ಬಾಗಲಕೋಟೆ ಭಾಗದ ರೈತರ ಬಹುದಿನದ ಬೇಡಿಕೆಯಾಗಿದ್ದ ಬ್ಯಾಂಕ್‌ನ ಸ್ವಂತ ಕಟ್ಟಡದ ಭಾಗ್ಯ ಇಂದು ನಿಮಗೆಲ್ಲರಿಗೂ ದೊರೆತಿದ್ದು ಹೆಮ್ಮೆಯ ಸಂಗತಿ. ಬಿಡಿಸಿಸಿ ಬ್ಯಾಂಕ್ ಯೋಜನೆಗಳನ್ನು ರೈತರು, ವ್ಯಾಪಾರಸ್ಥರು ಹಾಗೂ ಸಂಘ ಸಂಸ್ಥೆಗಳು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.
ಬಾಗಲಕೋಟೆ ತಾಲೂಕಿನ ಸಮೀಪದ ರಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಬಿಡಿಸಿಸಿ ಬ್ಯಾಂಕ್ ಶಾಖೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
“ಮುಂದಿನ ದಿನಗಳಲ್ಲಿ ಬಿಡಿಸಿಸಿ ಬ್ಯಾಂಕಿನಿಂದ ರೈತರಿಗೆ ನಾನಾ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ” ಎಂದು ಹೇಳಿದರು.
ಶಾಸಕ ಎಚ್ ವೈ ಮೇಟಿ ಮಾತನಾಡಿ, “ಈ ಭಾಗದ ಪ್ರಮುಖ ಗ್ರಾಮಗಳಾದ ಸುತಗುಂಡಾರ, ನಾಯನೇಗಲಿ, ಮಂಕಣಿ, ತಿಮ್ಮಾಪುರ, ಬಿಲ್ ಕೆಗೂರ, ಹೊಸೂರ, ರಾಂಪುರ, ಆಚನೂರ ಸೇರಿದಂತೆ ನಾನಾ ಗ್ರಾಮಗಳಿಗೆ ಕೊಂಡಿಯಾಗಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ರೈತರು ಬ್ಯಾಂಕಿನ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಅನ್ಯಭಾಷೆ ಪ್ರೀತಿಸಿ, ಕನ್ನಡ ಭಾಷೆ ಉಸಿರಾಗಿರಬೇಕು: ಶಾಸಕ ವಿಜಯಾನಂದ ಕಾಶಪ್ಪನವರ
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ್ ಮೇಟಿ, ಕಾಂಗ್ರೆಸ್ ಮುಖಂಡ ಸಂಗಮೇಶ ದೊಡ್ಡಮನಿ, ರಾಂಪುರ ಪಿಕೆಪಿಎಸ್ ಅಧ್ಯಕ್ಷ ಬಲರಾಮ ಪವಾರ, ಜಟ್ಟಪ್ಪ ಮಾದಾಪುರ, ಶಾಖಾ ವ್ಯವಸ್ಥಾಪಕ ಮಾಂತೇಶ ಕಟಗಿ, ಮುತ್ತಪ್ಪ ಹುಗ್ಗಿ ಮಲ್ಲು ದ್ಯಾವಣ್ಣನವರ್, ಮುರುಗೇಶ ಕಡ್ಡಿಮಟ್ಟಿ ಇದ್ದರು.