ವಿಜಯಪುರ | ಮಳೆಗಾಗಿ ಹೂತಿದ್ದ ಶವಗಳ ಬಾಯಿಗೆ ನೀರುಬಿಟ್ಟ ಗ್ರಾಮಸ್ಥರು!

Date:

Advertisements

ಮಳೆಗೆ ಪ್ರಾರ್ಥಿಸಿ ನಾನಾ ರೀತಿಯ ಜನಪದ ಆಚರಣೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ರೂಢಿಯಲ್ಲಿದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಸ್ಮಶಾನದಲ್ಲಿ ಹೂತಿರುವ ಶವಗಳ ಬಾಯಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ಘಟನೆ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ದುರ್ಬಲವಾಗಿದ್ದು ರೈತರು ಕಂಗಾಲಾಗಿದ್ದಾರೆ. ಜೂನ್ ಮುಗಿಯುತ್ತಾ ಬಂದರೂ ಮಳೆಯಾಗದೇ ಬರದ ಛಾಯೆ ಆವರಿಸಿರುವುದರಿಂದ ಕಂಗಲಾದ ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಜನರು ಹಿರೇಮಠದ ವೇದಮೂರ್ತಿ ವಾಗೀಶ ಸ್ವಾಮಿಗಳ ನೇತೃತ್ವದಲ್ಲಿ, ಗ್ರಾಮದ ಹಿಂದೂ ಸ್ಮಶಾನದಲ್ಲಿ ಕಳೆದ ಐದಾರು ತಿಂಗಳ ಈಚೆಗೆ ಹೂತಿರುವ ಶವಗಳಿಗೆ ಕೊಳವೆ ಮೂಲಕ ನೀರುಣಿಸಿದ್ದಾರೆ.

ನೀರು ತುಂಬಿದ ಟ್ಯಾಂಕರ್‌ನೊಂದಿಗೆ ಸ್ಮಶಾನಕ್ಕೆ ತೆರಳಿದ ಗ್ರಾಮಸ್ಥರು ಸಮಾದಿಗಳನ್ನು ಅಗೆದು ಕೊಳವೆ ಮೂಲಕ ಶವಗಳ ಬಾಯಿಗೆ ನೀರುಣಿಸಿ, ಮಳೆಗಾಗಿ ಪ್ರಾರ್ಥಿಸಿದರು. ಕಾಕತಾಳಿಯ ಎಂಬಂತೆ 20 ನಿಮಿಷಗಳ ಬಳಿಕ ಗ್ರಾಮದಲ್ಲಿ ಧಾರಾಕಾರ ಮಳೆಯಾಗಿದೆ.

Advertisements

“ಮನುಷ್ಯರು ಸಾಯುವಾಗ ಬಾಯಿ ತೆರೆದುಕೊಂಡು ಸತ್ತಿದ್ದರೆ ಮಳೆ ಆಗುವುದಿಲ್ಲ ಎಂಬುದು ನಮ್ಮ ಹಿರಿಯರ ನಂಬಿಕೆ. ಅಂತಹ ಶವಗಳಿಗೆ ಪೂಜೆ ಸಲ್ಲಿಸಿ, ನೀರುಣಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಮಾಡಿದ್ದೇವೆ” ಎಂದು ಹಿರೇಮಠದ ವೇದಮೂರ್ತಿ ವಾಗೀಶ ಸ್ವಾಮಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉಡುಪಿ | ಕಲಹದ ಬಳಿಕ ಹೊಂಡಕ್ಕೆ ಹಾರಿದ ಪತ್ನಿ, ರಕ್ಷಿಸಲು ಹೋದ ಪತಿಯೂ ನೀರು ಪಾಲು

ಈ ವೇಳೆ ಗ್ರಾಮಸ್ಥಾರ ಬಸಯ್ಯ ಕಪ್ಪಡಿಮಠ, ಬಸವರಾಜ ಗುಮಶೆಟ್ಟಿ, ಮಲ್ಲು ಜಂಬಗಿ, ಮಂಜು ಗುಮಶೆಟ್ಟಿ, ಮಡಿವಾಳಯ್ಯ ಲಕ್ಕುಂಡಿಮಠ, ರಾಜಶೇಖರ ಅಲಗೂರ, ಶ್ರೀಶೈಲ ಅಡಕಿ, ಸುದಾಕರ ಕವದಿ, ಸಿದ್ದಲಿಂಗ ಗುಡಗುಂಟಿ, ಈರಪ್ಪ ಬೈಚಬಾಳ, ಮಲ್ಲು ದೇಸಾಯಿ, ಮಡೆಪ್ಪ ಗುಮಶೆಟ್ಟಿ, ದೇವಿಂದ್ರ ವಡ್ಡರ, ಮಹಿಬೂಬ ಬಾಷಾ ಮನಗೂಳಿ ಹಾಗೂ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X