ಫೆಬ್ರವರಿ 22ರಿಂದ 23ವರೆಗೆ ನಡೆಯಲಿರುವ ರನ್ನ ವೈಭವದ ಹಿನ್ನಲೆಯಲ್ಲಿ ನಗರವನ್ನು ಶೃಂಗರಿಸಲು ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಭವನದಲ್ಲಿ ರನ್ನ ವೈಭವದ ಲೋಗೋ, ಪ್ರಚಾರದ ಪೋಸ್ಟ್ ಹಾಗೂ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದರು.
“ಮುಧೋಳ ನಗರದ ರಸ್ತೆ, ವೃತ್ತಗಳಿಗೆ ದೀಪಾಲಂಕಾರ ಮಾಡುವುದರ ಜತೆಗೆ ₹25 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ವೈಭವದಲ್ಲಿ ಕಾಯಾಕ್ರಮಗಳ ಗ್ರಾಮೀಣ ಕ್ರೀಡೆಗಳಿಗೂ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ. ಈ ಭಾಗದ ಮಲ್ಲಕಂಬ, ಕುಸ್ತಿ, ಕಬಡ್ಡಿ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದರು.
“ರನ್ನ ವೈಭವವನ್ನು ರಾಜ್ಯಮಟ್ಟದ ಕಾರ್ಯಕ್ರಮವನ್ನಾಗಿ ರೂಪಿಸಲು ಬೆಂಗಳೂರಿನಿಂದ ಮುಧೋಳಕ್ಕೆ ಆಗಮಿಸಿದ ರನ್ನರಥ, ಜಿಲ್ಲಾದ್ಯಂತ ಹಾಗೂ ಪ್ರಮುಖ ಮುಧೋಳದ ಪ್ರತಿ ಹಳ್ಳಿಗಳಿಗೂ ಸಂಚರಿಸಲಿದೆ. ಫೆಬ್ರವರಿ 22ರಂದು ರನ್ನರಥ ರನ್ನಬೆಳಗಲ್ಲಿ ಹಾಗೂ ಫೆಬ್ರವರಿ 23 ಮತ್ತು 24ರಂದು ಸಾಂಸ್ಕೃತಿ ಮುಧೋಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ವೈಭವ ಕೇವಲ ಮುಧೋಳ ನಗರಕ್ಕೆ ಸೀಮಿತವಾಗದೆ ನಾಡಹಬ್ಬವಾಗಬೇಕೆಂಬುದು ನಮ್ಮ ಆಶಯವಾಗಿದ್ದು, ಈ ನಾಡಹಬ್ಬ ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತೀರ್ಥಹಳ್ಳಿ | ಖ್ಯಾತ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ನಿಧನ
ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಸುನಂದಾ ಜಿಲ್ಲಾಧಿಕಾರಿ ಜಾನಕಿ ಕೆ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ್ ಮಹಾದೇವ ಸನಮುಡಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನಿತ್ ಬಿ ಆರ್, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ರನ್ನ ಪ್ರತಿಷ್ಠಾನದ ಸದಸ್ಯರಾದ ಸಂಗಮೇಶ ಕಲ್ಯಾಣಿ, ಸಿದ್ದು ಕಾಳಗಿ, ಎಸ್ ಎಸ್ ಹೊಸಕೋಟಿ, ಸರಗಣಾಚಾರಿ ಉದಪುಡಿ ಸೇರಿದಂತೆ ಇತರರು ಇದ್ದರು.