ಈ ದಿನ ಸಂಪಾದಕೀಯ | ಎಸ್ಸೆಸ್ಸೆಲ್ಸಿ-ಪಿಯುಸಿ ಫಲಿತಾಂಶದಲ್ಲಿ ಭಾರೀ ಸುಧಾರಣೆ; ಕಳಂಕ ತಪ್ಪಿಸಿಕೊಂಡ ಸರ್ಕಾರಿ ಶಾಲೆಗಳು

Date:

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ಶಿಕ್ಷಣ ತಜ್ಞರ ಸಲಹೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಸರ್ಕಾರಿ ಶಾಲಾ ಸುಧಾರಣೆಗೆ ಸಂಬಂಧಿಸಿದಂತೆ ಈ ಹಿಂದಿನ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ ಸರ್ಕಾರಿ ಶಾಲಾ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಬಹುದು. ಈ ವರ್ಷದ ಫಲಿತಾಂಶ ಇಂತಹ ಹತ್ತು ಹಲವು ಸುಧಾರಣಾ ಕ್ರಮಗಳಿಗೆ ನಾಂದಿಯಾಗಲಿ.

- Advertisement -

ಕರ್ನಾಟಕ ಸರ್ಕಾರ ಈ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಯಾವುದೇ ಗೊಂದಲವಿಲ್ಲದೇ ನಡೆಸಿರುವುದು ಹಾಗೂ ಫಲಿತಾಂಶದಲ್ಲಿಯೂ ಗಣನೀಯ ಪ್ರಗತಿ ಸಾಧಿಸಿರುವುದು ನಿಜಕ್ಕೂ ಪ್ರಶಂಸನೀಯ. ಪ್ರಶ್ನೆ ಪತ್ರಿಕೆ ಲೀಕ್‌ ಆಗುವುದಾಗಲಿ, ನಕಲು ಮಾಡಿ ವಿದ್ಯಾರ್ಥಿಗಳು ಡಿಬಾರ್‌ ಆಗಿರುವುದು, ನಕಲು ಮಾಡಲು ಪರೀಕ್ಷಕರೇ ಅವಕಾಶ ನೀಡುವುದು, ಪ್ರಶ್ನೆ ಪತ್ರಿಕೆ ದೋಷ, ಪಠ್ಯದಾಚೆಗಿನ ಪ್ರಶ್ನೆ… ಇಂತಹ ದೂರುಗಳಿಲ್ಲದೇ ಅಥವಾ ಯಾವುದೇ ಗೊಂದಲವಿಲ್ಲದೇ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶೇಕಡಾವಾರು ಫಲಿತಾಂಶದಲ್ಲಿ ಗಣನೀಯ ಏರಿಕೆಯಾಗಿರುವುದು ಶಿಕ್ಷಣ ಇಲಾಖೆಯ ಸುಧಾರಣಾ ಕ್ರಮಗಳ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಸರ್ಕಾರಿ ಶಾಲೆಗಳು ʼಶೂನ್ಯ ಫಲಿತಾಂಶʼದ ಕಳಂಕದಿಂದ ಮುಕ್ತಿ ಪಡೆದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಈ ಮಧ್ಯೆ ಸರ್ಕಾರಿ ಶಾಲೆಗಳು ಮೂಲಸೌಕರ್ಯವಿಲ್ಲದೇ ನಲುಗುತ್ತಿವೆ, ವಿಲೀನದ ಹೆಸರಿನಲ್ಲಿ ಸರ್ಕಾರವೇ ಶಾಲೆಗಳನ್ನು ಮುಚ್ಚುತ್ತಿದೆ ಎಂಬ ಆರೋಪದಲ್ಲಿ ಸತ್ಯವಿದೆ. ಆದರೆ, ಸರ್ಕಾರವು ಶಿಕ್ಷಣದ ಗುಣಮಟ್ಟ, ಪರೀಕ್ಷಾ ಪದ್ಧತಿ ಸುಧಾರಣೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳಗಿರುವ ವಿದ್ಯಾರ್ಥಿಗಳನ್ನು ಮೇಲೆತ್ತುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಸರ್ಕಾರಿ ಶಾಲೆಗಳ ಬಗ್ಗೆ ಭರವಸೆ ಮೂಡಿಸುವತ್ತ ಹೆಜ್ಜೆಯಿಟ್ಟಿರುವುದಂತೂ ಸ್ಪಷ್ಟ.

ನಿನ್ನೆ ಹೊರಬಿದ್ದ ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡಿದರೆ, ಕಳೆದ ವರ್ಷಕ್ಕಿಂತ ಈ ಬಾರಿ ಪಾಸಾದವರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಪರೀಕ್ಷೆ ಬರೆದ 7.70 ಲಕ್ಷ ವಿದ್ಯಾರ್ಥಿಗಳಲ್ಲಿ 7.24 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 14 % ಹೆಚ್ಚು ಫಲಿತಾಂಶ ದಾಖಲಾಗಿದೆ. ಅಚ್ಚರಿಯೆಂದರೆ ಈ ಬಾರಿ ಶೂನ್ಯ ಫಲಿತಾಂಶ ದಾಖಲಿಸಿದ ಒಂದೇ ಒಂದು ಸರ್ಕಾರಿ ಶಾಲೆಯೂ ಇಲ್ಲ. 22 ಖಾಸಗಿ ಶಾಲೆಗಳು ಶೂನ್ಯ ಫಲಿತಾಂಶ ಮತ್ತು 5 ಅನುದಾನಿತ ಶಾಲೆಗಳು ಶೂನ್ಯ ಫಲಿತಾಂಶ ನೀಡಿವೆ. ಸರ್ಕಾರಿ ಶಾಲೆಗಳು ಈ ಮಟ್ಟಿಗೆ ಉತ್ತಮ ಹಾದಿಯಲ್ಲಿ ಸಾಗುತ್ತಿರುವುದು ನಿಜಕ್ಕೂ ರಾಜ್ಯದ ಶಿಕ್ಷಣ ಕ್ಷೇತ್ರದ ಮೇಲಿನ ಭರವಸೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ. ಕಳೆದ ವರ್ಷ ಶೇ.100 ಫಲಿತಾಂಶ ದಾಖಲಿಸಿದ ಸರ್ಕಾರಿ ಶಾಲೆಗಳ ಸಂಖ್ಯೆ 766, ಆದರೆ ಈ ಬಾರಿ ಆ ಸಂಖ್ಯೆ 2,393! ಅಂದರೆ ಮೂರು ಪಟ್ಟು ಹೆಚ್ಚಳವಾಗಿದೆ. ಇದು ನಿಜಕ್ಕೂ ಅಸಾಧಾರಣ ಸಾಧನೆ. ಕಳೆದ ವರ್ಷದ ಕಳಪೆ ಫಲಿತಾಂಶದ ನಂತರ ಇಲಾಖೆ ಹಾಕಿಕೊಂಡ 29 ಅಂಶಗಳ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿರುವುದು ಮತ್ತು ಅದರ ಫಲ ಈ ವರ್ಷದ ಫಲಿತಾಂಶದಲ್ಲಿ ಎದ್ದು ಕಾಣುತ್ತಿದೆ. ಕಳೆದ ವರ್ಷ ಶೂನ್ಯ ಫಲಿತಾಂಶ ಬಂದ ಶಾಲೆಗಳ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗಿತು. ಅಷ್ಟೇ ಅಲ್ಲ ಮುಂದಿನ ವರ್ಷ ಶೂನ್ಯ ಫಲಿತಾಂಶ ಬಂದರೆ ಶಿಕ್ಷಕರನ್ನೇ ಹೊಣೆ ಮಾಡುವ ಎಚ್ಚರಿಕೆ ನೀಡಲಾಗಿತ್ತು. ಇಲಾಖೆ ಅಷ್ಟೇ ಮಾಡಿ ಸುಮ್ಮನೆ ಕೂರದೇ ಸುಧಾರಣಾ ಕ್ರಮಗಳನ್ನು ಸೂಚಿಸಿದೆ. ಅದನ್ನು ಅಧಿಕಾರಿಗಳು, ಶಿಕ್ಷಕರು, ಪೋಷಕರೂ ಪಾಲಿಸಿದ್ದಾರೆ.

ಮುಖ್ಯವಾಗಿ ಸರ್ಕಾರಿ ಶಾಲೆಗಳು ಶಿಕ್ಷಕರ  ಕೊರತೆ ಎದುರಿಸುತ್ತಿದ್ದವು. ಆದರೆ ಈ ಶೈಕ್ಷಣಿಕ ವರ್ಷದ ಆರಂಭ ಜೂನ್ 1 ರಿಂದಲೇ ಅಗತ್ಯವಿರುವಷ್ಟು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಇದರಿಂದ ಬೋಧನೆಗೆ ಯಾವುದೇ ಅಡೆತಡೆಯಿಲ್ಲದಂತೆ ನೋಡಿಕೊಳ್ಳಲಾಗಿದೆ.  ಜಿಲ್ಲಾಧಿಕಾರಿಗಳು ಮತ್ತು ಸಿ.ಇ.ಒಗಳು ಇದರ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿದ್ದಾರೆ. ಡಿಸೆಂಬರ್ ಒಳಗಡೆ ಪಠ್ಯಕ್ರಮ ಪೂರ್ಣಗೊಳಿಸುವಿಕೆ, ವಿದ್ಯಾರ್ಥಿಗಳ ವರ್ಗೀಕರಣ (ಉತ್ತಮ / ಸರಾಸರಿ / ಕಡಿಮೆ), ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ನಡೆಸುವುದು, ಮಾನಸಿಕ ಆರೋಗ್ಯದ ಕಡೆ ಗಮನ, ಮೊಬೈಲ್ ಮತ್ತು ಸೋಷಿಯಲ್ ಮೀಡಿಯಾ ಬಳಕೆ ನಿಯಂತ್ರಣ, ವೃತ್ತಿ ಮಾರ್ಗದರ್ಶನ, ಪಾಠವಾರು ಪರೀಕ್ಷೆಗಳು, ನಿರಂತರ ಮೌಲ್ಯಮಾಪನ, ಪರೀಕ್ಷೆಯಲ್ಲಿ ಪಾರದರ್ಶಕತೆ (ವೆಬ್‌ಕಾಸ್ಟಿಂಗ್) ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಶಾಲೆಗಳಿಗೆ ಡಿಸೆಂಬರ್ ಒಳಗೆ ಪಠ್ಯಕ್ರಮ ಪೂರ್ಣಗೊಳಿಸಲು ಸೂಚನೆ ನೀಡಲಾಗಿತ್ತು. ಇದರಿಂದಾಗಿ ಪುನರಾವರ್ತನೆಗೆ ಸಾಕಷ್ಟು ಸಮಯ ಸಿಕ್ಕಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯ ಕುರಿತು ಕೆ.ಎಸ್.ಇ.ಎ.ಬಿ  ಮತ್ತು ಡಿ.ಎಸ್.ಇ.ಆರ್.ಟಿ  ವತಿಯಿಂದ ಎಲ್ಲ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗಾಗಿ ವಿಭಾಗ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಈ ಎಲ್ಲಾ ಸಾಂಘಿಕ ಪ್ರಯತ್ನದ ಫಲವಾಗಿ ಸರ್ಕಾರಿ ಶಾಲೆಗಳು ಶೂನ್ಯ ಫಲಿತಾಂಶದ ಕಳಂಕದಿಂದ ಹೊರ ಬಂದಿವೆ. ಅಷ್ಟೇ ಅಲ್ಲ ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭರವಸೆಯ ಕಿರಣ ಮೂಡಿಸಿದೆ. ಜೊತೆಗೆ ತೃತೀಯ ಭಾಷೆ ಹಿಂದಿ ಕಲಿಕೆಯ ಹೊರೆಯನ್ನು ಇಳಿಸಲಾಗಿದೆ. ಮುಂದಿನ ವರ್ಷದಿಂದ ಗ್ರೇಡ್‌ ನೀಡಲಾಗುತ್ತದೆ. ಈ ವರ್ಷ ಗ್ರೇಡ್‌ ನೀಡುವ ಘೋಷಣೆಯನ್ನು ಪರೀಕ್ಷೆಗೆ ಮೂರು ದಿನ ಅಷ್ಟೇ ಇದ್ದಾಗ ಮಾಡಿರುವ ಕಾರಣ ಕೋರ್ಟ್‌ ಅದಕ್ಕೆ ತಡೆ ನೀಡಿದೆ.

ಆದರೆ, ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪಾಸಾಗಲು ಇದ್ದ ಅಂಕದ ಮಿತಿಯನ್ನು ಕಡಿಮೆಗೊಳಿಸಿರುವುದು ಶಿಕ್ಷಣ ತಜ್ಞರ ಸಲಹೆ ಪರಿಗಣಿಸದಿರುವುದು ಸರಿಯಲ್ಲ. ಇದುವರೆಗೆ ಒಟ್ಟು ಶೇ 35 ಪಾಸಾಗಲು ಇತ್ತು. ಈಗ ಅದನ್ನು 33%ಕ್ಕೆ ಇಳಿಸಲಾಗಿದೆ. ಪಾಸಾಗಲು ಎಸ್ಸೆಸ್ಸೆಲ್ಸಿಗೆ 625ಕ್ಕೆ 206 ಮತ್ತು ಪಿಯುಸಿಗೆ 600ರಲ್ಲಿ 198 ಅಂಕ ಸಾಕು! ಲಿಖಿತ ಪರೀಕ್ಷೆಯಲ್ಲಿ 80ಕ್ಕೆ 24, ಪಿಯುಸಿಯಲ್ಲಿ ಲಿಖಿತ ಪರೀಕ್ಷೆಯಲ್ಲಿ 70ಕ್ಕೆ 21 ಗಳಿಸಿದರೆ ಸಾಕು. ಇದು ಶಿಕ್ಷಣದ ಗುಣಮಟ್ಟವನ್ನು ತಗ್ಗಿಸುತ್ತದೆ. ಪಾಸಾಗಬೇಕು ಎಂದು ಸುಲಭ ದಾರಿಗಳನ್ನು ತೋರಿಸುವುದು ಅವರ ಮುಂದಿನ ಭವಿಷ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.

“ಸರ್ಕಾರಿ ಶಾಲೆಗಳನ್ನು ನಿಜಕ್ಕೂ ಕಾಡುತ್ತಿರುವ ಶಿಕ್ಷಕರ ಕೊರತೆ ನೀಗಿಸುವುದು, ಮೂಲಸೌಕರ್ಯ ಒದಗಿಸುವುದು, ಶಿಕ್ಷಕರು ಸರಿಯಾಗಿ ಜವಾಬ್ದಾರಿ ನಿಭಾಯಿಸುವುದು, ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡುವುದು ಜೊತೆಗೆ ಪರೀಕ್ಷಾ ಸುಧಾರಣೆಯಂತಹ ಕ್ರಮಗಳನ್ನು ಜಾರಿಗೊಳಿಸಿ ಕನಿಷ್ಠ ಅಂಕ ಮಿತಿಯನ್ನು ಹೆಚ್ಚಿಸಬೇಕೇ ಹೊರತು ಕಡಿಮೆ ಮಾಡುವುದು ಸರಿಯಲ್ಲ” ಎಂಬ ಶಿಕ್ಷಣ ತಜ್ಞರ ಆಕ್ಷೇಪ ಸರಿಯಾಗಿಯೇ ಇದೆ. ಸರ್ಕಾರಿ ಶಾಲೆಯ ಬಡ ಮಕ್ಕಳೂ ಖಾಸಗಿ ಶಾಲಾ ಮಕ್ಕಳಷ್ಟೇ ಬುದ್ದಿವಂತರೂ, ಕುಶಲರೂ ಇರುತ್ತಾರೆ. ಸರಿಯಾದ ಶಿಕ್ಷಣ ಕೊಟ್ಟರೆ ಅವರೂ ಉತ್ತಮ ಸಾಧನೆ ತೋರಬಲ್ಲರು. ಸರ್ಕಾರ ಉತ್ತಮ ಶಿಕ್ಷಣ ಕೊಡುವ ಮೂಲಕ ಅವರನ್ನು ಮುಂದಿನ ಹಂತಕ್ಕೆ ಸಿದ್ದಗೊಳಿಸಬೇಕೇ ಹೊರತು ತಳ್ಳಿ ಆಚೆ ದಾಟಿಸುವುದಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣ ತಜ್ಞರ ಸಲಹೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಸರ್ಕಾರಿ ಶಾಲಾ ಸುಧಾರಣೆಗೆ ಸಂಬಂಧಿಸಿದಂತೆ ಈ ಹಿಂದಿನ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ ಸರ್ಕಾರಿ ಶಾಲಾ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಬಹುದು. ಈ ವರ್ಷದ ಫಲಿತಾಂಶ ಇಂತಹ ಹತ್ತು ಹಲವು ಸುಧಾರಣಾ ಕ್ರಮಗಳಿಗೆ ನಾಂದಿಯಾಗಲಿ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...

ಬಾಗಲಕೋಟೆ | ಆಶಾ ಕಾರ್ಯಕರ್ತೆಯರಿಗೆ ರೂ.15000 ಮಾಸಿಕ ವೇತನ ನಿಗದಿಪಡಿಸಲು ಆಗ್ರಹ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ...