ವಿದ್ಯುತ್ ಖಾಸಗೀಕರಣ ಮತ್ತು ಮೀಟರ್ ಅಳವಡಿಕೆಯಿಂದ ಭರಿಸಲಾಗದ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿದ್ಯುತ್ ಸಂಪರ್ಕಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಸರ್ಕಾರದ ಯೋಜನೆಯನ್ನು ವಿರೋಧಿಸಿ ರಾಜ್ಯಾದ್ಯಂತ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು
ಬಾಗಲಕೋಟೆ ಜಿಲ್ಲೆಯ ಮುಧೋಳ್ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ಪ್ರಾರಂಭಿಸಿ ಹೆಸ್ಕಾಂ ಕಚೇರಿ ಎದುರು ಸುಮಾರು ನಾಲ್ಕು ಗಂಟೆಗಳ ಕಾಲ ಮಳೆಯಲ್ಲೇ ಧರಣಿ ಸತ್ಯಾಗ್ರಹ ನಡೆಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ದುಂಡಪ್ಪ ಯರಗಟ್ಟಿ ಮಾತನಾಡಿ, “ಸರ್ಕಾರ ರೈತರನ್ನು ಆಧಾರ್ ಲಿಂಕ್ ಹೆಸರಿನಲ್ಲಿ ರೈತರ ವಿರುದ್ಧ ಪಿತೂರಿ ಮಾಡುತ್ತಿದೆ. ಸರ್ಕಾರ ಆಧಾರ ನೋಂದಣಿ ಮಾಡುವುದನ್ನು ಕೂಡಲೇ ಕೈಬಿಡಬೇಕು” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, “ಅಧಿಕಾರಿಗಳ ರೈತರಿಗೆ ಆಗುವ ನಷ್ಟ ಕಷ್ಟಗಳ ಬಗ್ಗೆ ಸ್ವವಿವರವಾಗಿ ಹೇಳುವ ಮೂಲಕ ಅಧಿಕಾರಿಗಳ ಗಮನ ಸೆಳೆದು ಇದು ಸಾಂಕೇತಿಕ ಪ್ರತಿಭಟನೆಯಾಗಿದೆ. ಕದ್ದುಮುಚ್ಚಿ ನೋಂದಣಿ ಕಾರ್ಯ ಮುಂದುವರೆದರೆ ರೈತರು ತೀವ್ರ ಹೋರಾಟಕ್ಕೆ ಇಳಿಯಬೇಕಾದೀತು” ಎಂದು ಎಚ್ಚರಿಕೆ ನೀಡಿದರು.
ಹೆಸ್ಕಾಂ ಅಧಿಕಾರಿ ಮಂಜುನಾಥ್ ಮಾತನಾಡಿ, “ಸರ್ಕಾರ ಆದೇಶದಂತೆ ಆಧಾರ್ ನೋಂದಣಿ ಕಾರ್ಯ ಮಾಡುತ್ತಿದ್ದೇವೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರದ ಆದೇಶ ಪಾಲನೆ ಮಾಡುತ್ತೇವೆ. ತಾತ್ಕಾಲಿಕವಾಗಿ ಆಧಾರ್ ನೋಂದಣಿ ಕಾರ್ಯವನ್ನು ಸಹಿತಗೊಳಿಸುತ್ತಿದ್ದೇವೆ” ರೈತ ಪ್ರತಿಭಟನಾಕಾರರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸೆ.1ರಿಂದ ‘ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ರಾಷ್ಟ್ರವ್ಯಾಪಿ ಅಭಿಯಾನ
ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆ ಕಬ್ಬು ಬೆಳೆಗಾರರ ಸಂಘದ ಪ್ರಮುಖರಾದ ನಾಗೇಶ್ ಸೊರಗಾಂವಿ, ಹನುಮಂತ ನಬಾಬ, ಮಹೇಶ್ ಪಾಟೀಲ, ಶಿವಪ್ಪ ಚೌದರಿ, ನಾಗೇಶ್ ಗೋಲಶೆಟ್ಟಿ ಮಾತನಾಡಿದರು.
ಕಲ್ಮೇಶ್ ಹಣಗುಜಿ, ಬಸುಮೇತ್ರಿ, ಮುದ್ದೇಶ ಗಾಯಕವಾಡ ಸೇರಿದಂತೆ ಮುಂತಾದ ರೈತ ನಾಯಕರು ಇದ್ದರು.