ಚಿಕ್ಕಮಗಳೂರು l ಸ್ಮಶಾನ ಜಾಗಕ್ಕೆ ದಾಖಲೆ ಇದ್ದರೂ ಕೇಸ್ ಹಾಕಲಾಗುತ್ತಿದೆ: ದಲಿತ ಸಂಘಟನೆ ಆರೋಪ

Date:

ಸ್ಮಶಾನ ಜಾಗಕ್ಕೆ ದಾಖಲೆ ಇದ್ದರೂ ಕೇಸ್ ಹಾಕಲಾಗುತ್ತಿದೆ ಎಂದು ಚಿಕ್ಕಮಗಳೂರು ಅಂಬೇಡ್ಕರ್ ಹೋರಾಟ ಸಮಿತಿ ಆರೋಪ ಹೊರಿಸಿದೆ.

- Advertisement -

ಚಿಕ್ಕಮಗಳೂರು ತಾಲೂಕು ಆಲ್ದೂರು ಹೋಬಳಿ ಆಲ್ಲೂರು ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಒಕ್ಕಲಿಗ ಸಮುದಾಯದವರು ಅಡ್ಡಿಪಡಿಸಿ, ದಲಿತರ ಬಗ್ಗೆ ಹಗುರವಾಗಿ ಮಾತಾಡಿರುವುದನ್ನು ವಿರೋಧಿಸಿ ಚಿಕ್ಕಮಗಳೂರು ನಗರದಲ್ಲಿ ಅಂಬೇಡ್ಕರ್ ಹೋರಾಟ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಸಮಿತಿಯ ಮುಖಂಡ ನವರಾಜ್ ಮಾತನಾಡಿ, ಸರ್ವೇ ನಂಬರ್ 108ರಲ್ಲಿ ಸರಕಾರಿ ಸ್ಮಶಾನ ಜಾಗ ಇದೆ. ಇದರ ಆಧಾರದಲ್ಲಿ ನಾವು ಅಲ್ಲಿ ಶವ ಸಂಸ್ಕಾರಕ್ಕೆ ಮುಂದಾಗಿದ್ದೆವು, ಹೀಗಿದ್ದಾಗ ನಮ್ಮದು ಅತಿಕ್ರಮ ಪ್ರವೇಶ ಹೇಗಾಗುತ್ತದೆ. ನಮ್ಮ ಮೇಲೆ ಪೊಲೀಸರು ಹೇಗೆ ಟ್ರಸ್‌ ಪಾಸ್ ಕೇಸ್ ದಾಖಲು ಮಾಡಿದ್ದಾರೆ ಎಂದು ತಿಳಿಸಿದರು.

ದಲಿತರು ಒಕ್ಕಲಿಗರ ಹಾಗೂ ಒಕ್ಕಲಿಗರ ಸಂಘದ ವಿರೋಧಿಗಳಲ್ಲ, ಇದನ್ನ ಅರಿತು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ ಅವರು ದಲಿತರ ಬಗ್ಗೆ ಹಗುರವಾದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಅಂಬೇಡ್ಕರ್ ಹೋರಾಟ ವೇದಿಕೆಯ ಮುಖಂಡ ಯಲಗುಡಿಗೆ ಹೊನ್ನಪ್ಪ ತಿಳಿಸಿದರು.

ಆಲ್ಲೂರಿನಲ್ಲಿ ಇತ್ತೀಚೆಗೆ ಮೃತಪಟ್ಟ ಮಹಿಳೆಯ ಶವ ಸಂಸ್ಕಾರ ಮಾಡಲು ಹೋದಾಗ ಒಕ್ಕಲಿಗ ಸಮುದಾಯದ ಜನ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದರು. ಸ್ಮಶಾನ ಜಾಗದ ದಾಖಲಾತಿ ಆಧಾರದಲ್ಲಿ ನಾವು 108 ಸರ್ವೇ ನಂಬರ್‌ ಜಾಗದಲ್ಲಿಯೇ ಶವ ಸಂಸ್ಕಾರ ಮಾಡಬೇಕು ಎಂದು ತೀರ್ಮಾನಿಸಿ ಸ್ಥಳಕ್ಕೆ ಹೋದಾಗ ಈ ವೇಳೆ ಅಧಿಕಾರಿಗಳು ಮತ್ತು ಒಕ್ಕಲಿಗರ ಸಂಘದವರು ಗಲಭೆ ಸೃಷ್ಟಿ ಮಾಡಿದ್ದು,  ಸರಿಯಲ್ಲ , ಸ್ಮಶಾನದ ದಾಖಲಾತಿ ಇದ್ದರೂ ಶವ ಸಂಸ್ಕಾರಕ್ಕೆ ತಡೆ ಮಾಡಿದರು ಎಂದು ಅಂಬೇಡ್ಕರ್ ಹೋರಾಟ ಸಮಿತಿ ಮುಖಂಡರಾದ ಯಲಗುಡಿಗೆ ಹೊನ್ನಪ್ಪ  ತಿಳಿಸಿದರು.

ನೂರಾರು ಎಕರೆ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿದಾಗ, “ದಲಿತರು ತಡೆದಿದ್ದರೆ” ಅದೂ ತಪ್ಪಾಗುತ್ತಿತ್ತು, ಸರ್ವೆ ನಂಬರ್ 108ರ ಸ್ಮಶಾನವನ್ನು ಸಾರ್ವಜನಿಕ ಸ್ಮಶಾನ ಮಾಡಿ ಎಂದು ಒಕ್ಕಲಿಗರ ಸಂಘದಿಂದ ಚಿಕ್ಕಮಗಳೂರಿನ ಜಿಲ್ಲಾಕಾರಿಗೆ ಮನವಿ ನೀಡಿದ್ದಾರೆ. ಹಾಗಿದ್ದರೆ ಜಿಲ್ಲೆಯಲ್ಲಿ ಇರುವ  ಎಲ್ಲ ಸ್ಮಶಾನಗಳನ್ನು ಸಾರ್ವಜನಿಕ ಸ್ಮಶಾನ ಎಂದು ಘೋಷಿಸಲಿ, ದಲಿತರ ಬಗ್ಗೆ ಟಿ.ರಾಜಶೇಖರ ಅವರು ಇನ್ನು ಮುಂದೆ ಹಗುರವಾಗಿ ಇಲ್ಲಸಲ್ಲದ ಹೇಳಿಕೆ ನೀಡಬಾರದು ಎಂದು ಹೊನ್ನಪ್ಪ  ತಿಳಿಸಿದರು.

ಇದನ್ನೂ ಓದಿದ್ದೀರಾ?ಈ ದಿನ ಇಂಪ್ಯಾಕ್ಟ್ | ಮೇಲನಹಳ್ಳಿ ಕಾಲೋನಿ ಸಮಸ್ಯೆಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ; ನಿವೇಶನ ಹಂಚಿಕೆ ಭರವಸೆ

ಈ ವೇಳೆ ಭೀಮ್‌ ಆರ್ಮಿ ಮುಖಂಡ ಗಿರೀಶ್, ಚಂದ್ರುಪುರ, ಸಮಿತಿಯ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...