ಹೋರಾಟದ ಹಾದಿಯಲ್ಲಿ ಪ್ರತಿರೋಧದ ಕೊಂಡಿಯೊಂದು ಕಳಚಿ ಬಿದ್ದಿದೆ. ಲಿಂಗೇಗೌಡರು ಹೋರಾಟದ ಹಾದಿಯಲ್ಲಿ ನಿಧನರಾಗಿದ್ದಾರೆ. ಸರಕಾರಗಳು ಮಾಡುವ ಭ್ರಷ್ಟ ಅವ್ಯವಹಾರಗಳನ್ನು ಹೊರತಂದು ಜನರಿಗೆ ತಿಳಿಸುವ ಕೆಲಸವನ್ನು ಹೋರಾಟಗಾರರಾಗಿ ಮಾಡುತ್ತಿದ್ದರು. ನಮ್ಮಂತ ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದರು. ಈಗ ಶೂನ್ಯ ಆವರಿದೆ ಎಂದು ಪ್ರಿಯಾ ರಮೇಶ್ ದುಃಖ ವ್ಯಕ್ತಪಡಿಸಿದರು.

ಅವರು ಶ್ರೀರಂಗಪಟ್ಟಣದ ಬಸ್ ನಿಲ್ದಾಣ ವೃತ್ತದ ಬಳಿ ಶುಕ್ರವಾರ ಪ್ರಜ್ಞಾವಂತರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಅಗಲಿದ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯಧ್ಯಕ್ಷರಾದ ಎಸ್.ಹೆಚ್. ಲಿಂಗೇಗೌಡರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋರಾಟದ ಕೊಂಡಿಗಳು ಕಳಚಿಕೊಂಡಂತೆ ಸಮಾಜ ಅವ್ಯವಸ್ಥೆಯತ್ತ ಸಾಗುತ್ತದೆ. ಅದ್ದರಿಂದ ಒಬ್ಬ ಹೋರಾಟಗಾರ ನಿಧನರಾದಾಗ ದಿಕ್ಕೆಡದೆ ಅವರ ಹೋರಾಟದಿಂದ ಸ್ಪೂರ್ತಿ ಪಡೆದು ಮುನ್ನಡೆಯಬೇಕು ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋಗಿದ್ದ ತಂದೆಯೂ ಅರೆಸ್ಟ್!
ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಬೇಕು. ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಭೇಟಿಯಾಗಿ ಮನವಿ ನೀಡಲು ಮಂಗಳೂರಿನಿಂದ ದೆಹಲಿಗೆ ತಂಡ ಹೊರಟಿತ್ತು. ಆ ತಂಡಕ್ಕೆ ನೈತಿಕ ಬೆಂಬಲ ನೀಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡರೂ ಹೋದಾಗ ಈ ದುರಂತ ಸಂಭವಿಸಿದೆ. ಆಗಬಾರದಿತ್ತು ಇದು ದುರಂತದ ಸಂಗತಿ ಎಂದು ವಿಷಾದಿಸಿದರು.
ಈ ಹೋರಾಟವನ್ನು ನಮ್ಮಂತ ಸಂಘಟನೆಗಳು ಕೈಗೆತ್ತಿಕೊಂಡು ಮುನ್ನಡೆಸಬೇಕು. ಈ ನಿಧನಕ್ಕೆ ಶ್ರೀರಂಗಪಟ್ಟಣದ ಪ್ರಜ್ಞಾವಂತರ ವೇದಿಕೆ ತೀವ್ರ ದುಃಖ ವ್ಯಕ್ತಪಡಿಸುತ್ತದೆ ಮತ್ತು ಮೃತರ ಕುಟುಂಬಕ್ಕೆ ಸಂತಾಪಗಳನ್ನು ಸಲ್ಲಿಸುತ್ತದೆ ಎಂದರು.
ಇದನ್ನು ನೋಡಿದ್ದೀರಾ? ಸಾಹಿತ್ಯ ಸಮ್ಮೇಳನದಲ್ಲಿ ನಾನ್ ವೆಜ್ ಇರಲೇಬೇಕಾ?
ಈ ಸಭೆಯಲ್ಲಿ ಲಿಂಗೇಗೌಡರ ಭಾವಚಿತ್ರಕ್ಕೆ ಪ್ರಜ್ಞಾವಂತರ ವೇದಿಕೆಯ ಎಲ್ಲಾ ಸದಸ್ಯರು ಪುಷ್ಪಾರ್ಚನೆ ಮಾಡಿದರು. ಒಂದು ನಿಮಿಷ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಪ್ರಜ್ಞಾವಂತರ ವೇದಿಕೆಯ ಸಂಚಾಲಕರಾದ ವೆಂಕಟೇಶ್, ಚಿಕ್ಕತಮ್ಮೇಗೌಡ, ರಾಜ್ಯ ರೈತ ಸಂಘದ ಪಾಂಡು, ಕೆಆರ್‌ಎಸ್ ಪಾರ್ಟಿಯ ಮಲ್ಲೇಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.