ಯಾದಗಿರಿ | ಸಿಎಂ ಸಿದ್ದರಾಮಯ್ಯಗೆ ಕಾನಿಪ ಧ್ವನಿ ಬಹಿರಂಗ ಪತ್ರ

Date:

Advertisements

ಸ್ವಾತಂತ್ರ್ಯ ದೊರೆತು 77ನೇ ವರ್ಷಕ್ಕೆ ಕಾಲಿಟ್ಟಿದೆ. ಇದವರೆಗೂ, ನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಅಂದರೆ, ಶೇಕಡಾ 90ರಷ್ಟು ಪತ್ರಕರ್ತರಿಗೆ ಮೂಲಭೂತ ಸೌಕರ್ಯಗಳಿಲ್ಲ, ಸರ್ಕಾರದಿಂದ ಮತ್ತು ಪತ್ರಿಕೆ ನಡೆಸುವ ಬಂಡವಾಳ ಶಾಹಿಗಳಿಂದ ಸೌಕರ್ಯಗಳು ಮರೀಚಿಕೆಯಾಗಿರುವುದು ನೋವಿನ ಸಂಗತಿ ಎಂದು ಕಾರ್ಯನಿರತ ಪರ್ತಕರ್ತರ (ಕಾನಿಪ) ಧ್ವನಿ ಸಂಘಟನೆ ಹೇಳಿದೆ.

ಪತ್ರಕರ್ತರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವ ಸಂಘಟನೆಯ ಮುಖಂಡರು ಯಾದಗಿರಿ ಜಿಲ್ಲೆಯ ಹುಣಸಗಿ ತಹಶೀಲ್ದಾರ್‌ಗೆ ಸಲ್ಲಿಸಿದ್ದಾರೆ.

ಹಗಲು-ರಾತ್ರಿ ಎನ್ನದೆ ಸರ್ಕಾರ ಮತ್ತು ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ, ಪ್ರಾಣದ  ಹಂಗನ್ನು ತೊರೆದು ಭ್ರಷ್ಟಾಚಾರಗಳನ್ನು ಬಯಲಿಗಳೆಯುವುದಲ್ಲಿ ಪತ್ರಕರ್ತನ ಪಾತ್ರ ಪ್ರಮುಖವಾಗಿದೆ. ಆದರೂ ಸಹ, ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೂ ಪತ್ರಕರ್ತರು ಪರದಾಡುತ್ತಿರುವುದು ವಿಷಾದಕರ. ಸರ್ಕಾರದ ಕೈಯಲ್ಲಿರುವ ಕಾರ್ಮಿಕ ಇಲಾಖೆಯು ಕೂಡ ಇದ್ದು ಇಲ್ಲ್ಲದಂತಾಗಿದೆ.

Advertisements

ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ 800 ಪತ್ರಿಕೆಗಳಲ್ಲಿ, ಕಾರ್ಮಿಕ ಇಲಾಖೆಯಡಿಗೆ ಒಳಪಡದೆ, ನೊಂದಣಿಯಾಗದೇ ಆಯಾ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ (ವರದಿಗಾರರಿಗೆ) ಪಿಎಫ್‌(PF), ಇಎಸ್‌ಐ(E.S.I), ಪೇಸ್ಲಿಫ್, ವಾರದ ರಜೆ, ಮೀಡಿಯಾ ಕಿಟ್ ಹಾಗೂ ಇನ್ನೀತರ ಸೌಲಭ್ಯಗಳಿಂದ ವಂಚಿರತಾಗಿದ್ದಾರೆ.

ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ಪತ್ರಿಕೆ ನಡೆಸುವ ಬಂಡವಾಳಶಾಹಿಗಳ ಮೇಲೆ ಕಠಿಣ ನಿಲುವನ್ನು ತಾಳಬೇಕು. ಕಾರ್ಮಿಕ ಇಲಾಖೆಗೆ ನೊಂದಣಿಯಾಗುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ, ನಾಡಿನ 10 ಸಾವಿರಕ್ಕೂ ಹೆಚ್ಚು ವರದಿಗಾರರ ಜೀವನ ಹಸನಾಗುವುದು. ಜೊತೆಗೆ ತಮ್ಮನ್ನು ನಾಡಿನ ಪತ್ರಕರ್ತರು ʼಮಾಧ್ಯಮ ರಾಮಯ್ಯʼರೆಂದು ಕೊಂಡಾಡುವ ಕಾಲ ಸನ್ನಿಹಿತವಾಗಬಹುದು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಮ್ಮ ಅಧಿಕಾರ ಅವಧಿಯಲ್ಲಿ ನ್ಯಾಯ ಒದಗಿಸಿರುವ ನೀವು, 2023/24ರ ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂಪಾಯಿಗಳನ್ನು ಐದು ಗ್ಯಾರಂಟಿಗಳಿಗೆ ಮೀಸಲಿರಿಸಿದ್ದೀರಿ.

ಉಚಿತ ಬಸ್-ಪಾಸ್ ಗಾಗಿ ಹೋರಾಟ ನಡಸುತ್ತಾ ಬಂದಿದ್ದರೂ, ಹತ್ತು ಸಾವಿರ ಪತ್ರಕರ್ತರ ಬಗ್ಗೆ ತಮಗ್ಯಾಕೆ ಉದಾಸೀನ. ಇನ್ನು ವಾರ್ತಾ ಇಲಾಖೆಯಂತೂ ಅಕ್ರಿಡೇಷನ್ ನೆಪದಲ್ಲಿ ತಾರತಮ್ಯ ಮಾಡುತ್ತ ಬಂಡವಾಳ ಶಾಹಿಗಳಿಗೆ ಮಣೆ ಹಾಕಿ, ಮಾಲೀಕರಿಗೆ ಅವರ ಹೆಂಡತಿಗೆ ಮಕ್ಕಳಿಗೆ ಹಾಗೂ ಅಳಿಯಂದಿರಿಗೆ ಮೀಸಲಾಗಿರುವ ಅಕ್ರಿಡೇಷಿನ್ ಕಾರ್ಡ್ ಗಳು ಮೀಸಲಾಗಿವೆ.

ಕೇವಲ 400 ಜನ  ವರದಿಗಾರರಿಗೆ ಮಾತ್ರ ಮಾಧ್ಯಮ ಮಾನ್ಯತಾ ಕಾರ್ಡ್ ದೊರೆತಿದೆ. ಮಾನ್ಯತೆಯಲ್ಲಿ ಖಾಯಂ ನೇಮಕಾತಿ ಆದೇಶ ಹೊಂದಿ ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಮಾತ್ರ ಎಂಬ ನಿಯಮವಿದ್ದರೂ, ಈ ನಿಯಮವನ್ನು ಗಾಳಿಗೆ ತೂರಿ ಖಾಯಂ ನೇಮಕಾತಿ ಆದೇಶ ವಿಲ್ಲದಂತವರಿಗೆ ಅಕ್ರಿಡೇಷನ್ ಒದಗಿಸಿರುವುದು ಅಕ್ಷಮ್ಯ ಅಪರಾಧ.

ಇಂದು ಕೇವಲ 178 ಜನ ಪತ್ರಕರ್ತರು ಮಾತ್ರ ಮಾಸಾಶನ ಪಡೆಯುತ್ತಿದ್ದಾರೆ. 4,000 ಸಾವಿರ ಕೋಟಿ ರೂಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಿ ಎರೆಡುವರೆ ಕೋಟಿ ಮಹಿಳಯರಿಗೆ, ಮಂಗಳ ಮುಖಿಯರಿಗೆ ರಾಜ್ಯಾಧ್ಯಂತ ಓಡಾಡಲು ಉಚಿತ ಬಸ್-ಪಾಸ್ ವ್ಯವಸ್ಥೆ ಮಾಡಿರುವ ತಾವುಗಳು, ಕೇವಲ ೧೦ ಸಾವಿರ ಪತ್ರಕರ್ತರಿಗೆ ರಾಜ್ಯದ ಆಯಾ ಜಿಲ್ಲೆಗಳಲ್ಲಿ ಜನತೆಯ ಪರ ಕಾರ್ಯನಿರ್ವಹಿಸಲು ಉಚಿತ ಬಸ್ಪಾಸ್ ಒದಗಿಸಿ. ಅದಕ್ಕೆ ತಗಲುವ ವೆಚ್ಚ ವಾರ್ಷಿಕ ೧೦ ಕೋಟಿ ರೂ.ಗಳು ಮಾತ್ರ ಎಂದು ಅಂದಾಜಿಸಲಾಗಿದೆ.

ಸಾಮಾಜಿಕ ಭದ್ರತೆಯಡಿಯಲ್ಲಿ 52 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲು ಮುಂದಾಗಿ, ಐದು ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ನೀಡುತ್ತಿರುವ ತಮಗೆ, ಪತ್ರಕರ್ತರ ಕೆಲ ಪ್ರಮುಖ ಬೇಡಿಕೆಗಳನ್ನು ಈಡೇರಿಸಿ. ತಮ್ಮ ಸಾಮಾಜಿಕ ಹರಿಕಾರ ಎಂಬ ಹೆಸರಿಗೆ ಬೆಲೆ ಹಾಗೂ ತಮ್ಮ ಮುಕುಟಕ್ಕೆ ಗರಿ.

ಈಗಾಲಾದರು ನಾಡಿನ ದೊರೆಯಾದ ತಾವುಗಳು ಎಚ್ಚೆತ್ತುಕೊಂಡು ಪತ್ರಕರ್ತರ ಬಗ್ಗೆ ಹಾಗೂ ಅವರ ಸಂಕಷ್ಟಗಳಿಗೆ ಆಸರೆಯಾಗಿ ಕಾನೂನು ಚೌಕಟ್ಟಿನಲ್ಲಿ ನ್ಯಾಯ ಒದಗಿಸುತ್ತೀರಿ ಎಂಬ ಅಚ್ಚಲ ನಂಬಿಕೆಯೊಂದಿಗೆ ನಾಡಿನ ಪತ್ರಕರ್ತರು.

21/8/2023ರಂದು ಖುದ್ದಾಗಿ ತಾವು ಕರೆದ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಒಂಬತ್ತು ಪತ್ರಕರ್ತರ ಸಂಘಟನೆಗಳ ಅಧ್ಯಕ್ಷರ ಸಭೆ ನಡೆದು ಪತ್ರಕರ್ತರ ಸಂಕಷ್ಟಗಳ ಬಗೆ ಮನವಿ ಸಲ್ಲಿಸಿ ಇಂದಿಗೆ ಒಂದು ತಿಂಗಳಾದರೂ, ಪ್ರತಿಫಲ ಮಾತ್ರ ಶೂನ್ಯ. ಡಿಸೆಂಬರ್  2023ರವರೆಗೆ ನಮ್ಮ ನಾಡಿನ ಪತ್ರಕರ್ತರಿಗೆ ಸರ್ಕಾರದಿಂದ ಮೂಲಸೌರ್ಕಯಗಳು ಸಿಗಬಹುದೆಂಬ ನಿರೀಕ್ಷೆಯಲ್ಲಿ. ಒಂದು ವೇಳೆ ನಿರೀಕ್ಷೆ ಹುಸಿಯಾದಲ್ಲಿ ಕಾನೂನು ಹೋರಾಟ ಅನಿವಾರ್ಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಭಟನೆ ವೇಳೆ ಬಾಪುಗೌಡ ಮೇಟಿ, ಶಿವು ರಾಠೋಡ, ಗಿರೀಶ ಬ್ಯಾಕೋಡ, ಜುಮ್ಮಣ್ಣ ಗುಡಿಮನಿ, ಮಹಮ್ಮದ ಶರೀಫ್, ಪ್ರಸಾದ ಹಿರೇಮಠ, ಶೇಖರ ರಾಜನಕೋಳೂರು, ಲಾಲಸಿಂಗ ರಾಠೋಡ ಉಪಸ್ಥಿತರಿದ್ದರು.

ಪತ್ರಕರ್ತರ ಬೇಡಿಕೆಗಳು

  • ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ, ಪ್ರಾಣದ ಹಂಗನ್ನು ತೊರೆದು, ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಪತ್ರಕರ್ತರುಗಳಿಗೆ, ಸರ್ಕಾರ ಪತ್ರಕರ್ತರ ರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸಬೇಕು.
  • ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 3೦೦ಕ್ಕೂ ಅಧಿಕ ಸಿಬ್ಬಂದಿಯನ್ನು ಸರ್ಕಾರ ಕೂಡಲೇ ನೇಮಕಗೊಳಿಸಿ, ಪತ್ರಕರ್ತರ ಕಾರ್ಯಗಳನ್ನು ತ್ವರಿತವಾಗಿ ಆಗುವಂತೆ ಕ್ರಮ ವಹಿಸಬೇಕು.
  • ಅಕ್ರಿಡೇಟ್ ಹಾಗೂ ನಾನ್ ಅಕ್ರಿಡೇಟ್ ಜರ್ನಲಿಸ್ಟ್ ಎನ್ನುವ ತಾರತಮ್ಯವನ್ನು ಸರ್ಕಾರ ಈ  ಕೂಡಲೇ ಕೈ ಬಿಡಬೇಕು.  
  • ದಿನ ಪತ್ರಿಕೆಗಳ ರೀತಿಯಲ್ಲೇ ನಿಯತಕಾಲಿಕೆಗಳು ಕೂಡ ʼRegistrar of News paper Indiaʼ ವತಿಯಿಂದ ಪರವಾನಗೆ ಹೊಂದಿದ ಪತ್ರಿಕೆಗಳನ್ನು ಹೊರತರುವ ಹಿನ್ನೆಲೆಯಲ್ಲಿ  ಈ ಪತ್ರಕರ್ತರಿಗೂ ಮಾಸಾಶನ ದೊರೆಯಲೇಬೇಕು. ಪತ್ರಕರ್ತರ ಮಾಸಾಶನ ನಿಯಮ 7ರಲ್ಲಿ  ವಾರ, ಪಾಕ್ಷಿಕ, ಮಾಸಿಕ ಹಾಗೂ ಇನ್ನೀತರ ಪತ್ರಿಕೆಗಳ ಪ್ರತಿನಿಧಿಗಳು ಮಾಸಾಶನ ಪಡೆಯಲು ಅರ್ಹತೆ ಹೊಂದಿರುವುದಿಲ್ಲವೆಂದು ಸ್ಪಷ್ಟವಾಗಿ ನಿಬಂಧನೆ ಹೊರಡಿಸಿರುವುದು ಕೂಡ ಕಾನೂನು ಬಾಹಿರ.
  • ಜಿಲ್ಲಾ ವ್ಯಾಪ್ತಿಯಲ್ಲಿರುವ ಪತ್ರಿಕಾ ಭವನಗಳನ್ನು ಯಾವೊಂದು ಪತ್ರಿಕಾ ಸಂಘಟನೆಗಳಿಗೆ ನೀಡದೆ. ಆಯಾ ಜಿಲ್ಲಾಧಿಕಾರಿಗಳ ಸುಪರ್ಧಿಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳ ಮೂಲಕ ನಿರ್ವಹಣೆಗೆ ಆದೇಶಿಸಬೇಕು.
  • ನಾಡಿನ ಪತ್ರಕರ್ತರ ಹಿತಕ್ಕಾಗಿ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
  • ಪತ್ರಕರ್ತರು ಕರ್ತವ್ಯ ನಿರ್ವಹಿಸುವಾಗ ಸಹಜ ಸಾವು ಮತ್ತು ಅಪಘಾತದಿಂದ ಮೃತಪಟ್ಟರೆ, ಆ ಪತ್ರಕರ್ತರ ಕುಟಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ.ಗಳ ಪರಿಹಾರ ಒದಗಿಸಬೇಕು.
  • 2018 -19ರ ಆಯವ್ಯಯದಲ್ಲಿ, ದಿನ ಪತ್ರಿಕೆ ಹಂಚುವವರ (ಪತ್ರಿಕಾ ವಿತರಕರು) ಕ್ಷೇಮಾಭಿವೃದ್ದಿಗೆ 2 ಕೋಟಿಯ ಕ್ಷೇಮನಿಧಿ. ಅಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಘೋಷಣೆಯಾಗಿದ್ದರು, ಹೇಳಿಕೆಗೆ ಮಾತ್ರ ಸೀಮಿತವಾದ ಈ ನಿಧಿಯನ್ನು ಕೂಡಲೆ ಪತಿಕಾ ವಿತರಕರ ಕ್ಷೇಮಾಭಿವೃದ್ದಿಯ ಖಾತೆಗೆ ಸರ್ಕಾರ ಜಮಾವಣೆ ಮಾಡಬೇಕು.
  • ಈ ಮನವಿಯ ಹೋರಾಟವಾದ ಒಂದು ತಿಂಗಳ ನಂತರ ರಾಜ್ಯಾಧ್ಯಂತ ನಮ್ಮ ಕಾನಿಪ ಧ್ವನಿ ಸಂಘಟನೆಯ ಸದಸ್ಯರುಗಳಿಂದ, ನಾಡಿನ ನೊಂದಂತ ಪತ್ರಕರ್ತರ ಪರ ರಕ್ತದಿಂದ ಸಹಿ ಮಾಡಿದ ಪತ್ರದ ಚಳುವಳಿ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ತಲುಪವವರೆಗೂ ಹೋರಾಟ ನಡೆಸಲಾಗುವುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X