ವಿಶ್ವನಾಯಕ ಅಂಬೇಡ್ಕರ್, ಬುದ್ಧ, ಬಸವಣ್ಣ ,ಕನಕದಾಸ, ಟಿಪ್ಪು ಸುಲ್ತಾನ್, ಮಹಾ ಕವಿ ಕುವೆಂಪು ಅವರನ್ನು ಜಾತಿ ನಾಯಕರನ್ನಾಗಿ ಮಾಡಬೇಡಿ. ಅವರು ಇಡೀ ಮನುಕುಲಕ್ಕಾಗಿ, ದೇಶಕ್ಕಾಗಿ ದುಡಿದವರು ಎಂದು ಹೋರಾಟಗಾರ ಹ.ರಾ ಮಹೇಶ್ ಹೇಳಿದರು.
ಅಂಬೇಡರ್ ಅವರ 133ನೇ ಜಯಂತೋತ್ಸವದ ಅಂಗವಾಗಿ ಕಲಬುರಗಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆದಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಗಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
“ಈ ಹಿಂದೆ, 100% ಮೀಸಲಾತಿ ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಮಾತ್ರವೇ ಇತ್ತು. ದನ್ನು ಕಿತ್ತು ಎಲ್ಲ ಜಾತಿ ವರ್ಗದವರಿಗೆ ಹಂಚಿಕೆ ಮಾಡಿದ್ದು, ಅಂಬೇಡ್ಕರ್ ಬರೆದ ಸಂವಿಧಾನದಿಂದ. 2,000 ವರ್ಷದ ಅಸಮಾನತೆಯನ್ನು ಕೇವಲ 40 ವರ್ಷದಲ್ಲಿ ಸಮಾನತೆಗೆ ತಂದಿದು ಅಂಬೇಡ್ಕರ್” ಎಂದರು.
“ಅಂಬೇಡ್ಕರ್ ಎಲ್ಲ ಜಾತಿ-ಧರ್ಮದ ಜನರಿಗಾಗಿ ಸಂವಿಧಾನ ಬರೆದಿದ್ದಾರೆ. ಎಲ್ಲರಿಗೂ ಶಿಕ್ಷಣ, ಅನ್ನ, ಅರೋಗ್ಯ, ಬಟ್ಟೆ, ಕಾನೂನು, ಠಾಣೆ, ಓಟು ಕೊಟ್ಟಿದು ಸಂವಿಧಾನ. ಅನ್ಯಾಯ ಆದಾಗ ಪ್ರತಿಭಟಿಸುವ ಶಕ್ತಿ ಕೊಟ್ಟಿದ್ದು ಕೂಡ ಸಂವಿಧಾನ. ದೇವರು ಎಂಬುವುದು ನಂಬಿಕೆ – ಸಂವಿಧಾನ ಎಂಬುವುದು ಸತ್ಯ” ಎಂದರು.