ಅಂಬೇಡ್ಕರ್ ಅವರಿಗೆ ಅಪಹಾಸ್ಯ ಮಾಡಿ ಅಪಮಾನಿಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾರನ್ನು ಕೇಂದ್ರದ ಮಂತ್ರಿ ಮಂಡಲದಿಂದ ವಜಾಗೊಳಿಸುವಂತೆ ಆಗ್ರಹಿಸಿ, ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಕಲಬುರಗಿ ಜಿಲ್ಲೆಯ ತಿಮ್ಮಾಪೂರ ವೃತ್ತದ ಬಳಿ ಸ್ಲಂ ಜನಾಂದೋಲನ ಕರ್ನಾಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ಮಾಡಿಲಾಯಿತು.
ಪ್ರತಿಭಟನಾ ಮೆರವಣಿಗೆ ಮಾಡಿದ ಬಳಿಕ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ಕಲಬುರಗಿ ಘಟಕದ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಸಂಚಾಲಕರಾದ ರೇಣುಕಾ ಸರಡಗಿ, “ಸಾವಿರಾರು ವರ್ಷಗಳಿಂದ ಭಾರತದ ಮೂಲನಿವಾಸಿಗಳನ್ನು ಶೋಷಣೆ ಮಾಡುತ್ತಲೇ ಬಂದಿದ್ದ ಬ್ರಾಹ್ಮಣವಾದಿ ವಿಚಾರಧಾರೆಯ ಹಿಂಸಕರು, ಜಾತಿ, ಧರ್ಮಗಳ ಹೆಸರಿನಿಂದ ಅಖಂಡ ಭಾರತವನ್ನು ಒಡೆದು ಈ ದೇಶದ ಮಣ್ಣಿನ ಮಕ್ಕಳನ್ನು ಎಲ್ಲ ಅವಕಾಶಗಳಿಂದ ವಂಚಿತರನ್ನಾಗಿ ಮಾಡಿ ಅಟ್ಟಹಾಸ ಮೆರೆಯುತ್ತಿದ್ದಾರೆ” ಎಂದು ಆರೋಪಿಸಿದರು.
ಅಂಬೇಡ್ಕರ್ ಅವರಿಗೆ ಅಪಹಾಸ್ಯ ಮಾಡಿ ಅಪಮಾನಿಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾರನ್ನು ಕೇಂದ್ರದ ಮಂತ್ರಿ ಮಂಡಲದಿಂದ ವಜಾಗೊಳಿಸುವಂತೆ ಆಗ್ರಹಿಸಿ, ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಕಲಬುರಗಿ ಜಿಲ್ಲೆಯ ತಿಮ್ಮಾಪೂರ ವೃತ್ತದ ಬಳಿ ಪ್ರತಿಭಟನಾ ಮೆರವಣಿಗೆ ಮಾಡಿದ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕದ ಮುಖಂಡರು. pic.twitter.com/9wUkoBmfIe
— eedina.com ಈ ದಿನ.ಕಾಮ್ (@eedinanews) December 23, 2024
“ಸಂವಿಧಾನ ವಿರೋಧಿಯಾದ ಸಂಘ ಪರಿವಾರದ ವಿಚಾರಧಾರೆಯ ಹಿನ್ನೆಲೆಯಲ್ಲಿ ಬೆಳೆದುಬಂದ ಜಾತಿವಾದಿ ಮನಸ್ಥಿತಿಯ ಅಂಬೇಡ್ಕರ್ ವಿರೋಧಿ ಅಮೀತ ಶಾ ಎಂಬ ಹೆಸರಿನ ಕೇಂದ್ರ ಗೃಹ ಮಂತ್ರಿ ಡಿ.17 2024 ರಂದು ಪಾರ್ಲಿಮೆಂಟನ ರಾಜ್ಯಸಭೆಯಲ್ಲಿ “ಅಭಿ ಏಕ್ ಫ್ಯಾಷನ್ ಹೋಗಯಾ ಹೇ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಇತ್ನಾ ನಾಮ ಅಗರ್ ಭಗವಾನ್ ಕಾ ಲೇತೇತೋ ಸಾತ್ ಜನೋತಕ್ ಸ್ವರ್ಗ ಮಿಲ್ಜಾತೆ” ಎಂದು ಹೇಳುವುದರ ಮೂಲಕ ಇಡೀ ಭಾರತದ ಬಹುಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಶತಮಾನಗಳಿಂದ ಅವಮಾನ, ಶೋಷಣೆ, ದೌರ್ಜನ್ಯಕ್ಕೆ ಒಳಗಾಗಿದ್ದ ಜನರಿಗೆ, ಮಹಿಳೆಯರಿಗೆ ಸ್ವಾತಂತ್ರ ತಂದುಕೊಟ್ಟವರು ಡಾ. ಬಿ ಆರ್ ಅಂಬೇಡ್ಕರ್. ಇದರ ಜೊತೆಗೆ ಅವರ ಸಂವಿಧಾನ ಈ ದೇಶದ ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಸೇರಿದಂತೆ ಶೋಷಣೆಗೆ ಒಳಗಾಗ ಬಹುದಾದ ಎಲ್ಲಾ ಸಮುದಾಯಗಳಿಗೆ ರಕ್ಷಾ ಕವಚವಾಗಿದೆ. ಇಂತಹ ವ್ಯಕ್ತಿಯ ಹೆಸರನ್ನು ಪುರ್ನ ಉಚ್ಛರಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಅಮಿತ್ ಶಾ ಮತ್ತು ಆರ್.ಆರ್.ಎಸ್ ನವರು ಉದ್ದೇಶಿಸಿರುವ ಮಾವನ ವಿರೋಧಿ ಮನಸೃತಿಯನ್ನು ಮರುಸ್ಥಾಪಿಸುವ ಯೋಜನೆಗೆ ಅಂಬೇಡ್ಕರ್ ತಡೆಗೋಡೆಯಾಗಿರುವುದೇ ಬಾಬಾಸಾಹೇಬ್‌ರ ವಿರುದ್ಧ ಅವರಿಗೆ ಇರುವ ಸಿಟ್ಟು. ಅದನ್ನು ಅವರು ಸೈದ್ಧಾಂತಿಕ ಗುರುಗಳಲ್ಲಿ ಒಬ್ಬರಾದ ಸಾರ್ವರಕರ್ ಲಿಖಿತ ರೂಪದಲ್ಲಿ ಬರೆದಿಟ್ಟು ಹೋಗಿದ್ದಾನೆ. ಅವರ ಗುರುಗಳ ಆಜ್ಞೆ ಪಾಲಿಸುವ ನಿಟ್ಟಿನಲ್ಲಿ ವಿವಿಧ ಕಾರಣಗಳಿಗೆ ಒಳಗೆ ಅಡಗಿದ್ದ ಮಾತುಗಳು ಅಮಿತ್ ಶಾ ಬಾಯಲ್ಲಿ ಬಂದಿದೆ. ದೇವರ ಹೆಸರು ಹೇಳಿ ಜನರನ್ನು ಕೊಲ್ಲುವುದಕ್ಕಿಂತ ಅಂಬೇಡ್ಕರ್ ಅವರ ಹೆಸರು ಹೇಳಿ ಸಮಾನತೆ ಸಾಧಿಸುವುದು ಸಾವಿರಪಟ್ಟು ಒಳ್ಳೆಯದು. ಕೂಡಲೇ ಅಮಿತ್ ಶಾ ಅವರನ್ನು ಕೇಂದ್ರದ ಮಂತ್ರಿ ಮಂಡಲದಿಂದ ಕೈಬಿಡಬೇಕು. ದೇಶದ ಜನತೆಯ ಕ್ಷಮೆಯನ್ನು ಅಮಿತ್ ಶಾ ಕೇಳಬೇಕು” ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಸಂತೆಯಲ್ಲಿ ಕಳೆದು ಹೋದ ‘ಕನ್ನಡ ಸಾಹಿತ್ಯ ಸಮ್ಮೇಳನ’
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನದ ಅಧ್ಯಕ್ಷೆ ಗೌರಮ್ಮ ಮಾಕಾ, ಸಂಘಟನಾ ಸಂಚಾಲಕ ಶರಣು ಹಂಗರಗಿ, ಕಾರ್ಯದರ್ಶಿ ಶರಣು ಕಣ್ಣಿ ಸೇರಿದಂತೆ ಹಲವರಿದ್ದರು.