ಬಾಗಲಕೋಟೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರುಗಳಿಗೆ ಕಾಂಗ್ರೆಸ್ ನಿಷ್ಠಾವಂತರಿಗೆ ಲೋಕಸಭಾ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳಿಗೆ ಬಾಗಲಕೋಟೆಗೆ ಸ್ವ ಜಿಲ್ಲೆಯವರಿಗೆ ಟಿಕೆಟ್ ಕೊಡಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜ ಗಂಗೂರ್ ಆಗ್ರಹಿಸಿದರು.
ಬಾಗಲಕೋಟೆ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.
“ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ವಿ ಕಾಶಪ್ಪನವರಿಗೆ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್ ಕೊಡಬೇಕು. ಈಗಾಗಲೇ ಜಿಲ್ಲೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಕಟ್ಟಿ ಜಿಲ್ಲೆಯಲ್ಲಿ ಹಿಂದುಳಿದ, ದಲಿತರ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಪರ ಹಾಗೂ ರೈತರ ಪರವಾಗಿ ಹಗಲು ಇರುಳು ಶ್ರಮವಹಿಸಿ ಅವರ ಕುಂದುಕೊರತೆಗಳಿಗೆ ಸ್ಪಂದಿಸುತ್ತಿರುವ ವೀಣಾ ಕಾಶಪ್ಪನವರಿಗೆ ಈ ಬಾರಿಯ ಲೋಕಸಭಾ ಟಿಕೆಟ್ ಕೊಡಬೇಕು. ಅವರ ಗೆಲುವಿಗಾಗಿ ಹಾಗೂ ಜಿಲ್ಲೆಯ ಅಭಿವೃದ್ದಿಗಾಗಿ ವಿವಿಧ ಸಂಘಟನೆಗಳು ಒಗ್ಗಟಾಗಿ ಅವರ ಪರವಾಗಿ ನಿಲ್ಲುತ್ತೇವೆ. ಅಭಿವೃದ್ದಿಯ ಹಾಗೂ ಜಿಲ್ಲೆಯ ಬೆಳವಣಿಗೆಯ ಬಗ್ಗೆ ಅಪಾರ ಕನಸು ಕಂಡಿರುವ ವ್ಯಕ್ತಿಗೆ ಟಿಕೆಟ್ ನೀಡಬೇಕು” ಎಂದು ಒತ್ತಾಯಿಸಿದರು.
“ವೀಣಾ ವಿ ಕಾಶಪ್ಪನವರಿಗೆ ಎಂಪಿ ಟಿಕೆಟ್ ನೀಡಬೇಕೆನ್ನಲು ಹಲವಾರು ಕಾರಣಗಳಿವೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಜಿಲ್ಲೆಯ ತುಂಬೆಲ್ಲ ಗ್ರಾಮ ವಾಸ್ತವ್ಯ ಮಾಡಿ ಜನರ ನಾಡಿಮಿಡಿತ ಅರಿತ ಮೊದಲ ಅಧ್ಯಕ್ಷೆ ಅವರು. ಕಾಂಗ್ರೆಸ್‌ನಿಂದ ಜಿಲ್ಲಾ ಅಧ್ಯಕ್ಷೆ ಆದರೂ ಕೂಡಾ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪ್ರಮಾಣ ಪತ್ರ ಪಡೆದದು ಹೆಮ್ಮೆಯ ವಿಷಯ” ಎಂದು ಹೇಳಿದರು.
“ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡು ಗಂಡ, ಮಕ್ಕಳು, ಸಂಸಾರವೆಂದು ಮನೆಯಲ್ಲಿ ಕೂರದೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಜಿಲ್ಲೆಯ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಕಷ್ಟ ಸುಖದಲ್ಲಿ ಬಾಗಿಯಾದ ನಾಯಕಿ ಅಚರು” ಎಂದು ಶ್ಲಾಘಿಸಿದರು.
“ಒಂದು ಬಾರಿ ಎಂಎಲ್‌ಎ ಆದರೆ ಸಾಕು ಅವರನ್ನು ಹಿಡಿಯೋರು ಯಾರೂ ಇಲ್ಲದಂತೆ ಮೆರೆಯುವ ನಾಯಕ/ನಾಯಕಿಯರ ಮಧ್ಯೆ, ಮಾವ ಮಾಜಿ ಸಚಿವ, ಗಂಡ ಎಂಎಲ್‌ಎ, ತಾನು ಕೆಪಿಸಿಸಿ ಮಹಿಳಾ ಉಪಾಧ್ಯಕ್ಷೆ ಹಾಗೂ ತವರು ಮನೆಯವರೂ ಕೂಡ ಶ್ರೀಮಂತ ಮನೆತನ ಆದರೂ ಕೂಡ ಒಂಚೂರು ಅಹಂಕಾರ ಇಲ್ಲದೆ ಚಿಕ್ಕವರ ಜೊತೆಗೆ ಚಿಕ್ಕವರಾಗಿ ದೊಡ್ಡವರ ಜೊತೆಗೆ ದೊಡ್ಡವರಾಗಿ ಎಲ್ಲರೊಟ್ಟಿಗೆ ನಗು ನಗುತ ಇರುವ ಮನಸ್ಸುಳ್ಳ ನಾಯಕಿ. ಅಂತಹವರಿಗೆ ಟಿಕೆಟ್ ನೀಡಬೇಕಾಗಿರುವುದು ಅಗತ್ಯವಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಎಂದೂ ಜಾತ್ಯತೀತರಲ್ಲ: ಸಚಿವ ಕೆ.ಎನ್ ರಾಜಣ್ಣ
“ಅಧಿಕಾರ ಸಿಕ್ಕಿದರೆ ಹೇಗೆಲ್ಲ ದುಡ್ಡು ಮಾಡಬಹುದೆಂದು ಯೋಚಿಸುವ ನಾಯಕರ ಮಧ್ಯ ಯುವ ಪೀಳಿಗೆಯ ಭವಿಷ್ಯಕ್ಕೆ ಏನೆಲ್ಲ ಸಹಾಯ ಮಾಡಬಹುದೆಂದು ಯೋಚಿಸಿ ಸ್ವಂತ ಹಣದಲ್ಲಿ ವಿವಿಕೆ ಫೌಂಡೇಷನ್ ಮೂಲಕ ಯುವ ಜನರ ಭವಿಷ್ಯ ರೂಪಿಸುತ್ತಿರುವ ನಾಯಕಿ. ʼನಾನು, ನನ್ನ ಹೆಂಡತಿ, ಗಂಡ, ತಮ್ಮ, ನಾದನಿ, ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಅಳಿಯ ಹೀಗೆ ಕುಟುಂಬದವರಿಗೆ ಅಧಿಕಾರ ಸಿಗಬೇಕೆಂದು ದುರಾಸೆ ಇರುವ ನಾಯಕರ ಮಧ್ಯ ನಿಷ್ಠಾವಂತ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಿ ಬೆಳೆಸುವ ಗುಣವುಳ್ಳ ನಾಯಕಿ. ಹಾಗಾಗಿ ಅಧಿಕಾರ ಇಲ್ಲದಿದ್ದರೂ ಕೂಡಾ ಸದಾ ಜನರೊಂದಿಗೆ ನಿಂತ ನಾಯಕಿಗೆ ಅವಕಾಶ ಸಿಗಬೇಕೆಂಬುದು ಕಾರ್ಯಕರ್ತರ ಆಸೆ. ಹಾಗಾಗಿ ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರಿಗೆ ಅವಕಾಶ ನೀಡುತ್ತದೆಯೆಂದು ನಮಗೆಲ್ಲ ಭರವಸೆ ಇದೆ” ಎಂದು ಹೇಳಿದರು.
