ಮೈಸೂರು | ಸರ್ವಾಧಿಕಾರಿ ಆಡಳಿತಕ್ಕೆ ಜನರು ಪಾಠ ಕಲಿಸಿದ್ದಾರೆ: ಡಾ. ಹೆಚ್.ಸಿ ಮಹದೇವಪ್ಪ

Date:

ಜನರ ಬದುಕು ಹಾಗೂ ಹಕ್ಕುಗಳಿಗೆ ತೊಂದರೆಯಾದರೆ ಯಾವ ಪರಿಸ್ಥಿತಿ ಬಂದೊದಗುತ್ತದೆ ಎಂಬುದನ್ನು ಈ ಬಾರಿಯ ಚುನಾವಣೆಯಲ್ಲಿ ಜನರು ಮಹತ್ವದ ಸಂದೇಶ ನೀಡಿದ್ದಾರೆ. ಸರ್ವಾಧಿಕಾರಿ ಆಡಳಿತಕ್ಕೆ ಪಾಠ ಕಲಿಸಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ತಿಳಿಸಿದರು.

- Advertisement -

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಭೀಮ ಬಳಗ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಈ ಬಾರಿಯ ಫಲಿತಾಂಶವು ಪ್ರಧಾನಿ ಅವರು ಕೂಡ ಪಾರ್ಲಿಮೆಂಟಿನಲ್ಲಿ ಸಂವಿಧಾನಕ್ಕೆ ತಲೆಬಾಗಿ ನಮಸ್ಕರಿಸುವಂತೆ ಮಾಡಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

“ಸಂವಿಧಾನ ಜಾರಿಗೆ ಬಂದು ಎಪ್ಪತೈದು ವರ್ಷವಾದರೂ ದೇಶದಾದ್ಯಂತ ಸಂವಿಧಾನದ ವಿಷಯದಲ್ಲಿ ಈ ಮಟ್ಟದ ಜಾಗೃತಿ ಇರಲಿಲ್ಲ. ವಿರೋಧ ಪಕ್ಷ ಕುಸಿಬಾರದು ಹಾಗೆಯೇ ಆಡಳಿತ ಪಕ್ಷ ಮೆರೆಯಲೂಬಾರದು ಎಂಬಂತೆ ಪ್ರಜಾಪ್ರಭುತ್ವ ವಿರೋಧಿಸುವವರಿಗೆ ಅತ್ಯಂತ ಬದ್ಧತೆಯಿಂದ ಕೂಡಿರುವ ತೀರ್ಮಾನವನ್ನು ದೇಶದ ಜನರು ಕೈಗೊಂಡಿದ್ದಾರೆ” ಎಂದರು.

“ಸಂವಿಧಾನ ಜಾಗೃತಿ ಜಾಥವು ಹೊಸ ಸಂಚಲನ ಮೂಡಿಸಿದೆ. ಭಾರತ ದೇಶದ ಇತಿಹಾಸಲ್ಲಿ ಸರ್ಕಾರವೊಂದು ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ಸಂವಿಧಾನದ ಕುರಿತು ಅರಿವು ಮೂಡಿಸಿದ ಏಕೈಕ ಸರ್ಕಾರ ನಮ್ಮದಾಗಿದೆ. ಈ ಬಗ್ಗೆ ವಿದೇಶದ ಚಿಂತಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಾಬ ಸಾಹೇಬರ ವಿಚಾರಗಳನ್ನು ವಿರೋಧಿಸಿದವರು ಕೂಡ ಸಂವಿಧಾನ ದೇಶದ ಜನರ ಹಕ್ಕನ್ನು ರಕ್ಷಣೆ ಮಾಡುತ್ತದೆ ಎಂಬುದನ್ನು ಮನಗಂಡಿದ್ದಾರೆ” ಎಂದು ತಿಳಿಸಿದರು.

“ಅಸಮಾನತೆಯನ್ನು ತೊಡೆದು ಸಮಸಮಾಜದ ನಿರ್ಮಾಣ ಮಾಡಿ, ಸ್ಥಿರ ಅಭಿವೃದ್ಧಿಯ ಗುರಿ ಕಡೆಗೆ ಹೆಜ್ಜೆ ಇಡುವಂತಹ ಸಂವಿಧಾನದ ಮಹತ್ತರವಾದ ಉದ್ದೇಶದ ಆಲೋಚನೆಯನ್ನು ಜನರಲ್ಲಿ ಮೂಡಿಸಲಾಗಿದೆ‌. ಎಲ್ಲಾ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳುವಂತೆ ಒತ್ತಡವನ್ನು ಹೇರಲಾಗಿದೆ” ಎಂದು ವಿವರಿಸಿದರು.

“ಸಂವಿಧಾನದಲ್ಲಿ ದೇಶದ ಅಭಿವೃದ್ಧಿ ಹಾಗೂ ಎಲ್ಲರ ಹಕ್ಕುಗಳ ರಕ್ಷಣೆ ಪ್ರಮುಖವಾಗಿದೆ. ಎಲ್ಲಾ ವರ್ಗದ ಜನರು ಸೇರಿ ಸಾಮಾಜಿಕ ನ್ಯಾಯದ ರಥವನ್ನು ಎಳೆಯಲು ಪ್ರಾರಂಭಿಸಿದ್ದೇವೆ. ಇದು ಸಮೃದ್ಧ ಭಾರತದ ಕುರುಹಾಗಿದೆ. ಸಂವಿಧಾನದ ಆಶಯ ಜಾರಿ ಮಾಡುವ ಸ್ಥಾನದಲ್ಲಿ ಸಂವಿಧಾನ ಗೌರವಿಸುವವರನ್ನು ಕೂರಿಸಬೇಕಿದೆ” ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, “ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದು ಶೋಷಿತರು ಸಮಾನತೆಯಿಂದ ಬದುಕಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾರಣ. ಬಹುಸಂಖ್ಯಾತ ಜನರಿಗೆ ಸ್ವಾಭಿಮಾನ ಬದುಕನ್ನು ಅವರು ಕಲ್ಪಿಸಿಕೊಟ್ಟಿದ್ದಾರೆ” ಎಂದರು.

“ಹಿಂದುಳಿದ ವರ್ಗದವರಿಗೂ ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸಿದ ಅವರು, ಮಹಿಳೆಯರಿಗೆ ಸಮಾನ ಹಕ್ಕು ದೊರಕಿಸಿ ಕೊಡುವ ಸಲುವಾಗಿ ಕಾನೂನು ಮಂತ್ರಿಗೆ ರಾಜೀನಾಮೆ ನೀಡಿದ ಮಹಾನ್ ನಾಯಕರು. ಅವರ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಜಾಗೃತರಾಗಿ ನಮ್ಮ ಹಕ್ಕು ಪಡೆಯಲು ಹೋರಾಟ ಮಾಡಬೇಕಿದೆ” ಎಂದು ಸಲಹೆ ನೀಡಿದರು.

“ಸಂವಿಧಾನ ವಿರೋಧಿಗಳು ಹಾಗೂ ಅಂಬೇಡ್ಕರ್ ಅವರ ಆಶಯವನ್ನು ವಿರೋಧಿಸುವವರು ಇಂದು ಅಧಿಕಾರದಲ್ಲಿರುವುದು ದುರದೃಷ್ಟಕರ. ಕಾಂಗ್ರೆಸ್ ಪಕ್ಷವು ಸಂವಿಧಾನದ ಆಶಯಕ್ಕೆ ಗೌರವ ನೀಡುತ್ತಾ ಬಂದಿದೆ. ದಲಿತರು ಹಾಗೂ ಹಿಂದುಳಿದವರ ಏಳಿಗೆಗೆ ಸರ್ಕಾರವು ಬದ್ಧವಾಗಿದೆ” ಎಂದು ಹೇಳಿದರು.

ಶಾಸಕರಾದ ದರ್ಶನ್ ಧ್ರುವನಾರಾಯಣ ಮಾತನಾಡಿ, “ಕಿರಿಯ ವಯಸ್ಸಿನ ನಾನು ಶಾಸಕನಾಗಿರುವುದು ಹಾಗೂ ಬಡ ರೈತಾಪಿ ಕುಟುಂಬದಿಂದ ಬಂದ ತಂದೆಯವರಾದ ಧ್ರುವನಾರಾಯಣ ಅವರು ಒಂದು ಮತದಿಂದ ಗೆದ್ದು ರಾಜಕೀಯ ಪ್ರವೇಶಿಸಲು ಬಾಬಸಾಹೇಬರು ನೀಡಿದ ಸಂವಿಧಾನವೇ ಕಾರಣ” ಎಂದು ಹೇಳಿದರು.

“ನಮ್ಮ ಸರ್ಕಾರದ ಪಂಚ ಗ್ಯಾರಂಟಿಯು ನಾಡಿನ ಬಡವರು, ಮಹಿಳೆಯರು, ಶೋಷಿತರ ಜೀವನ ಸುಧಾರಣೆಗೆ ತರುವ ಮಹತ್ವದ ಯೋಜನೆಯಾಗಿದೆ. ಈ ಮೂಲಕ ಸಂವಿಧಾನದ ಮೂಲ ಆಶಯ ಪಾಲಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಹರ್ಷವರ್ಧನ್, ಹಿರಿಯ ಪತ್ರಕರ್ತರಾದ ಕೆ.ದೀಪಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಹುಚ್ಚಯ್ಯ, ಉಪಾಧ್ಯಕ್ಷ ಲೋಕೇಶ್, ಮಾಜಿ ಮೇಯರ್ ಪುರುಷೋತ್ತಮ್, ವಕೀಲರಾದ ಉಮೇಶ, ಕಾಂಗ್ರೆಸ್ ಪಕ್ಷದ ಮುಖಂಡರಾದ ಇಂಧನ್ ಬಾಬು, ನಾಗೇಶ್, ರಾಜು ಕುರಿಹುಂಡಿ, ಮಹದೇವಯ್ಯ, ನಿಂಗಣ್ಣ, ಮರಯ್ಯ, ನಂಜುಂಡಸ್ವಾಮಿ ಸೇರಿದಂತೆ ಭೀಮ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರಂತರತೆಯೇ ರಂಗಭೂಮಿಯ ನಿಜವಾದ ಶಕ್ತಿ: ಕೋಟಿಗಾನಹಳ್ಳಿ ರಾಮಯ್ಯ

ರಂಗಭೂಮಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ಇಚ್ಛಾಶಕ್ತಿ, ಬದ್ಧತೆ ಹಾಗೂ ಸಾಂಸ್ಕೃತಿಕ ಹೊಣೆಗಾರಿಕೆ...

ದಸರಾ, ಅಭಿಮನ್ಯು ಬೀಳ್ಕೊಡುಗೆಗೆ ಗಾಯನದ ಸ್ಪರ್ಶ

ವಿಶ್ವವಿಖ್ಯಾತ ಮೈಸೂರು ದಸರಾ ಹಾಗೂ ದಸರಾ ಆನೆ ಅಭಿಮನ್ಯುವಿನ ಬೀಳ್ಕೊಡುಗೆಯನ್ನು ಒಳಗೊಂಡ...

ರಂಗಭೂಮಿ ಅಭಿನಯ ಕಲಿಸುವುದಷ್ಟೇ ಅಲ್ಲ, ಬದುಕನ್ನೂ ಕಲಿಸುವ ಶಾಲೆ: ಶ್ರೀನಿವಾಸ ಪಾಲಹಳ್ಳಿ

ರಂಗಭೂಮಿ ಕೇವಲ ಅಭಿನಯ ಕಲಿಸುವ ವೇದಿಕೆಯಲ್ಲ. ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಮಾನವೀಯ...

ಅ.2ರಂದು ಟಿ. ನರಸೀಪುರದಲ್ಲಿ ಕೋಮು ಸೌಹಾರ್ದತೆಗಾಗಿ ಬೃಹತ್ ಸಮಾವೇಶ

ಟಿ. ನರಸೀಪುರ ಪಟ್ಟಣದಲ್ಲಿ ಇತ್ತೀಚೆಗೆ ಗಣೇಶ ವಿಸರ್ಜನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಉಂಟಾಗಿರುವ...