- ಹೊಸ ಅಂಗನವಾಡಿ ನಿರ್ಮಾಣಕ್ಕೆ ಹಳೆ ಕಟ್ಟಡದ ಕಲ್ಲು, ಮಣ್ಣು ಬಳಕೆ
- ಕಳಪೆ ಕಾಮಗಾರಿ ತಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಔರಾದ್ ತಾಲೂಕಿನ ವಡಗಾಂವ (ದೇ) ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅಂಗನವಾಡಿ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಪರಿಶೀಲಿಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಗ್ರಾಮಸ್ಥರ ಆಗ್ರಹಿಸಿದರು.
ಈ ಕುರಿತು ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಎಂ. ಅವರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದ ಗ್ರಾಮಸ್ಥರ ಅಂಗನಾಡಿ ಕಳಪೆ ಗಾಮಗಾರಿ ತಡೆಹಿಡಿದು ಕ್ರಮ ಜರುಗಿಸಲು ಒತ್ತಾಯಿಸಿದರು.
“ಗ್ರಾಮದ ಹಳೆ ಸರ್ಕಾರಿ ನೆಲ ಸಮಾನಗೊಳಿಸಿ ಅದೇ ಶಾಲೆಯ ಕಲ್ಲು, ಮಣ್ಣು ಹೊಸ ಅಂಗನವಾಡಿ ಕಟ್ಟಡ ಕಾಮಗಾರಿಗೆ ಬಳಸುತ್ತಿದ್ದಾರೆ. ಹೊಸ ಅಂಗನವಾಡಿ ನಿರ್ಮಿಸುವ ಜಾಗದಲ್ಲಿ ದೊಡ್ಡದಾದ ಕೆರೆ ಹಾಗೂ ಮೂರು ಕುಡಿಯುವ ನೀರಿನ ಟ್ಯಾಂಕ್ ಗಳಿವೆ. ಅವೈಜ್ಞಾನಿಕವಾಗಿ ಕೆರೆಯ ಪಕ್ಕದಲ್ಲಿ ನಿರ್ಮಿಸುತ್ತಿರುವ ಅಂಗನವಾಡಿ ಕಟ್ಟಡ ಬೇಗನೇ ಶಿಥಿಲಾವಸ್ಥೆಗೆ ತಲಪುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಮೌಖಿಕವಾಗಿ ತಿಳಿಸಿದರೂ ಗುತ್ತಿಗೆದಾರರು ಕ್ಯಾರೇ ಎನ್ನದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ” ಎಂದು ಗ್ರಾಮಸ್ಥರು ದೂರಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಂಗನವಾಡಿ ಕಳಪೆ ಕಾಮಗಾರಿ ತಡೆಹಿಡಿಯದಿದ್ದರೆ. ಮುಂಬರುವ ದಿನಗಳಲ್ಲಿ ಉಗ್ರವಾಗಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ; ಆಟ್ರಾಸಿಟಿ ಪ್ರಕರಣ ದಾಖಲು
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ನಾಗೇಶ್ ಮೇತ್ರೆ, ರೋಹಿದಾಸ್ ಸಿಂಗೆ, ರವಿ ಮಾದಪ್ಪ ಗಂಗಾ, ಮಲ್ಲಮ್ಮ ಚಿಕನಂಗೆ, ರಾಜು ವಿಶ್ವನಾಥ್, ಸಿದ್ದಪ್ಪ ಚಿಕನಂಗೆ, ಬಸಪ್ಪ ಧರ್ಮಜೆ, ಪ್ರಕಾಶ್ ಮಸಗಲೆ, ವಿಶ್ವನಾಥ್ ಹಂಗರ್ಗೆ, ಶಂಕ್ರಪ್ಪ ಧರ್ಮಜೆ, ಗಣಪತಿ ದೇಶಮುಖ, ಉಮೇಶ್ ನೆಳಗೆ ಸೇರಿದಂತೆ ಇತರರಿದ್ದರು.