ಮೀನು ಹಿಡಿಯಲು ಹೋದ ಕಾರ್ಮಿಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹುಮನಾಬಾದ್ ತಾಲೂಕಿನ ನಿಂಬೂರ್ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಹುಮನಾಬಾದ್ ಪಟ್ಟಣದ ನಿವಾಸಿ ವಿಲಾಸ ಜೋಷಿ (40) ಮೃತ ಕಾರ್ಮಿಕ.
ಮೃತ ವಿಲಾಸ ಹಾಗೂ ಇನ್ನಿಬ್ಬರು ನಿಂಬೂರ ಗ್ರಾಮದ ಹೊರವಲಯದ ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದರು. ನೀರಿನ ಆಳ ಗಮನಿಸದೇ ಮೀನು ಹಿಡಿಯಲು ಮುಂದೆ ಹೋದ ವಿಲಾಸ ಕೆಸರಿನಲ್ಲಿ ಸಿಕ್ಕಿಬಿದ್ದು ಮೇಲೆ ಬರಲಾಗದೇ ಕೊನೆಯುಸಿರೆಳಿದಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದರು. ಚಿಟಗುಪ್ಪ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಶವ ಹೊರ ತೆಗೆದಿದ್ದಾರೆ.