ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯು ಸ್ಥಗಿತಗೊಂಡಿದ್ದು, ಅದನ್ನು ಪುನಾರಾರಂಭ ಮಾಡಬೇಕೆಂದು ಹಲವಾರು ಸಂಘಟನೆಗಳು ಒತ್ತಾಯಿಸಿವೆ.
ಕಾರ್ಖಾನೆ ಪುನರಾರಂಭಕ್ಕಾಗಿ ಹೋರಾಟ ನಡೆಸಲು ಮುಂದಾಗಿರುವ ರೈತ, ಕಾರ್ಮಿಕ ಸಂಘಟನೆಗಳ ಮುಖಂಡರು ಲೋಕಾಪೂರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಕಾರ್ಖಾನೆಯ ಮರು ಚಾಲನೆಗಾಗಿ ಸಮಗ್ರವಾಗಿ ಚರ್ಚೆ ಮತ್ತು ಮುಂದಿನ ಹೋರಾಟದ ರೋಪ – ರೇಷಗಳ ಕುರಿತು ಚರ್ಚಿಸಲು ಜೂನ್ 28ರಂದು ಮುಧೋಳದ ಬಿಎಲ್‌ಬಿಸಿಐಬಿಯಲ್ಲಿ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಎಲ್ಲ ಮುಧೋಳ ತಾಲೂಕಿನ ರೈತರು, ಕಾರ್ಮಿಕರು, ಎಲ್ಲ ಸಂಘ-ಸಂಸ್ಥೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಸುಭಾಷ ಶಿರಬೂರ, ಬಸಪ್ಪ ಸಂಗನ್ನವರ, ಗೋವಿಂದಪ್ಪ ಮೆಟಗುಡ್ಡ ಮತ್ತು ಯುವ ಮುಖಂಡರಾದ ಡಾ. ಯಲ್ಲಪ್ಪ ಹೆಗಡೆ,ರಾಜು ಜಮಾದರ ಉಪಸ್ಥಿತರಿದ್ದರು.
ವರದಿ : ಖಾಜಾಮೈನುದ್ದಿನ ತಹಶೀಲ್ದಾರ್, ಸಿಟಿಜನ್ ಜರ್ನಲಿಸ್ಟ್