ಚಂದ್ರಯಾನ-3 ಲ್ಯಾಂಡರ್ ಸ್ಥಳಕ್ಕೆ ‘ಶಿವಶಕ್ತಿ’ ಎಂಬ ಹೆಸರು: ಪ್ರಧಾನಿ ಮೋದಿ ಘೋಷಣೆ

Date:

Advertisements

ಬಾಹ್ಯಾಕಾಶ ಕಾರ್ಯಾಚರಣೆಗಳ ಟಚ್‌ಡೌನ್‌ ಪಾಯಿಂಟ್‌ಗಳನ್ನು ಹೆಸರಿಸುವ ವೈಜ್ಞಾನಿಕ ಸಂಪ್ರದಾಯವಿದೆ. ಹಾಗೆಯೇ ನಮ್ಮ ಚಂದ್ರಯಾನ -3 ಇಳಿಸಿದ ಚಂದ್ರನ ಭಾಗವನ್ನು ಹೆಸರಿಸಲು ಭಾರತ ನಿರ್ಧರಿಸಿದ್ದು, ಚಂದ್ರಯಾನ-3 ಲ್ಯಾಂಡರ್ ಸ್ಥಳವನ್ನು ‘ಶಿವಶಕ್ತಿ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು.

ಚಂದ್ರಯಾನ-3 ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿಯವರು ಗ್ರೀಸ್ ದೇಶದ ಪ್ರವಾಸ ಮುಗಿಸಿ ಆಗಸ್ಟ್‌ 26ರ ಶನಿವಾರ ಬೆಳಗ್ಗೆ ನೇರವಾಗಿ ಬೆಂಗಳೂರು ನಗರದ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ನಗರಕ್ಕೆ ಆಗಮಿಸಿದ ಬಳಿಕ ನಗರದ ಇಸ್ರೋಗೆ ತೆರಳಿ, ಅಲ್ಲಿನ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಮಾತನಾಡಿದರು.

ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ʼಜೈ ವಿಜ್ಞಾನ ಜೈ ಅನುಸಂಧಾನʼ ಎಂದು ಘೋಷಣೆ ಕೂಗಿದ ಮೋದಿ “ಚಂದ್ರಯಾನ 3 ಯಶಸ್ಸಿನ ವೇಳೆ ನಾನು ದೇಶದಲ್ಲಿ ಇರಲಿಲ್ಲ, ಆದರೆ ನಾನು ಮೊದಲು ಬೆಂಗಳೂರಿಗೆ ಭೇಟಿ ನೀಡಿ ನಮ್ಮ ವಿಜ್ಞಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದೆ” ಎಂದು ಹೇಳಿದರು.

Advertisements

“ಚಂದ್ರಯಾನ 3 ರಲ್ಲಿ, ನಮ್ಮ ದೇಶದ ಮಹಿಳಾ ವಿಜ್ಞಾನಿಗಳು, ದೇಶದ ಮಹಿಳಾ ಶಕ್ತಿ ದೊಡ್ಡ ಪಾತ್ರ ವಹಿಸಿದ್ದಾರೆ. ಚಂದ್ರನ ಶಿವಶಕ್ತಿ ಬಿಂದು ಶತಮಾನಗಳಿಂದ ಭಾರತದ ಈ ವೈಜ್ಞಾನಿಕ ಮತ್ತು ತಾತ್ವಿಕ ಚಿಂತನೆಯನ್ನು ಪ್ರತಿನಿಧಿಸುತ್ತದೆ.

“ಚಂದ್ರಯಾನ 2 ಚಂದ್ರನ ಮೇಲೆ ಇಳಿದ ಸ್ಥಳವನ್ನು ‘ತಿರಂಗಾ’ ಎಂದು ಕರೆಯಲಾಗುವುದು. ಚಂದ್ರಯಾನ -3 ಯಶಸ್ವಿಯಾಗಿ ಇಳಿದಿದ್ದನ್ನು ಗುರುತಿಸಲು ಆಗಸ್ಟ್ 23ರನ್ನು ಭಾರತದ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವೆಂದು ಆಚರಿಸಲಾಗುವುದು” ಎಂದು ಹೇಳಿದರು.

“ಮಂಗಳಯಾನದ ಯಶಸ್ಸು, ಚಂದ್ರಯಾನದ ಯಶಸ್ಸು ಮತ್ತು ಗಗನಯಾನದ ಸಿದ್ಧತೆಗಳು ದೇಶದ ಯುವಕರಿಗೆ ಹೊಸ ಮನಸ್ಥಿತಿಯನ್ನು ನೀಡಿವೆ. ಭಾರತದ ಪ್ರಾಚೀನ ಧರ್ಮಗ್ರಂಥಗಳಲ್ಲಿ ನೀಡಲಾದ ಖಗೋಳ ಸೂತ್ರಗಳನ್ನು ಅಧ್ಯಯನ ಮಾಡಲು ಮತ್ತು ವೈಜ್ಞಾನಿಕವಾಗಿ ಸಾಬೀತುಪಡಿಸಲು ಹೊಸ ಪೀಳಿಗೆ ಮುಂದೆ ಬರಬೇಕು. ಇಂದು, ವ್ಯಾಪಾರದಿಂದ ತಂತ್ರಜ್ಞಾನದವರೆಗೆ, ಭಾರತ ಮೊದಲ ಸಾಲಿನಲ್ಲಿರುವುದನ್ನು ಕಾಣಬಹುದು. ಮೂರನೇ ಸಾಲಿನಿಂದ ಮೊದಲ ಸಾಲಿಗೆ ಹೋಗುವ ಪ್ರಯಾಣದಲ್ಲಿ, ಇಸ್ರೋದಂತಹ ಸಂಸ್ಥೆಗಳು ದೊಡ್ಡ ಪಾತ್ರ ವಹಿಸಿವೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿ ಆಗಮನದ ವೇಳೆ ರಾಜ್ಯ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಧಾನಿಗಳನ್ನು ಬರಮಾಡಿಕೊಂಡರು. ಈ ವೇಳೆ ಪೊಲೀಸ್ ಮಹಾನಿರ್ದೇಶಕ ಅಲೋಕ್​ ಮೋಹನ್​ ಹಾಗೂ ಪೊಲೀಸ್​ ಆಯುಕ್ತ ದಯಾನಂದ್ ಹಾಜರಿದ್ದರು.

ಸೋಮನಾಥ್ ಸೇರಿದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಭೇಟಿಯಾದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X