- ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್
- ನನ್ನ ಸರ್ಕಲ್ ಗೆ ಒಂದು ಟಿಕೆಟ್ ಕೊಡಿ ಎಂದು ಕೇಳಿದ್ರಾ? ನೆಟ್ಟಿಗರಿಂದ ಹಾಸ್ಯ ಚಟಾಕಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು(ಸೆ.11) ಖಾಸಗಿ ಸಾರಿಗೆ ಒಕ್ಕೂಟ ಮುಷ್ಕರ ನಡೆಸುತ್ತಿದ್ದು, ನಗರದೆಲ್ಲೆಡೆ ಕ್ಯಾಬ್ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.
ದಿನನಿತ್ಯ ರಸ್ತೆಗೆ ಇಳಿಯುತ್ತಿದ್ದಂತಹ ಆಟೋ ರಿಕ್ಷಾಗಳ ಸಂಖ್ಯೆಯೂ ಕಡಿಮೆಯಾಗಿದೆ. ಮುಷ್ಕರದಿಂದಾಗಿ ಓಲಾ, ಉಬರ್ ಸೇರಿದಂತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಈ ಖಾಸಗಿ ವಾಹನಗಳ ಸಂಚಾರ ಬಂದ್ ಆದ ಕಾರಣ ಜನರು ತಮ್ಮ ದಿನನಿತ್ಯದ ಕೆಲಸಗಳಿಗೆ ತೆರಳಲು ಕಷ್ಟಪಡುವಂತಾಗಿದೆ.
‘ಬೆಂಗಳೂರು ಬಂದ್’ ಹಿನ್ನೆಲೆಯಲ್ಲಿ ಬಿಎಂಟಿಸಿ ಮತ್ತು ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ‘ಬೆಂಗಳೂರು ಬಂದ್’ನಿಂದಾಗಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಅದರ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮನೆಗೆ ಹೋಗಲು ಕ್ಯಾಬ್ ಸಿಗದೆ, ಬಿಎಂಟಿಸಿ ಬಸ್‌ನಲ್ಲಿ ಮನೆಗೆ ಕಡೆ ಪ್ರಯಾಣ ಬೆಳೆಸಿದ್ದಾರೆ. ‘BMTC trip back home today from the airport’ ಎಂದು ಸೆಲ್ಫಿ ಫೋಟೊ ಹಂಚಿಕೊಂಡಿದ್ದಾರೆ. ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲಾಗಿದೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವು ಮಂದಿ ನೆಟ್ಟಿಗರು, ‘ಬಂದ್ ಯಾರನ್ನೂ ಬಿಡುವುದಿಲ್ಲ’ ಎಂದಿದ್ದಾರೆ.

ಇನ್ನು ಕೆಲವರು, ‘ನನ್ನ ಸರ್ಕಲ್‌ಗೆ (ಅನಿಲ್ ಕುಂಬ್ಳೆ) ಒಂದು ಟಿಕೆಟ್ ಕೊಡಿ ಎಂದು ಕಂಡಕ್ಟರ್ ಅವರಲ್ಲಿ ಕೇಳಿದ್ರಾ?’ ಎಂದ ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸಿದ್ದರೆ, ವಿಮಾನ ನಿಲ್ದಾಣದಿಂದ ಪ್ರಯಾಣಿಸಲು ಬಿಎಂಟಿಸಿ ಉತ್ತಮ ಆಯ್ಕೆ ಎಂದು ಅನಿಲ್ ಕುಂಬ್ಳೆಯವರಿಗೆ ಸಲಹೆ ನೀಡಿದ್ದಾರೆ.
ಅನಿಲ್ ಕುಂಬ್ಳೆ ಸರ್ಕಲ್
ಬೆಂಗಳೂರಿನ ಎಂ ಜಿ ರೋಡ್ ಮೆಟ್ರೋ ನಿಲ್ದಾಣದ ಸಮೀಪ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿ ಸರ್ಕಲ್‌ವೊಂದಿದೆ.
ದೆಹಲಿಯ ಫಿರೋಝ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ 1999ನೇ ಇಸವಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಅವರು, ಎಲ್ಲ 74 ರನ್ ನೀಡಿ, 10 ವಿಕೆಟ್‌ಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿದ್ದರು. ಆ ಬಳಿಕ “ಅನಿಲ್ ಕುಂಬ್ಳೆ ವೃತ್ತ” ಎಂದು ಹೆಸರಿಡಲಾಗಿತ್ತು.
This is what!
ಇದು ಆಗಬೇಕಾಗಿರೋದು!
ಇದೊಂದು ಸುದ್ದಿ ಐಟಂಗೆ ಮಿಲಿಯನ್ ಡಾಲರ್ ಕೊಡಬಹುದು.
ಸೂಪರ್ ಡೂಪರ್..!!
Archivesನ ಪ್ರಯೋಜನ ಅಂದರೆ ಇದು.
ಇದನ್ನ ಎಲ್ಲರೂ ವ್ಯಾಪಕವಾಗಿ ಸರ್ಕ್ಯುಲೇಟ್ ಮಾಡೋಣ & ಮಾಡಿಸಿ ಸ್ನೇಹಿತರೆ…
ಈ ಸುದ್ದಿ ಐಟಂ ನಿರ್ಮಿಸಿದ ಈದಿನ ಕಾರ್ಯಕರ್ತರಿಗೆ ಶಾಬಾಶ್! ವೆಲ್‌ಡನ್!! ಕೀಪಿಟಪ್!!! 👏👏👏