ಕೃಷ್ಣರಾಜಪೇಟೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೂತನವಾಗಿ ನಿರ್ಮಿಸಿರುವ ಕೆ ಎನ್ ಕೆಂಗೇಗೌಡ ರೈತ ಭವನದ ಕಟ್ಟಡದ ಉದ್ಘಾಟನೆ ಡಿಸೆಂಬರ್ 4ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ. ಅಂದು ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪ್ರಾಥಮಿಕ ಕೃಷಿ ಪತಿನ ಸಹಕಾರ ಸಂಘದ ಅಧ್ಯಕ ಕೆ ಪುರುಷೋತ್ತಮ್ ತಿಳಿಸಿದರು.
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, “ತಾಲೂಕಿನ ಸಮಸ್ತ ಸಾರ್ವಜನಿಕರು ಸಹಕಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಯಾಗಬೇಕು” ಎಂದು ಕೋರಿದರು.

“ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಸಹಕಾರ ಸಚಿವ ಕೆ ಎನ್ ರಾಜಣ್ಣ, ಹಾಲಿ ಶಾಸಕ ಎಚ್ ಡಿ ಮಂಜುನಾಥ್, ಮಾಜಿ ಸಚಿವ ಡಾ ಕೆ ಸಿ ನಾರಾಯಣಗೌಡ, ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ ಎಲ್ ದೇವರಾಜು ಅವರು ಆಗಮಿಸಲಿದ್ದಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಶ್ರಮಜೀವಿ ಪೌರಕಾರ್ಮಿಕರು, ದಿಟವಾದ ಕಾಯಕಯೋಗಿಗಳು: ನಾಗೇಶ್
ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿ ಭಾರತ್, ಸಂಘದ ಉಪಾಧ್ಯಕ್ಷೆ ಶೋಭಾ, ಬಸವರಾಜ್ ಸಿ, ಇಒ ಕಾಂತರಾಜು, ಆದಿಲ್ ಪಾಷ ರಾಘವೇಂದ್ರ, ಜಲೇಂದ್ರ, ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಚಕ್ರಪಾಣಿ, ಜವರೇಗೌಡ, ಚಂದ್ರಶೇಖರ್, ಮಂಜೇಗೌಡ ಬಲರಾಮೇಗೌಡ, ರಾಜ ನಾಯಕ ರಾಜಯ್ಯ, ಮೇಲ್ವಿಚಾರಕ ಕೆ ಆರ್ ರಘು ಸೇರಿದಂತೆ ಸ್ಥಳೀಯ ಪತ್ರಕರ್ತರು ಹಾಗೂ ಸಿಬಂದಿ ವರ್ಗದವರು ಇದ್ದರು.

ವರದಿ: ರಂಗನಾಥ್ ಮಾಕವಳ್ಳಿ