ಹಾವೇರಿ | ದಲಿತ ಸಮುದಾಯಕ್ಕೆ ಮತಾಂತರಗೊಂಡ ಜನರಿಗೆ ಮೀಸಲಾತಿ ನೀಡುವಂತೆ ದಸಂಸ ಒತ್ತಾಯ

Date:

ಕ್ರೈಸ್ತ, ಮುಸ್ಲಿಂ, ಹಿಂದುಳಿದ ಜಾತಿಗಳಿಂದ ದಲಿತ ಸಮುದಾಯಕ್ಕೆ ಸ್ವಯಂ ಇಚ್ಛೆಯಿಂದ ಮತಾಂತರಗೊಂಡ ಜನರಿಗೆ ಮೀಸಲಾತಿ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಒತ್ತಾಯಿಸಿದೆ.

ಹಾವೇರಿಯಲ್ಲಿ ದಸಂಸ ಮತ್ತು ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯ ಮುಖಂಡರು ಸಭೆ ನಡೆಸಿದ್ದಾರೆ. ಸಭೆಯಲ್ಲಿ “ದಲಿತ ಸಮುದಾಯಕ್ಕೆ ಮತಾಂತರ ಹೊಂದಿದವರಿಗೆ ಮೀಸಲಾತಿ ನೀಡಲೇಬೇಕು” ಎಂಬ ನಿರ್ಣಯವನ್ನು ಅಂಗೀಕರಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ದಸಂಸ ಮುಖಂಡ ಉಡಚಪ್ಪ ಮಾಳಗಿ, “ದಲಿತ ಸಮುದಾಯಕ್ಕೆ ಸ್ವಯಂ ಇಚ್ಛೆಯಿಂದ ಮತಾಂತರ ಹೊಂದಿರುವ ಕ್ರೈಸ್ತ, ಮುಸ್ಲಿಂ, ಹಿಂದುಳಿದ ಜನರಿಗೆ ಇವರಿಗೆ ಮೀಸಲಾತಿ ವಿಸ್ತರಣೆ ಕೋರಿರುವ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ವ್ಯಾಪಕ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಕೆ.ಜಿ ಬಾಲಕೃಷ್ಣನ್ ಆಯೋಗ ರಚಿಸಿದೆ. ಈ ಸಮಯದಲ್ಲಿ, ದಲಿತ ಸಂಘಟನೆಗಳು ಮೀಸಲಾತಿ ವಿಸ್ತರಣೆ ಕುರಿತು ಸಮಗ್ರ ವರದಿಯನ್ನು ಆಯೋಗಕ್ಕೆ ನೀಡಬೇಕಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಭೆಯಲ್ಲಿ ದಸಂಸ ಮುಖಂಡ ಮಂಜಪ್ಪ ಮರೋಳ, ಎನ್.ಟಿ ಮಂಜುನಾಥ, ಮಂಜಪ್ಪ ಹರಪನಹಳ್ಳಿ, ಅಕ್ಕಮ್ಮ ಮರೋಳ, ಮಂಜಪ್ಪ ದೊಡ್ಡ ಕರಿಯಮ್ಮನವರ, ಮಹೇಶಣ್ಣಾ ಹರಿಜನ, ಹನುಮಂತ ಹೌಸಿ,ವಿಭೂತಿ ಶೆಟ್ಟಿ, ಹನುಮಂತಪ್ಪ ಸಿ.ಡಿ,ಅಡೆವೆಪ್ಪ ಬಿದರಕೊಪ್ಪ,ಮಾಲತೇಶ ಕರ್ಜಗಿ,ಮಲ್ಲೇಶ ಕರ್ಜಗಿ, ರೈತ ಮುಖಂಡ ಹನುಮಂತಪ್ಪ ಕಬ್ಬಾರ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಶತಮಾನದಲ್ಲೇ ಕಂಡರಿಯದಂತಹ ಭೀಕರ ಬರಗಾಲಕ್ಕೆ ಬೆಳೆ ಕಳೆದುಕೊಂಡು ರೈತರು ಬೀದಿ ಪಾಲಾಗಿದ್ದಾರೆ....

ಹಾವೇರಿ | ಸಾಮೂಹಿಕ ಅತ್ಯಾಚಾರ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ನಾಲ್ಕರ್‌ ಕ್ರಾಸ್‌ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ...

ಹಾವೇರಿ | ಬೆಂಕಿಗೆ ಆಹುತಿಯಾದ ಕಣದಲ್ಲಿ ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳ: ಲಕ್ಷಾಂತ ರೂ. ನಷ್ಟ

ಕಣದಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 17 ಟ್ರ್ಯಾಕ್ಟರ್ ಮೆಕ್ಕೆಜೋಳದ ತೆನೆಯ ರಾಶಿಗೆ ಬೆಂಕಿ...

ಹಾವೇರಿ | ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ತಿರುವು: ಮಹಿಳೆ ಅಪಹರಿಸಿ ಏಳು ಮಂದಿಯಿಂದ ಅತ್ಯಾಚಾರ

ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದಿದ್ದ ಅನೈತಿಕ ಪೊಲೀಸ್‌ಗಿರಿ ಪ್ರಕರಣ ಈಗ ಹೊಸ...