ತಾಲೂಕಿನ ಪೋತೇಪಲ್ಲಿ ಹಾಲು ಉತ್ಪಾಧಕರ ಸಹಕಾರ ಸಂಘದ ಆಡಳಿತ ಮಂಡಳಿ 10 ನಿರ್ದೇಶಕ
ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 8 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಮೂಲಕ, ಉಳಿದ ಎರಡು ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಅಯ್ಕೆಗೊಂಡಿರುವುದಾಗಿ ಚುನಾವಣಾ ಅಧಿಕಾರಿ ಶಮ್ಸ್ ತರ್ಬಜ್ ಘೋಷಣೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ..? ಬಾಗೇಪಲ್ಲಿ | ಎಸ್. ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟ ರಾಜ್ಯಕ್ಕೆ 4ನೇ ಟಾಪರ್ ಆದ ಬಾಗೇಪಲ್ಲಿ ಯಶಸ್ವಿನಿ
ಬಾಗೇಪಲ್ಲಿ ತಾಲೂಕಿನ ಪೋತೇಪಲ್ಲಿ ಹಾಲು ಉತ್ಪಾಧಕರ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಪಿ.ವಿ.ಕೃಷ್ಣಾರೆಡ್ಡಿ, ಪಿ.ಎನ್.ನಂಜಿರೆಡ್ಡಿ, ಶಿವಪ್ಪ, ಪಿ.ಸಿ.ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ, ಲಕ್ಷಿ ನರಸಪ್ಪ, ವೇಣುಗೋಪಾಲರೆಡ್ಡಿ, ಸುಬ್ಬರಾಯಪ್ಪ ಮತದಾನದ ಮೂಲಕ ಅಯ್ಕೆಗೊಂಡಿರುತ್ತಾರೆ, ಬಿಸಿಎಂ(ಎ) ಮೀಸಲು ಕ್ಷೇತ್ರಕ್ಕೆ ಶ್ರೀನಿವಾಸಲು ಹಾಗೂ ಮಹಿಳಾ ಮೀಸಲು ಕ್ಷೇತ್ರಕ್ಕೆ ಸತ್ಯಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು, ಎರಡನೇ ನಾಮಪತ್ರ ಸಲ್ಲಿಸದ ಕಾರಣ ಬಿಸಿಎಂ(ಎ) ಮೀಸಲು ಕ್ಷೇತ್ರಕ್ಕೆ ಶ್ರೀನಿವಾಸಲು ಮಹಿಳಾ ಮೀಸಲು ಕ್ಷೇತ್ರಕ್ಕೆ ಸತ್ಯಮ್ಮ ಅವಿರೋಧವಾಗಿ ಅಯ್ಕೆಗೊಂಡಿರುತ್ತಾರೆ.
ಬಾಗೇಪಲ್ಲಿ| ಪೋತಪಲ್ಲಿ ಹಾಲು ಉತ್ಪಾದಕರ ಆಡಳಿತ ಮಂಡಳಿಗೆ ನಿರ್ದೇಶಕರು ಆಯ್ಕೆ
ಪೋಸ್ಟ್ ಹಂಚಿಕೊಳ್ಳಿ:





