ರಾಜ್ಯದಲ್ಲಿ ಚಳಿ ಪ್ರಭಾವ ಹೆಚ್ಚಾಗಿದೆ. ಬೆಳ್ಳಂಬೆಳಗ್ಗೆ ಮಂಜು ಕವಿದುಕೊಳ್ಳುತ್ತಿದೆ. ಪರಿಣಮವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಣದಲ್ಲಿ ಹಲವಾರು ವಿಮಾನಗಳ ಹಾರಾದಲ್ಲಿ ವ್ಯತ್ಯವಾಗಿದೆ. ಭಾನುವಾರ ಸುಮಾರು 34 ವಿಮಾನಗಳ ಹಾರಾಟಗಳು ಸರಿಯಾದ ಸಮಯಕ್ಕೆ ಹಾರಟ ಆರಂಭಿಸಿಲ್ಲ ಎಂದು ವರದಿಯಾಗಿದೆ.
ಸುಮಾರು 9 ಗಂಟೆಯವರೆಗೂ ಭಾರೀ ಮಂಜು ಕವಿದಿದ್ದ ಪರಿಣಾಮ, ರನ್‌ವೇ ಕಾಣಿಸದ ಹಿನ್ನೆಲೆಯಲ್ಲಿ ಹಲವಾರು ವಿಮಾನಗಳು ಸಂಚಾರ ಆರಂಭಿಸಿರಲಿಲ್ಲ. ಹೀಗಾಗಿ, ಪ್ರಮಾಣಿಕರು ವಿಮಾನಗಳಲ್ಲೇ ಕಾದು ಕುಳಿತಿದ್ದರು. 9 ಗಂಟೆ ಬಳಿಕ ವಿಮಾನಗಳು ಹಾರಾಟ ಆರಂಭಿಸಿವೆ.