ಎರಡು ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಸಾತ್ವಿಕ್ ಮುಜಗೊಂಡ ತೆರೆದ ಕೊಳವೆ ಬಾವಿಗೆ ಮಗು ಎಂದು ತಿಳಿದುಬಂದಿದೆ. ಆಟವಾಡಲು ಹೋಗಿದ್ದ ವೇಳೆ ಮಗು ಕೊಳವೆ ಬಾವಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಸತೀಶ್ ಮತ್ತು ಪೂಜಾ ದಂಪತಿಯ ಮಗನಾಗಿರುವ ಸಾತ್ವಿಕ್, ಇಂದು ಸಂಜೆ ಕೊಳವೆ ಬಾವಿಗೆ ಬಿದ್ದಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಇಂಡಿ ಠಾಣೆಯ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಮಗುವಿನ ತಂದೆ ಸತೀಶ್, ನಾಲ್ಕು ಎಕರೆ ಹೊಲದಲ್ಲಿರುವ ನಿಂಬೆ ಬೆಳೆ ಬೆಳೆಯಲೆಂದು ಕೊಳವೆ ಬಾವಿ ಕೊರೆಸಿದ್ದರು ಎಂದು ತಿಳಿದುಬಂದಿದೆ.
