ಮಗಳು ಪ್ರಿಯಕರನ ಜತೆಗೆ ಓಡಿ ಹೋಗಿದ್ದಕ್ಕೆ ಮನನೊಂದು ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ಹೊರವಲಯದ ಚಿಕ್ಕಕೆರೆ ಅಂಗಳದಲ್ಲಿ ನಡೆದಿದೆ.
ನಾರಾಯಣಪುರ ಗ್ರಾಮದ ನಿವಾಸಿಯಾಗಿರುವ ಗೋಪಾಲ್ (40) ಮೃತ ವ್ಯಕ್ತಿ. ಇವರು ನೇಕಾರಿಕೆ ಕೆಲಸ ಮಾಡಿಕೊಂಡಿದ್ದರು.
ಕಳೆದ ಎರಡು ದಿನಗಳ ಹಿಂದೆ ಗೋಪಾಲ್ ಅವರ ಮಗಳು ಮನೆ ಬಿಟ್ಟು ಪ್ರಿಯಕರನ ಜೊತೆ ಹೋಗಿದ್ದಾಳೆ. ಇದೇ ವಿಚಾರವಾಗಿ ಗೋಪಾಲ್ ಮನನೊಂದಿದ್ದರು. ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಗೋಪಾಲ್, ಚಿಕ್ಕಕೆರೆ ಅಂಗಳದಲ್ಲಿನ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಿಯಕರನ ಜತೆಗೆ ಪುತ್ರಿ ಓಡಿ ಹೋಗಿದ್ದರಿಂದ ಬೇಸತ್ತು ತಂದೆ ಗೋಪಾಲ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಾಲ್ಕು ತಿಂಗಳು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂ ಕ್ಷನ್ ಫ್ಲೈಓವರ್ ಬಂದ್!
ಈ ವಿಷಯ ತಿಳಿದು ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.