ಬೀದರ್‌ | ಡಿಸಿಸಿ ಬ್ಯಾಂಕ್‌ನಲ್ಲಿ ₹400 ಕೋಟಿ ಸಾಲ ಪಡೆದಿರುವ ಖಂಡ್ರೆ, ಬ್ಯಾಂಕ್ ಮುಳುಗಿಸಲು ಹೊರಟಿದ್ದಾರೆ: ಖೂಬಾ

Date:

  • ಎಮ್.ಜಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆ ಮೇಲೆ ಸುಮಾರು 400 ಕೋಟಿ ಸಾಲವಿದೆ.
  • ಡಿ.ಸಿ.ಸಿ. ಬಾಂಕ್ ಕಸಿದುಕೊಳ್ಳಲು ಖಂಡ್ರೆ ಹಲವಾರು ರೀತಿಯ ಹೊಂಚು ಹಾಕುತ್ತಿದ್ದಾರೆ.

ಡಿ.ಸಿ.ಸಿ. ಬ್ಯಾಂಕಿನಿಂದ 400 ಕೋಟಿ ಸಾಲ ಪಡೆದು, ಆ ಸಾಲ ತಿರಿಸದೆ, ಅದನ್ನು ಮುಳುಗಿಸಲು, ತಮ್ಮ ಸಹೋದರ ಅಮರ ಖಂಡ್ರೆಯವರನ್ನು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಲು ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದಾರೆ. ಇದು ಖಂಡ್ರೆಯವರ ಭ್ರಷ್ಟಾಚಾರ ಮತ್ತು ಕೆಟ್ಟ ಸಂಸ್ಕೃತಿಯನ್ನು ಎತ್ತಿ ತೊರಿಸುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಸಚಿವ ಈಶ್ವರ ಖಂಡ್ರೆ ವಿರುದ್ಧ ಕಿಡಿಕಾರಿದ್ದಾರೆ.

“ತನ್ನ ಮೊಸರನ್ನು ಯಾರು ಹುಳಿಯೆನ್ನುವುದಿಲ್ಲ ಎನ್ನುವ ಮಾತಿನಂತೆ, ಈಶ್ವರ ಖಂಡ್ರೆಯವರು ಮತದಾರರಿಂದ
ಮತಪಡೆದು, ಅಧಿಕಾರವನ್ನು ವಹಿಸಿಕೊಂಡ ಮೇಲೆ ಅವರ ಭ್ರಷ್ಟಾಚಾರ, ದುರಾಡಳಿತ, ಸ್ವಜನಪಕ್ಷಪಾತ, ಒಲೈಕೆ
ರಾಜಕಾರಣವನ್ನು ಜನರ ಮಧ್ಯದಲ್ಲಿ ಬುಡಮೇಲು ಮಾಡುತ್ತಿದ್ದೇನೆ ಎಂದು ತಿಳಿದು, ದುಡಿದು ತಿನ್ನುತ್ತಿರುವ ನಮ್ಮ
ಕುಟುಂಬ ಸದಸ್ಯರನ್ನು ಅನಾವಶ್ಯಕವಾಗಿ ಎಳೆದು ತರುತ್ತಿದ್ದಾರೆ, ನಾನೆಂದು ನಮ್ಮ ಪರಿವಾರದವರನ್ನು ಇಂತಹ ವಿಷಯಗಳಲ್ಲಿ ಸಹಕರಿಸುವ ಕೆಲಸ ಮಾಡಿಲ್ಲ, ನಮ್ಮ ಕುಟುಂಬದವರು ಕೆಲಸ ಮಾಡಲು ಯೋಗ್ಯರಿದ್ದಾರೆ” ಎಂದು ಪತ್ರಿಕಾ ಹೇಳಿಕೆಯಲ್ಲಿ ಈಶ್ವರ ಖಂಡ್ರೆಯವರ ಆರೋಪಗಳಿಗೆ ಸಚಿವ ಖೂಬಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಜನಪ್ರತಿನಿಧಿಯಾದ ನಮ್ಮಿಂದ ಜನರು ಪಾರದರ್ಶಕತೆ ಅಪೇಕ್ಷಿಸುತ್ತಾರೆ, ಈ ದೃಷ್ಟಿಯಲ್ಲಿ ನಿಮ್ಮ ನೈತಿಕೆತೆ ಉಳಿದಿಲ್ಲ. ಕಳೆದ ಕೆಲವು ದಿನಗಳ ಹಿಂದೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ್ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ, ನಿಮ್ಮ ಕುಟುಂಬ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎಮ್.ಜಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆ ಮೇಲೆ, ಸುಮಾರು 400 ಕೋಟಿ ಸಾಲವಿದೆ, ಅದು ಡಿ.ಸಿ.ಸಿ. ಬ್ಯಾಂಕಿನಿಂದ ತೆಗೆದುಕೊಳ್ಳಲಾಗಿದೆ ಎಂದು ಇದರ ಬಗ್ಗೆ ನಾನು ಪ್ರಶ್ನಿಸಿದಾಗ, ನನಗೂ ಎಮ್.ಜಿ.ಎಸ್.ಎಸ್.ಕೆ ಸಕ್ಕರೆ ಕಾರ್ಖಾನೆಗೂ ಹಾಗೂ ಅದರ ಅಧ್ಯಕ್ಷ ನನ್ನ ತಮ್ಮನಿಗೂ ಯಾವೂದೇ ಸಂಬಂಧವಿಲ್ಲವೆಂದು ತಿಳಿಸಿದ್ದಿರಿ. ರೈತರಿಗಾಗಿ ಪ್ರಾರಂಭವಾದ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯಿಂದ ನೀವು ಹಾಗೂ ನಿಮ್ಮ ಕುಟುಂಬ ಸದಸ್ಯರು ಶ್ರೀಮಂತರಾಗಿದ್ದಿರಿ, ಆದರೆ ಇಂದು ಆ ಸಕ್ಕರೆ ಕಾರ್ಖಾನೆಯನ್ನು ಎನ್.ಪಿ.ಎ ಮಾಡಿ, ಸಂಕಷ್ಟದಲ್ಲಿ ತಳ್ಳಿದ್ದಿರಿ, ಇದರಿಂದ ರೈತರು ಮತ್ತೆ ಸಂಕಷ್ಟದಲ್ಲಿ ಬಿಳುವ ಹಾಗೆ ಮಾಡಿದ್ದಿರಿ. ಯಾವ ಕಾರ್ಖಾನೆಯಿಂದ ಶ್ರೀಮಂತರಾಗಿದ್ದಿರೋ, ಅದನ್ನು ಇಂದು ಸಂಕಷ್ಟದಲ್ಲಿ ಬಿಟ್ಟು ಹೊಗುವುದು ಯಾವ ನ್ಯಾಯ” ಎಂದು ಖೂಬಾ ಪ್ರಶ್ನಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನಿಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ರಾಜ್ಯದಲ್ಲಿ ಇಂದು ಒಳ್ಳೆಯ ರಿತಿಯಲ್ಲಿ ಕೆಲಸ ಮಾಡುತ್ತಿರುವ ಬೀದರ ಡಿ.ಸಿ.ಸಿ. ಬಾಂಕ್ ಕಸಿದುಕೊಳ್ಳಲು ಹಲವಾರು ರೀತಿಯ ಹೊಂಚು ಹಾಕುತ್ತಿದ್ದಿರಿ, ಜಿಲ್ಲೆಯ ರೈತ ಬಂಧುಗಳು ಇಂತಹ ಹೊಂಚು ಹಾಕುವವರಿಗೆ ಅವಕಾಶ ಮಾಡಿಕೊಡಬಾರದು. ಕಸಿದುಕೊಂಡು ತಿನ್ನುವವರಿಗೆ, ದುಡಿದು ತಿನ್ನುವವರ ಬಗ್ಗೆ ಮಾತನಾಡಲು ಯಾವೂದೇ ನೈತಿಕತೆಯಿರಲ್ಲ, ನಿಮ್ಮ ಭ್ರಷ್ಟಾಚಾರ, ದುರಾಡಳಿತ ಜಿಲ್ಲೆಯ ಜನತೆ ಗಮನಿಸುತ್ತಿದ್ದಾರೆ, ಸಮಯಕ್ಕೆ ಸರಿಯಾಗಿ ಜನರೇ ತಕ್ಕ ಪಾಠ ಕಲಿಸುತ್ತಾರೆ” ಎಂದು ಕೇಂದ್ರ ಸಚಿವ ಖೂಬಾ ಈಶ್ವರ ಖಂಡ್ರೆಯವರಿಗೆ ತಿರುಗೇಟು ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ ? ಬೀದರ್‌ | ಡಿಸಿಸಿ ಬ್ಯಾಂಕ್‌ನಲ್ಲಿ ಬದಲಾವಣೆ ಅಗತ್ಯ: ಸಚಿವ ಈಶ್ವರ ಖಂಡ್ರೆ

“ಜಿಲ್ಲೆಯಲ್ಲಿ ನಿಮ್ಮಷ್ಟು ಆಸ್ತಿ, ಪಾಸ್ತಿ, 20 ಅಡಿ ಎತ್ತರದ ಕಂಪೌಂಡವಾಲ್‌ಗಳು, ಸಾವಿರಾರು ಎಕ್ಕರೆ ಭೂಮಿ ಯಾರ ಬಳಿಯೂ ಇಲ್ಲಾ, ಇದರ ಆದಾಯ ಮೂಲ ಯಾವುದು ಎಂದು ಸಮಾಜದ ಮುಂದೆ ಬಹಿರಂಗಪಡಿಸಿ. ಇಷ್ಟು ಶ್ರೀಮಂತರಾಗಲು ಹಿಡಿದ ಮಾರ್ಗ ಯಾವುದು ಎಂಬುದು ತಿಳಿಸಿ. ಇದರ ಜೊತೆಗೆ ನೀವು ಕೇವಲ ನಾಲ್ಕೈದು ಜನ ಗುತ್ತಿಗೆದಾರರಿಗೆ ಇಟ್ಟುಕೊಂಡು, ಅವರಿಗೆ ಎಲ್ಲಾ ಕೆಲಸಗಳು ಸಿಗುವ ಹಾಗೆ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹಾಕುವದರ ಹಿಂದಿನ ಗುಟ್ಟೇನು” ಎಂದು ಸಚಿವರು ಖಂಡ್ರೆಗೆ ಪ್ರಶ್ನಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಪೆನ್‌ಡ್ರೈವ್‌ | ಬ್ಲಾಕ್‌ಮೇಲ್‌ಗಾಗಿ ವಿಡಿಯೋ ಮಾಡಿಕೊಂಡಿದ್ರಾ?; ನ್ಯಾಯಾಂಗ ತನಿಖೆಗೆ ಆಗ್ರಹ

ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ತನಿಖೆ ನಡೆಸಬೇಕು....

ಶಿವಮೊಗ್ಗ | ಮುಂದಿನ ದಿನದಲ್ಲಿ ಕ್ಷೇತ್ರದ ರಕ್ಷಣೆ ನನ್ನದು: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕಾರಣಿಗಳ ಬಳಿ ಅಧಿಕಾರವಿದ್ದು, ಪರಿಹರಿಸಬಹುದಾದ ಸಮಸ್ಯೆಗಳು ಸಾಕಷ್ಟಿವೆ. ಆದರೂ,...

ಫ್ರಿ ಬಸ್ | ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ; ಬಿಜೆಪಿ ಪ್ರಚಾರಕಿ, ನಟಿ ಶೃತಿ ವಿವಾದಾತ್ಮಕ ಹೇಳಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ...

ಚಾಮರಾಜನಗರ | ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್‌ ಬೆಂಬಲಿಸಿ: ಮಾನವ ಬಂಧುತ್ವ ವೇದಿಕೆ

ದೇಶದ ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನರು...