ಶಿವಮೊಗ್ಗ | ಬಾಕಿ ಶುಲ್ಕ ಪಾವತಿಸಿಲ್ಲವೆಂದು ಮಗುವಿನ ಮೇಲೆ ಹಲ್ಲೆ, ಜಾತಿನಿಂದನೆ; ಜೈನ್ ಪಬ್ಲಿಕ್ ಶಾಲೆ ವಿರುದ್ಧ ಕ್ರಮಕ್ಕೆ ಆಗ್ರಹ

Date:


ಶಾಲೆಯ ಬಾಕಿ ಶುಲ್ಕವನ್ನು ಪಾವತಿಸಿಲ್ಲವೆಂಬ ಕಾರಣಕ್ಕೆ ಶಿಕ್ಷಕರು ಮೂರನೇ ತರಗತಿ ಮಗುವಿನ ಮುಂದಲೆ ಕೂದಲು ಕತ್ತರಿಸಿ, ಮಗುವಿನ ಮೇಲೆ ಹಲ್ಲೆ ಮಾಡಿ, ಜಾತಿನಿಂದನೆ ಮಾಡಿ ಅವಮಾನಿಸಿರುವ ಘಟನೆ ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.

- Advertisement -

ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಪ್ರಿಯಾ, ಪಿಇ ಶಿಕ್ಷಕ ಸಂತೋಷ್‌, ಸಿಬ್ಬಂದಿ ಶರತ್‌ ಸೇರಿದಂತೆ ವಿದ್ಯಾರ್ಥಿ ಯನ್ನು ತಮ್ಮ ಕಚೇರಿಗೆ ಕರೆದು, ನಿಮ್ಮಪ್ಪ, ಅಮ್ಮ ಇನ್ನೂ ಬಾಕಿ ಫೀಸ್‌ ಕಟ್ಟಿಲ್ಲ, ಫೋನ್‌ ಮಾಡಿದರೆ ಪೋನ್‌ ತೆಗೆಯುವುದಿಲ್ಲವೆಂದು ಸುಳ್ಳು ಹೇಳಿ ನನ್ನ ಮಗನಿಗೆ ದೈಹಿಕ ಹಲ್ಲೆಮಾಡಿ, ಮಗುವಿನ ಕೂದಲು ಕತ್ತರಿಸಿ ಅವಮಾನ ಮಾಡಿದ್ದಾರೆಂದು ಸಂತ್ರಸ್ತ ತಾಯಿ ಅವಲತ್ತುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಮಗುವಿನ ತಾಯಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜೈನ್ ಪಬ್ಲಿಕ್ ಶಾಲೆಯಲ್ಲಿ ನನ್ನ ಮಗ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವನ ಶಾಲೆ ಶುಲ್ಕ ₹40,000ವನ್ನು ಪಾವತಿಸಿದ್ದೇವೆ. ಆದರೂ ಇನ್ನು ₹5,000 ಬಾಕಿ ಹಣವನ್ನು ಕಟ್ಟಿರೆಂದು ಕರೆ ಮಾಡಿದ್ದರು. ₹40,000 ಪೂರ್ತಿ ಪಾವತಿಸಿದ್ದೇವೆ. ಮತ್ತೆ ಹಣ ಕಟ್ಟಲು ಹೇಳಿತ್ತಿದ್ದೀರಲ್ಲ. ನಮಗೆ ಒಂದುವಾರ ಕಾಲಾವಕಾಶ ಕೊಡಿ ಕಟ್ಟುತ್ತೇವೆಂದು ತಿಳಿಸಿದ್ದೆ. ಆದರೆ ಮಗು ಶಾಲೆಗೆ ಹೋದಾಗ ಕ್ಲಾಸ್ ರೂಂಗೆ ಹೋಗಲು ಬಿಡದೆ ದೈಹಿಕ ಶಿಕ್ಷಕ ಸಂತೋಷ್ ಮಗುವಿನ ಕಿವಿ, ಕೂದಲು ಹಿಡಿದು ದರದರ ಎಳೆದಾಡಿ ಎಳೆದುಕೊಂಡು ಪ್ರಿನ್ಸಿಪಲ್ ರೂಂಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲೇ ಇದ್ದ ಸಿಬ್ಬಂದಿ ಶರತ್ ಬಾಯಿಗೆ ಬಂದಂತೆ ಆವಾಚ್ಯ ಶಬ್ದಗಳಿಂದ ಬೈದು ಫೀಸ್ ಕಟ್ಟುವುದಕ್ಕೆ ಆಗದೇ ಇದ್ದ ಮೇಲೆ ಸ್ಕೂಲ್‌ಗೆ ಏತಕ್ಕೆ ಬರುತ್ತೀಯೋ ಎಂದು ಬೆನ್ನಿಗೆ ಗುದ್ದಿ ಕೆನ್ನೆಗೆ ಹೊಡೆದು, ಅವನ ಭುಜ ಹಿಡಿದು ಹಿಚುಕಿ ಹಿಂಸಿಸಿದ್ದಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಸರ್ಕಾರಿ ರಜೆ ಇಲ್ಲದಿದ್ದರೂ ಸ್ವಯಂ ರಜೆ ಘೋಷಿಸಿಕೊಂಡ ಜಿಲ್ಲಾಡಳಿತ; ಸಾರ್ವಜನಿಕರ ಆಕ್ರೋಶ

“ಮಗು ಅಳುತ್ತಿರುವಾಗ ಪ್ರಿನ್ಸಿಪಲ್‌ ಪ್ರಿಯಾ, ʼನೀವು ಎಸ್‌ಸಿ/ಎಸ್‌ಟಿಯವರೇ ಇಷ್ಟು. ಎಷ್ಟುಸಾರಿ ಹೇಳಿದರೂ ಬುದ್ದಿಕಲಿಯುವುದಿಲ್ಲ. ನಿಮ್ಮಂತಹ ಜಾತಿಯವರನ್ನು ನಮ್ಮ ಶಾಲೆಗೆ ಸೇರಿಸಿಕೊಳ್ಳುವುದೇ ತಪ್ಪುʼ ಅಂತ ಎಲ್ಲ ಮಕ್ಕಳ ಎದುರು ಜಾತಿನಿಂದನೆ ಮಾಡಿ ಅವಮಾನಿಸಿ, ಎಲ್ಲರೆದುರು ಮಗುವಿನ ತಲೆ ಕೂದಲು ಕತ್ತರಿಸಿದ್ದಾರೆ” ಎಂದು ತಾಯಿ ನೋವು ತೋಡಿಕೊಂಡರು.

“ಮಗು ಸಂಜೆ 4-45ಕ್ಕೆ ಮನೆಗೆ ಅಳುತ್ತ ಬಂದಾಗ ವಿಚಾರಿದೆ. ಆಗ ಅವನು ಅವರ ಪೈಶಾಚಿಕ ಕೃತ್ಯವನ್ನು ಹೇಳಿದ್ದಾನೆ. ಮಕ್ಕಳಿಗೆ ಜಾತಿನಿಂದನೆ ಮಾಡುವ ಇಂಥ ಶಾಲೆಯ ಪರವಾನಗಿಯನ್ನು ರದ್ದುಮಾಡಬೇಕು. ನಮಗೆ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಜೈನ್‌ ಶಾಲೆಯ ವಿರುದ್ಧ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...

ರಾಯಚೂರು | ಪ್ರವಾಸಕ್ಕೆ ತೆರಳಿದ್ದ ಕಾರು ಅಪಘಾತ: ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ

ಪ್ರವಾಸಕ್ಕೆ ತೆರಳಿದ್ದ ಕಾರು ಅಪಘಾತಕ್ಕೀಡಾಗಿ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,...