ನಮ್ಮಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಕೆಳಹಂತದ ಜನರಿಗೆ, ಮೀಸಲಾತಿ ಇರದೇ ಅರ್ಹತೆಗೆ ತಕ್ಕ ಅವಕಾಶಗಳು ದೊರೆಯಲು ಸಾಧ್ಯವಿಲ್ಲ. ಹಾಗಾಗಿ, ಮೀಸಲಾತಿ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷರಾದ ಪರಶುರಾಮ ಮಹಾರಾಜನವರ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮೀಸಲಾತಿ ಜನಕ ಛತ್ರಪತಿ ಜಯಂತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮೀಸಲಾತಿ-ಇತಿಹಾಸ ವರ್ತಮಾನ ಮತ್ತು ಭವಿಷ್ಯ ವಿಷಯವಾಗಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತಕ್ಕೆ ವಿದೇಶದಿಂದ ಬಂದ ಆರ್ಯರು ವೇದಗಳ ಮೂಲಕ ಉದ್ಯೋಗದ ಆಧಾರದ ಮೇಲೆ ಮರ್ಣಗಳನ್ನು ಸೃಷ್ಟಿಸಿದರು. ಇಂತಹ ಸಾಮಾಜಿಕ ಪಿಡುಗನ್ನು ಮೊದಲು ಖಂಡಿಸಿದ್ದು ಗೌತಮ ಬುದ್ಧ. ಆನಂತರದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ಸಂಘಟನೆ ಮೂಲಕ ಜಾತಿ, ವರ್ಗಭೇದ ರಹಿತ ಸಮಾಜ ನಿರ್ಮಾಣಕ್ಕೆ ಮೂವರು ಜಾತಿ ವ್ಯವಸ್ಥೆ ತೊಲಗಿಸಲು ಹಗಲಿರುಳು ಶ್ರಮಿಸಿದರು. ಬ್ರಿಟೀಷರ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ಮೂಲಕ ದೇಶದಲ್ಲಿ ಸಮಾನತೆ ನೆಲೆಸಲು ಭದ್ರ ಅಡಿಪಾಯ ಹಾಕಿದರು ಎಂದು ಹೇಳಿದರು.

ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಸಮಾನತೆಯ ಕಾರ್ಯಕ್ರಮವಾಗಿರುವ ಮೀಸಲಾತಿಯನ್ನು ನೀಡಿರುವುದೇ ದೊಡ್ಡ ತಪ್ಪು ಎಂದು ಬಿಂಬಿಸುವ ಉನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ದೇಶದಲ್ಲಿ ಖಾಸಗಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ದೊರೆಯುತ್ತಿದ್ದು, ಅಲ್ಲಿ ಮೀಸಲಾತಿರದ ಕಾರಣ ನಮಗೆ ಅನ್ಯಾಯವಾಗುತ್ತಿದೆ. ಹೇಗಿದ್ದರೂ ಮೀಸಲಾತಿಯ ಬಗ್ಗೆ ಕೇಳಿರಮೆ ಮನೋಭಾವನೆ ಬೆಳೆಸುವ ಕೆಲಸ ನಡೆಯುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನು ಓದಿದ್ದೀರಾ? ತುಮಕೂರು | ಬಂಡೆಕಲ್ಲು, ನೀರಿನ ಮಧ್ಯೆ 12 ಗಂಟೆ ಕಳೆದಿದ್ದು ಹೇಗೆ? ಬದುಕುಳಿದ ವಿದ್ಯಾರ್ಥಿನಿ ಹೇಳಿದ್ದು ಹೀಗೆ..
ಮರಾಠಾ ಸಮಾಜದ ಮುಖಂಡ ಬಸವಂತ ಕಾಟೆ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಮುಖಂಡ ಹನಮಂತ ತಿಮ್ಮಾಪುರ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ನಗರಸಭೆ ಸದಸ್ಯ ಸಂತೋಷ ಪಾರೋಪ, ಮರಾಠಾ ಸಮಾಜದ ಮುಖಂಡ ಮಾರುತಿ ಮಾನೆ, ಮುಸ್ಲಿ ಮುಖಂಡರಾದ ಸಮುದಾಯದ ಬೇಪಾರಿ, ರಾಜು ಬಾಗವಾನ, ಹಿಂದುಳಿದ ವರ್ಗಗಳ ಜಿಲ್ಲಾ ಮುಖಂಡ ಮುದಕಣ್ಣ ಆರ್.ಬಾಲರಾಜ, ಮುಖಂಡರಾದ ಗೋವಿಂದ ಕೌಲಗಿ, ಲಕ್ಷಣ ಮಾಲಗಿ, ಎಂ.ಬು ಚಿಕ್ಕೂರ, ರೈತ ಯುವ ಮುಖಂಡ ಡಾ.ಯಲ್ಲಪ್ಪ ಹೆಗಡೆ, ಶಂಕರ ಕಾಂಬಳೆ, ಸಂಜು ಕರೆನ್ನವರ, ಕಲ್ಲಪ್ಪ,ವಿ.ಎಸ್.ದೊಡಮನಿ, ರಾಘವೇಂದ್ರ ನೀಲನ್ನವರ ಶಫಿಕ್ ಬೇಪಾರಿ, ಯಶವಂತ ಚಿಕ್ಕೂರ, ಅಶೋಕ ಗುಂಕೇರ ಇದ್ದರು.
