷೆಗೆ ಸಿದ್ಧವಿದ್ದೇವೆ ಎಂಬ ಮಾತಿಗೂ ಕಿಮ್ಮತ್ತು ಕೊಡದೇ ಸರ್ಕಾರವನ್ನು ಕಿತ್ತೊಗೆದರು. ಅಂದು ರಾಜೀವ್ ಗಾಂಧಿಯವರು ತಂದ ‘ಪಕ್ಷಾಂತರ ನಿಷೇಧ ಕಾಯ್ದೆ’ (1985) ಇನ್ನೂ ಜಾರಿಗೆ ಬಂದಿರದ ಕಾರಣ, ಈ ಅಧಿಕಾರ ಕಸಿಯುವ ಪ್ರಕ್ರಿಯೆ ಕಾನೂನಿನ ಸಂಕೋಲೆಗಳಿಲ್ಲದೆ ಸುಲಭವಾಗಿ ನಡೆದುಹೋಯಿತು.

ಈ ರಾಜಕೀಯ ದ್ರೋಹದ ವಿರುದ್ಧ ಇಡೀ ಆಂಧ್ರಪ್ರದೇಶ ಪ್ರಕ್ಷುಬ್ಧಗೊಂಡಿತು. ಮುಖ್ಯಮಂತ್ರಿಯೊಬ್ಬರು ಅನಾರೋಗ್ಯದಿಂದ ವಿದೇಶದಲ್ಲಿದ್ದಾಗ ಅವರ ಬೆನ್ನಿಗೆ ಚೂರಿ ಹಾಕಿದ ನಾದೆಂಡ್ಲ ಅವರ ನಡೆಗೆ ಜನರ ಆಕ್ರೋಶ ಕಟ್ಟೆಯೊಡೆಯಿತು. ರಾಜ್ಯಾದ್ಯಂತ ಬೀದಿಗಿಳಿದ ಜನ ಬೃಹತ್ ಪ್ರತಿಭಟನೆಗಳನ್ನು ನಡೆಸಿದರು. ಇದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಹಲ್ಲೆಯಾಗಿ ಜನರಿಗೆ ಕಂಡಿತು. ಇತ್ತ ವಿದೇಶದಿಂದ ಚಿಕಿತ್ಸೆ ಪಡೆದು ಹಿಂದಿರುಗಿದ ಎನ್‌ಟಿಆರ್‌, ಬರುವಾಗಲೇ ಕಪ್ಪು ಪಟ್ಟಿ ಧರಿಸಿ, ಗಾಲಿಕುರ್ಚಿಯಲ್ಲೇ ಕುಳಿತು ತಮ್ಮ ಬೆಂಬಲಿಗ ಶಾಸಕರೊಂದಿಗೆ ರಾಷ್ಟ್ರಪತಿಗಳವರೆಗೆ ಪರೇಡ್ ನಡೆಸಿ ತಮ್ಮ ಬಲ ಪ್ರದರ್ಶಿಸಿದರು. ಜನರ ಆಕ್ರೋಶಕ್ಕೆ ಬೆದರಿದ ಕೇಂದ್ರ ಸರ್ಕಾರ ಕೊನೆಗೆ ನಾದೆಂಡ್ಲ ಅವರನ್ನು ಇಳಿಸಿ, ಕೇವಲ 31 ದಿನಗಳ ನಂತರ ಮತ್ತೆ ಎನ್‌ಟಿಆರ್‌ ಅವರಿಗೆ ಅಧಿಕಾರ ನೀಡಬೇಕಾಯಿತು.‌

image 2026 04 23T134034.612

ಇದನ್ನೂ ಓದಿ: ಧರ್ಮದ ವಿಮರ್ಶೆಗೆ ‘ಭಕ್ತಿ’ ಅನಿವಾರ್ಯವೇ? ನಂಬಿಕೆ V/s ಹಕ್ಕುಗಳ ನಡುವೆ ಸುಪ್ರೀಂ ಸಂಘರ್ಷ

ಈ ಘಟನೆಯ ನಂತರ ನಾದೆಂಡ್ಲ ಭಾಸ್ಕರ ರಾವ್ ಅವರು ರಾಜಕಾರಣದಲ್ಲಿ ಖಳನಾಯಕರಾಗಿ ಗುರುತಿಸಲ್ಪಟ್ಟರು. ಸಮಾಜದಲ್ಲಿ ‘ನಾದೆಂಡ್ಲ’ ಎನ್ನುವ ಹೆಸರೇ ದ್ರೋಹದ ಸಂಕೇತವಾಗಿ ಬಳಕೆಯಾಗುವಷ್ಟು ತೆಲುಗು ಜನರ ಮನಸ್ಸಿನಲ್ಲಿ ತಿರಸ್ಕಾರ ಉಂಟಾಯಿತು. ನಂತರ ಅವರು ಕಾಂಗ್ರೆಸ್ ಸೇರಿ ಲೋಕಸಭೆ ಪ್ರವೇಶಿಸಿದರೂ, ಆ ಕಪ್ಪುಚುಕ್ಕೆಯನ್ನು ತೊಡೆದುಹಾಕಲು ಅವರಿಂದ ಸಾಧ್ಯವಾಗಲಿಲ್ಲ. 1984ರ ಅಕ್ಟೋಬರ್‌ 31ರಂದು ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಅವರ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಅನುಕಂಪದ ಅಲೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ 404 (ಉಪಚುನಾವಣೆಗಳ ನಂತರ ಈ ಸಂಖ್ಯೆ 414ಕ್ಕೆ ಏರಿತು) ಸ್ಥಾನಗಳನ್ನು ಗೆದ್ದುಕೊಂಡಿತು. ಆದರೂ ಆಂಧ್ರದಲ್ಲಿ ಟಿಡಿಪಿ ತನ್ನ ಶಕ್ತಿ ಉಳಿಸಿಕೊಂಡು ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಆಂಧ್ರದ ಒಟ್ಟು 42 ಸೀಟುಗಳ ಪೈಕಿ 31ರಲ್ಲಿ ಟಿಡಿಪಿ ಗೆದ್ದು ಬೀಗಿತ್ತು. ಟಿಡಿಪಿಯ ಉಪೇಂದ್ರ ಪ್ರತಿಪಕ್ಷಗಳ ನಾಯಕರೂ ಆದರು.

ನಾದೆಂಡ್ಲ ಭಾಸ್ಕರ ರಾವ್ ಅವರ ಅಂದಿನ ನಡೆ, ಭಾರತೀಯ ರಾಜಕಾರಣದಲ್ಲಿ ಜನಬಲದ ಮುಂದೆ ರಾಜಕೀಯ ತಂತ್ರಗಳು ಮತ್ತು ಅಧಿಕಾರದಾಹ ಹೇಗೆ ಸೋಲುತ್ತವೆ ಎನ್ನುವುದಕ್ಕೆ ಇಂದಿಗೂ ಒಂದು ಜೀವಂತ ನಿದರ್ಶನ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...

ಶಿವಮೊಗ್ಗ | ಗಾಂಜಾ ಮಾರಾಟ ಆರೋಪ: ಐವರು ಅರೆಸ್ಟ್‌, 1.23 ಕೆಜಿ ಮಾದಕ ವಸ್ತು ಜಪ್ತಿ

ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ...