ಬೆಂಗಳೂರು | ಟ್ರಾಫಿಕ್ ಸಮಸ್ಯೆಗೆ ‘ದಟ್ಟಣೆ ಶುಲ್ಕ’ ನಿಗದಿ ಮಾಡಲು ತಜ್ಞರ ಸಲಹೆ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸಂಚಾರ ದಟ್ಟಣೆ ಸಮಸ್ಯೆಯು ಅಂತಾರಾಷ್ಟೀಯ ಮಟ್ಟದಲ್ಲಿ ಸದ್ದು ಮಾಡಿದೆ. ನಿತ್ಯ ಕೆಲಸಕ್ಕೆ ತೆರಳುವವರು, ಶಾಲಾ-ಕಾಲೇಜುಗಳಿಗೆ ತೆರಳುವವರು ಈ ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಇದೀಗ, ಈ ಸಮಸ್ಯೆಯನ್ನು ಪರಿಹರಿಸಲು ವಾಹನಗಳ ಮೇಲೆ ‘ದಟ್ಟಣೆ ಶುಲ್ಕ’ ವಿಧಿಸುವ ಕಲ್ಪನೆಯನ್ನು ಮೊಬಿಲಿಟಿ ತಜ್ಞರು ಮುಂದಿಟ್ಟಿದ್ದಾರೆ.

ಸಾರ್ವಜನಿಕರ ಮೇಲೆ ಹೇರುವ ಶುಲ್ಕವನ್ನು ಸಾರ್ವಜನಿಕ ಸಾರಿಗೆಯನ್ನು ಒದಗಿಸಲು ಮತ್ತು ಸುಧಾರಿಸಲು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೇವಲ 10 ಕಿಲೋ ಮೀಟರ್ ಪ್ರಯಾಣ ಮಾಡುವುದಕ್ಕೆ ಗಂಟೆಗಟ್ಟಲೆ ಸಮಯ ತೆಗೆದುಕ್ಕೊಳ್ಳುತ್ತಿದೆ. ಇತ್ತೀಚೆಗೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ, ಲಕ್ಷಾಂತರ ಜನ ತಮ್ಮ ಊರುಗಳಿಗೆ ತೆರಳಲು ಒಮ್ಮೆಲೆ ರಸ್ತೆಗೆ ಇಳಿದಿದ್ದರು. ಈ ವೇಳೆ 8 ಕಿ.ಮೀ ಕ್ರಮಿಸಲು ಬರೋಬ್ಬರಿ 3 ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್‌ನಲ್ಲಿ ಸಿಲುಕಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Advertisements

ಕೋವಿಡ್ ಕಾಲದಲ್ಲಿ ಹಲವಾರು ಐಟಿ ಕಂಪನಿಗಳು ವರ್ಕ್‌ ಫ್ರಂ ಹೋಮ್ ನೀಡಿದ್ದವು. ಈಗ ಸಾಂಕ್ರಾಮಿಕ ರೋಗ ಹತೋಟಿಗೆ ಬಂದ ಕಾರಣ ಇತ್ತೀಚಿನ ದಿನಗಳಲ್ಲಿ ಟೆಕ್ ಕಂಪನಿಗಳು ವರ್ಕ್‌ ಫ್ರಂ ಹೋಂ ಪರಿಪಾಠ ಮುಗಿಸಿವೆ. ಇದರಿಂದ ಸಾಮಾನ್ಯವಾಗಿ ಜನರು ತಮ್ಮ ಕೆಲಸಗಳಿಗೆ ತೆರಳಲು ಸ್ವಂತ ವಾಹನದಲ್ಲಿ ರಸ್ತೆಗೆ ಇಳಿಯುತ್ತಿದ್ದಾರೆ. ಇದರಿಂದ ಸಾಮಾನ್ಯವಾಗಿ ಟ್ರಾಫಿಕ್ ಹೆಚ್ಚಳವಾಗುತ್ತಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯ ಸಸ್ಟೈನಬಲ್ ಟ್ರಾನ್ಸ್‌ಪೋರ್ಟೇಶನ್ ಲ್ಯಾಬ್‌ನ ಸಂಚಾಲಕ ಪ್ರೊ. ಆಶಿಶ್ ವರ್ಮಾ ಅವರು ‘ಎಜಿಲ್ & ಸಸ್ಟೈನಬಲ್ ಮೊಬಿಲಿಟಿ ಫಾರ್ ಆಲ್’ ವರದಿಯನ್ನು ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನದ ‘ಮೊಬಿಲಿಟಿ ವರ್ಟಿಕಲ್’ ಅಡಿಯಲ್ಲಿ ಸಲ್ಲಿಸಿದ್ದಾರೆ.

ಸಂಚಾರ ದಟ್ಟಣೆಯ ಬಗ್ಗೆ ಮಾತನಾಡಿದ ಅವರು, “ಕಳೆದ ವಾರ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ, ಜನದಟ್ಟಣೆ ಉಂಟಾಗಿತ್ತು. ಪ್ರಯಾಣದ ಬೇಡಿಕೆ, ಲಭ್ಯವಿರುವ ಮೂಲಸೌಕರ್ಯ ಮತ್ತು ಸೇವಾ ಪೂರೈಕೆಯ ನಡುವಿನ ವ್ಯಾಪಕ ಅಂತರ, ಏಕರೂಪದ ರಸ್ತೆ, ಅವೈಜ್ಞಾನಿಕ ಸಂಚಾರ ನಿರ್ವಹಣೆ, ಕಾರು ಮತ್ತು ದ್ವಿಚಕ್ರ ವಾಹನ ಬಳಕೆದಾರರ ಪ್ರಾಬಲ್ಯ ಇವೆಲ್ಲವೂ ಸಂಚಾರ ದಟ್ಟಣೆಗೆ ಕಾರಣವಾಗಿದೆ” ಎಂದು ಹೇಳಿದರು. 

“ದಟ್ಟಣೆಯ ಸಮಯದಲ್ಲಿ ಅಥವಾ ದಟ್ಟಣೆಯ ಪ್ರದೇಶಗಳಲ್ಲಿ ಪ್ರಯಾಣಿಸುವ ರಸ್ತೆ ಬಳಕೆದಾರರಿಗೆ ‘ದಟ್ಟಣೆ ಬೆಲೆ’ ನಿಗದಿ ಮಾಡಬೇಕು. ಇದರಿಂದ ವೈಯಕ್ತಿಕ ವಾಹನಗಳ ಬಳಕೆ ಕಡಿಮೆಯಾಗಬಹುದು. ಮೂಲಸೌಕರ್ಯ ಮತ್ತು ಸೇವೆಗಳನ್ನು ಸಮಾನಾಂತರವಾಗಿ ಸುಧಾರಿಸುವುದು. ದಟ್ಟಣೆ ಶುಲ್ಕವು ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆಗೊಳಿಸುವ ಪ್ರಮುಖ ಕಾರ್ಯತಂತ್ರವಾಗಿದೆ. ಸಾರ್ವಜನಿಕ ಸಾರಿಗೆ, ವಾಕಿಂಗ್, ಸೈಕ್ಲಿಂಗ್ ಮೂಲಸೌಕರ್ಯವನ್ನು ಸುಧಾರಿಸುವಾಗ ಶುಲ್ಕಗಳನ್ನು ಏಕಕಾಲದಲ್ಲಿ ಜಾರಿಗೊಳಿಸಬೇಕು” ಎಂದು ವರ್ಮಾ ಹೇಳಿದರು.

“ಹಣ ಪಾವತಿಸಲು ಸಿದ್ಧರಿರುವವರು ತಾವು ತಲುಪಬೇಕಾದ ಸ್ಥಳವನ್ನು ತಲುಪಲು ಸಂಚಾರ ಮುಕ್ತ ರಸ್ತೆಯನ್ನು ಪಡೆಯುತ್ತಾರೆ. ಟ್ರಾಫಿಕ್ ಮುಕ್ತ ರಸ್ತೆಗಳು ತ್ವರಿತ ಬಸ್ ಸೇವೆಗಳಿಗೆ ದಾರಿ ಮಾಡಿಕೊಡುತ್ತವೆ. ಇಷ್ಟವಿಲ್ಲದವರಿಗೆ ಅಥವಾ ಪಾವತಿಸಲು ಸಾಧ್ಯವಾಗದವರಿಗೆ ವಿಶ್ವಾಸಾರ್ಹ ಪರ್ಯಾಯವನ್ನು ನೀಡುತ್ತದೆ” ಎಂದು ಅರ್ಬನ್ ಮೊಬಿಲಿಟಿ ತಜ್ಞೆ ಶ್ರೇಯಾ ಗಡೇಪಲ್ಲಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ನಾಯಿಗಳ ಸಮೀಕ್ಷೆ ನಡೆಸಿರುವ ವರದಿ ಬಿಡುಗಡೆ ಮಾಡಿದ ಬಿಬಿಎಂಪಿ

“ಲಂಡನ್‌ನಲ್ಲಿ ದಟ್ಟಣೆಯ ಬೆಲೆ ವಲಯಕ್ಕೆ ಪ್ರವೇಶಿಸುವ ಕಾರುಗಳ ಸಂಖ್ಯೆಯು ಶೇಕಡಾ 33ರಷ್ಟು ಕಡಿಮೆಯಾಗಿದೆ. ಬಸ್ ಸವಾರರ ಸಂಖ್ಯೆ ಶೇಕಡಾ 38ರಷ್ಟು ಹೆಚ್ಚಾಗಿದೆ. ಸಿಂಗಾಪುರ ನಗರದ ರಸ್ತೆಗಳಲ್ಲಿ ಸರಾಸರಿ ಟ್ರಾಫಿಕ್ ವೇಗವನ್ನು ಗಂಟೆಗೆ 20-30 ಕಿಲೋಮೀಟರ್‌ನಲ್ಲಿ ಇರಿಸುವಲ್ಲಿ ಯಶಸ್ವಿಯಾಗಿದೆ. ಇದು ಭಾರತೀಯ ಮಹಾನಗರಗಳಾದ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ದಟ್ಟಣೆ ಬೆಲೆಯನ್ನು ಜಾರಿಗೆ ತರಲು ಇದು ಸೂಕ್ತ ಸಮಯವಾಗಿದೆ” ಎಂದು ಹೇಳಿದರು.

ಮಾಜಿ ಅಧಿಕಾರಿ ಕೆ.ಜೈರಾಜ್ ಮಾತನಾಡಿ, “ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳನ್ನು ಗಮನಿಸಿದರೆ ದಟ್ಟಣೆ ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X