2023ರ ವಿಧಾನಸಭಾ ಚುನಾವಣೆ ಮುಗಿದು, ಫಲಿತಾಂಶವೂ ಪ್ರಕಟವಾಗಿದೆ. ಭರ್ಜರಿ ಬಹುಮತ ಪಡೆದ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಕಗ್ಗಂಟಾಗಿತ್ತು. ಇದೀಗ, ಹಗ್ಗಜಗ್ಗಾಟ ಮುಗಿದಿದ್ದು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯೆಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಎರಡನೇ ಅವಧಿಗೆ, ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದೂವರೆಗೂ 23 ಮಂದಿ ಮುಖ್ಯಮಂತ್ರಿಗಳು ರಾಜ್ಯವನ್ನು ಆಳಿದ್ದಾರೆ. ಅಲ್ಲದೆ, 6 ಬಾರಿ ರಾಷ್ಟ್ರಪತಿ ಆಡಳಿತವನ್ನೂ ರಾಜ್ಯ ಕಂಡಿದೆ. ಆ ಪೈಕಿ, 19 ಮಾರ್ಚ್ 1971ರಿಂದ 20 ಮಾರ್ಚ್ 1972 ದೀರ್ಘಾವಧಿಯವರೆಗೆ (ಒಂದು ವರ್ಷ ಒಂದು ದಿನ) ರಾಷ್ಟ್ರಪತಿ ಅಡಳಿತ ಜಾರಿಯಲ್ಲಿತ್ತು. ಸದ್ಯ, ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿದವರು ಯಾರು? ಯಾವ ಅವಧಿಯಲ್ಲಿ ಯಾರು ಮುಖ್ಯಮಂತ್ರಿಯಾಗಿದ್ದರು ಎಂಬ ಸಂಪೂರ್ಣ ವಿವರ ಇಲ್ಲಿದೆ.
- ಕೆ.ಸಿ ರೆಡ್ಡಿ (25 ಅಕ್ಟೋಬರ್ 1947ರಿಂದ 30 ಮಾರ್ಚ್ 1952)
- ಕೆಂಗಲ್ ಹನುಮಂತಯ್ಯ (30 ಮಾರ್ಚ್ 1952ರಿಂದ 19 ಆಗಸ್ಟ್ 1956)
- ಕಡಿದಾಳ್ ಮಂಜಪ್ಪ (19 ಆಗಸ್ಟ್ 1956ರಿಂದ 31 ಅಕ್ಟೋಬರ್ 1956)
- ಎಸ್ ನಿಜಲಿಂಗಪ್ಪ (1 ನವೆಂಬರ್ 1956ರಿಂದ 16 ಮೇ 1958)
- ಬಿ.ಡಿ ಜತ್ತಿ (16 ಮೇ 1958ರಿಂದ 14 ಮಾರ್ಚ್ 1962)
- ಎಸ್ ಆರ್ ಕಂಠಿ (14 ಮಾರ್ಚ್ 1962ರಿಂದ 21 ಜೂನ್ 1962)
- ಎಸ್.ನಿಜಲಿಂಗಪ್ಪ (21 ಜೂನ್ 1962ರಿಂದ 29 ಮೇ 1968)
- ವೀರೇಂದ್ರ ಪಾಟೀಲ್ (29 ಮೇ 1968ರಿಂದ 18 ಮಾರ್ಚ್ 1971)
- ರಾಷ್ಟ್ರಪತಿ ಆಡಳಿತ (19 ಮಾರ್ಚ್ 1971ರಿಂದ 20 ಮಾರ್ಚ್ 1972)
- ಡಿ.ದೇವರಾಜ ಅರಸು (20 ಮಾರ್ಚ್ 1972ರಿಂದ 31 ಡಿಸೆಂಬರ್ 1977)
- ರಾಷ್ಟ್ರಪತಿ ಆಡಳಿತ (31 ಡಿಸೆಂಬರ್ 1977ರಿಂದ 28 ಫೆಬ್ರವರಿ 1978)
- ಡಿ.ದೇವರಾಜ ಅರಸು (28 ಫೆಬ್ರವರಿ 1978ರಿಂದ 12 ಜನವರಿ 1980)
- ಆರ್ ಗುಂಡೂರಾವ್ (12 ಜನವರಿ 1980ರಿಂದ 10 ಜನವರಿ 1983)
- ರಾಮಕೃಷ್ಣ ಹೆಗಡೆ (10 ಜನವರಿ 1983ರಿಂದ 13 ಆಗಸ್ಟ್ 1988)
- ಎಸ್ ಆರ್ ಬೊಮ್ಮಾಯಿ (13 ಆಗಸ್ಟ್ 1988ರಿಂದ 21 ಏಪ್ರಿಲ್ 1989)
- ರಾಷ್ಟ್ರಪತಿ ಆಡಳಿತ (21 ಏಪ್ರಿಲ್ 1989ರಿಂದ 30 ನವೆಂಬರ್ 1989)
- ವೀರೇಂದ್ರ ಪಾಟೀಲ್ (30 ನವೆಂಬರ್ 1989ರಿಂದ 10 ಅಕ್ಟೋಬರ್ 1990)
- ರಾಷ್ಟ್ರಪತಿ ಆಡಳಿತ (10 ಅಕ್ಟೋಬರ್ 1990ರಿಂದ 17 ಅಕ್ಟೋಬರ್ 1990)
- ಸಾರೆಕೊಪ್ಪ ಬಂಗಾರಪ್ಪ (17 ಅಕ್ಟೋಬರ್ 1990ರಿಂದ 19 ನವೆಂಬರ್ 1992)
- ಎಂ.ವೀರಪ್ಪ ಮೊಯ್ಲಿ (19 ನವೆಂಬರ್ 1992ರಿಂದ 11 ಡಿಸೆಂಬರ್ 1994)
- ಎಚ್ ಡಿ ದೇವೇಗೌಡ (11 ಡಿಸೆಂಬರ್ 1994ರಿಂದ 31 ಮೇ 1996)
- ಜೆ ಎಚ್ ಪಟೇಲ್ (31 ಮೇ 1996ರಿಂದ 11 ಅಕ್ಟೋಬರ್ 1999)
- ಎಸ್ ಎಂ ಕೃಷ್ಣ (11 ಅಕ್ಟೋಬರ್ 1999ರಿಂದ 28 ಮೇ 2004)
- ಧರಂ ಸಿಂಗ್ (28 ಮೇ 2004ರಿಂದ 3 ಫೆಬ್ರವರಿ 2006)
- ಎಚ್ ಡಿ ಕುಮಾರಸ್ವಾಮಿ (3 ಫೆಬ್ರವರಿ 2006ರಿಂದ 8 ಅಕ್ಟೋಬರ್ 2007)
- ರಾಷ್ಟ್ರಪತಿ ಆಡಳಿತ (8 ಅಕ್ಟೋಬರ್ 2007ರಿಂದ 12 ನವೆಂಬರ್ 2007)
- ಬಿಎಸ್ ಯಡಿಯೂರಪ್ಪ (12 ನವೆಂಬರ್ 2007ರಿಂದ 19 ನವೆಂಬರ್ 2007)
- ರಾಷ್ಟ್ರಪತಿ ಆಡಳಿತ (20 ನವೆಂಬರ್ 2007ರಿಂದ 29 ಮೇ 2008)
- ಬಿಎಸ್ ಯಡಿಯೂರಪ್ಪ (30 ಮೇ 2008ರಿಂದ 5 ಆಗಸ್ಟ್ 2011)
- ಸದಾನಂದ ಗೌಡ (5 ಆಗಸ್ಟ್ 2011ರಿಂದ 12 ಜುಲೈ 2012)
- ಜಗದೀಶ್ ಶೆಟ್ಟರ್ (12 ಜುಲೈ 2012ರಿಂದ 13 ಮೇ 2013)
- ಸಿದ್ದರಾಮಯ್ಯ (13 ಮೇ 2013ರಿಂದ 17 ಮೇ 2018)
- ಬಿಎಸ್ ಯಡಿಯೂರಪ್ಪ (17 ಮೇ 2018ರಿಂದ 23 ಮೇ 2018)
- ಎಚ್ ಡಿ ಕುಮಾರಸ್ವಾಮಿ (23 ಮೇ 2018ರಿಂದ 26 ಜುಲೈ 2019)
- ಬಿಎಸ್ ಯಡಿಯೂರಪ್ಪ (26 ಜುಲೈ 2019ರಿಂದ 28 ಜುಲೈ 2021)
- ಬಸವರಾಜ ಬೊಮ್ಮಾಯಿ (28 ಜುಲೈ 2021ರಿಂದ 19 ಮೇ 2023)