ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ್‌ನ ಎಡಿಎಲ್ಆರ್ ಆಫೀಸ್‌ನಲ್ಲಿ ಸರ್ವೇಯರ್ ಮಹಾಂತೇಶ್ ಕವಳಿಕಟ್ಟಿಯವರು ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸುನಗ್ ಗ್ರಾಮದ ಅಣ್ಣೇಶಿ ದೇವಲೂ ಲಮಾಣಿ ಎಂಬುವವರು ಈ ಬಗ್ಗೆ ದೂರು ನೀಡಿದ್ದು, ಬಾಗಲಕೋಟ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುನಗ ಗ್ರಾಮದ ಸರ್ವೆ ನಂ. 250/1 ರಲ್ಲಿರುವ 08ಎಕರೆ ಜಮೀನಿನ ಪಿ.ಟಿ ಶೀಟ್ ಮಾಡಿಕೊಡುವ ಸಲುವಾಗಿ ಸರ್ವೆಯರ್ ಮಹಾಂತೇಶ್ ಕವಳಿಕಟ್ಟಿ ಈ ಮೊದಲು 28,000ರೂ. ಫೀ ಎಂದು ತೆಗೆದುಕೊಂಡಿದ್ದರು.
ಕೆಲಸ ಮಾಡಿ ಕೊಟ್ಟಿರಲಿಲ್ಲ ನಂತರ ದೂರು ದಾರ ಅಣೇಶಿ ಪಿ.ಟಿ ಶೀಟ್ ಬಗ್ಗೆ ವಿಚಾರಿಸಿದಾಗ ಇನ್ನೂ 37,000 ರೂ. ಲಂಚಕ್ಕೆ ಬೇಡಿಕೆ ಇಟ್ಟು, ಸದ್ಯ 15,000ರೂಗಳನ್ನೂ ತಂದುಕೊಡಲು ತಿಳಿಸಿದ್ದರು.
ಆರೋಪಿ ಮಹಾಂತೇಶ್ ಕವಳಿಕಟ್ಟಿ ಕಚೇರಿಯಲ್ಲಿ 15 ಸಾವಿರ ಲಂಚದ ಹಣ ಪಡೆದುಕೊಳ್ಳುವಾಗ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹನುಮಂತರಾಯ ಐಪಿಎಸ್ ಪೊಲೀಸ್ ಅಧೀಕ್ಷಕರು ಮತ್ತು ಕರ್ನಾಟಕ ಲೋಕಾಯುಕ್ತರ ಮಾರ್ಗದರ್ಶನದಲ್ಲಿ, ಪುಷ್ಪಲತಾ ಎನ್‌ಡಿಎಸ್‌ಪಿ ಕರ್ನಾಟಕ ಲೋಕಾಯುಕ್ತರ ನೇತೃತ್ವದ ತಂಡ ಟ್ರ್ಯಾಪ್ ಪ್ರಕ್ರಿಯೆಯನ್ನು ನಡೆಸಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.