ಬಕ್ರೀದ್, ತ್ಯಾಗ ಬಲಿದಾನದ ಪ್ರತೀಕ ಮತ್ತು ಸಹಿಷ್ಣುತೆ ಬಕ್ರೀದ್‌ನ ಅಗತ್ಯ ಸಂದೇಶವಾಗಿದೆ. ಇದನ್ನು ವಿಶ್ವಾದ್ಯಂತ ಮುಸ್ಲಿಂ ಬಾಂಧವರು ಧಾರ್ಮಿಕ ಉತ್ಸಾಹ ಮತ್ತು ಪ್ರಾರ್ಥನೆ ಮಾಡುವ ಮೂಲಕ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ಬಕ್ರೀದ್ ಹಬ್ಬಕ್ಕೆ ಶುಭ ಕೋರಿದರು.
“ಮೈದಾನದ ಬಕ್ರೀದ್ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ಶಾಂತಿ, ಸೌಹಾರ್ದತೆಯನ್ನು ಸಕಾರಾತ್ಮಕತೆಯನ್ನು ತರಲಿ ಮತ್ತು ನಿಮ್ಮ ಕನಸುಗಳನ್ನು ಈಡೇರಿಸಲು ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ” ಎಂದು ಶುಭಾಶಯ ಕೋರಿದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ನಡೆದಿರುವ ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಯಾವುದೇ ರೀತಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಅಬಕಾರಿ ಸಚವ ಆರ್ ಬಿ ತಿಮಾಪೂರ ಸ್ಪಷ್ಟವಾಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಶಾಲೆ-ಕಾಲೇಜ್, ಹಾಸ್ಟೆಲ್‌ಗಳಿಗೆ ಸಮರ್ಪಕ ಬಸ್ ಸೇವೆ ಒದಗಿಸಲು ಎಸ್ಎಫ್ಐ ಆಗ್ರಹ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಕರಣವನ್ನು ಸಿಐಡಿ ಸಂಸ್ಥೆ ತನಿಖೆ ನಡೆಸುತ್ತಿದ್ದು, ಕೋರ್ಟ್ ನಿರ್ದೇಶನದಂತೆ ಇಂದು ತನಿಖಾಧಿಕಾರಿಗಳ ಮುಂದೆ ವಿಚಾರಣೆಗಾಗಿ ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದ್ದು, ಅದರಂತೆ ಇಂದು ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಹಾಜರಾಗುತ್ತಿದ್ದಾರೆ. ಆದರೆ ಇಳಿವಯಸಿನಲ್ಲಿ ಅವರಿಗೆ ಇಂತಹ ಪ್ರಕರಣವಾಗಬಾರದಾಗಿತ್ತು. ಆದರೆ ಸಂತ್ರಸ್ತೆ ದೂರು ದಾಖಲಿಸಿರುವುದರಿಂದ ಪ್ರಕರಣಕ್ಕೆ ಅವರು ತನಿಖೆಗೆ ಸಹಕರಿಸಲೇಬೇಕಾಗುತ್ತದೆ. ಇದರಿಂದ ಕೆಲವರು ಮುಂದಿಟ್ಟುಕೊಂಡು ಜಾತಿ ಲೇಪನ ಮಾಡಲು ಮುಂದಾಗುತ್ತಿದ್ದಾರೆ. ಇದರಲ್ಲಿ ಸರ್ಕಾರದ ಯಾವುದೇ ರೀತಿಯ ಪಾತ್ರವಿರುವುದಿಲ್ಲ. ಮುಖ್ಯಮಂತ್ರಿಗಳಾಗಲೀ, ಉಪಮುಖ್ಯಮಂತಿಗಳಾಗಲೀ ಈ ಪ್ರಕರಣದಲ್ಲಿ ಯಾವುದೇ ರೀತಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
