ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಇಫ್ತಾರ್ ಕೂಟಕ್ಕೆ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಎಐಐಟಿಎ) ಆಹ್ವಾನ ನೀಡಿದೆ. ಇದೇ ಮಂಗಳವಾರ (ಮಾ.18) ಸಂಜೆ ಜಿಲ್ಲೆಯ ಆರ್ ಎಂ ಎಲ್ ನಗರದಲ್ಲಿರುವ ಯುನಿಟಿ ಹಾಲ್‌ನಲ್ಲಿ ಸಂಜೆ 5.15 ರಿಂದ 6.40ರ ವರೆಗೂ ಕೂಟ ನಡೆಯಲಿದೆ ಎಂದು ಎಐಐಟಿಎ ತಿಳಿಸಿದೆ.
ಈ ಕಾರ್ಯಕ್ರಮದ ಉಪನ್ಯಾಸಕರಾಗಿ ಕೆ ಪಿ ಇಸಾಕ್ ಪುತ್ತೂರು ಮತ್ತು ಡಾ ಟಿ ಸಿ ಭಾರತಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ವಾರ್ಷಿಕ ಚಟುವಟಿಕೆ ಕುರಿತು ಕಲೀಮ್ ಉಲ್ಲಾ ಖಾನ್ ಮಾಹಿತಿ ನೀಡಲಿದ್ದಾರೆ.
ಈ ಇಫ್ತಾರ್ ಕೂಟಕ್ಕೆ ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಸದುಪಯೋಗಪಡಿಸಕೊಳ್ಳುವ ಮೂಲಕ ಯಶಸ್ವಿಗಳಿಸಿಕೊಡಬೇಕು ಎಂದು ಎಐಐಟಿಎ ಶಿವಮೊಗ್ಗ ಜಿಲ್ಲಾ ಶಾಖೆ ಮನವಿ ಮಾಡಿದೆ.
