ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ವಿದ್ಯಾರ್ಥಿಗಳಲ್ಲಿ ಶಿಕ್ಷಕರಲ್ಲಿ ಜನಸಾಮಾನ್ಯರಲ್ಲಿ ವೈಜ್ಞಾನಿಕ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ. ನಿರಂತರವಾಗಿ ಇದೇ ರೀತಿಯ ಕಾರ್ಯಕ್ರಮಗಳು ಜರುಗಲಿ ಎಂದು ಸ್ವಾಮಿ ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ ಎನ್ ಪಾಟಿಲ್ ಹಾರೈಸಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಜಿಲ್ಲಾ ಘಟಕ ಬಾಗಲಕೋಟೆ ಹಾಗೂ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಬೀಳಗಿ ಇವರ ಸಂಯುಕ್ತ ಆಶ್ರಯದಲ್ಲಿ ಬೀಳಗಿ ತಾಲೂಕಿನ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಘಟಕ ಬೆಂಗಳೂರು ಉಪಾಧ್ಯಕ್ಷ ಡಾ. ರಾಜಾ ನಾಯಕ್ ಅವರು ಆಗಿನ ಕಾಲದ ಜೀವನಶೈಲಿ ಹಾಗೂ ಹೀಗಿರುವ ಜೀವನ ಶೈಲಿಯೊಂದಿಗೆ ವಿದ್ಯಾರ್ಥಿಗಳು ಮೊಬೈಲ್‌ಗಳ ಕೀಲಿನಿಂದ ದೂರವಿರಲು ಮೊಬೈಲಿನ ಮಾರಕ ಹಾಗೂ ಅದರಿಂದ ಉಂಟಾಗುವ ತೊಂದರೆಗಳು ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಮಾಜ ತಿದ್ದುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ: ದೊಡ್ಡಣ್ಣ ಬಜಂತ್ರಿ
ಮುಖ್ಯ ಅತಿಥಿಗಯಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಈ ಬಸವರಾಜು ಮಾತನಾಡಿ, “ಜನರೆಡೆಗೆ ವಿಜ್ಞಾನವನ್ನು ಕೊಂಡೊಯ್ಯೋಣ. ಹೆಚ್ಚೆಚ್ಚು ಜನರಿಗೆ ವಿಜ್ಞಾನವನ್ನು ಜನಪ್ರಿಯಗೊಳಿಸೋಣ” ಎಂದರು.
ನಾಗರಾಳ ವಿಶ್ರಾಂತ ಪ್ರಾಂಶುಪಾಲ ಸಾಗರ್ ತೆಕ್ಕಣ್ಣವರ್, ಬಾಗಲಕೋಟೆ ಜಿಲ್ಲಾಧ್ಯಕ್ಷ ಸಿದ್ದಣ್ಣ ಬಾಡಿಗೆ, ರಾಜಶೇಖರ್ ಮುತ್ತಿನ ಮಠ, ಗೌರಾವಧ್ಯಕ್ಷ ಬಿ ಸಿ ಹೊಸ ಗೌಡರ, ಅಧ್ಯಕ್ಷ ಸದಾನಂದ ಏಳಗಂಟಿ ಸೇರಿದಂತೆ ಬಹುತೇಕರು ಇದ್ದರು.
