ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಬರುವ ಮೊದಲು ರಾಜ ಮಹಾರಾಜರು ಯುದ್ಧ ಮಾಡಿ ಅನೇಕರ ರುಂಡ ಕತ್ತರಿಸುತ್ತಾ ಇದ್ದರು. ನೂರಾರು ವರ್ಷಗಳ ಸುದೀರ್ಘ ಹೋರಾಟದ ಬಳಿಕ ಇವತ್ತು ಪ್ರಜಾಪ್ರಭುತ್ವ ಇಷ್ಟು ಗಟ್ಟಿ ಆಗಿ ನಿಂತಿರುವಾಗ ಈ ಅನಂತ ಕುಮಾರ್ ಹೆಗಡೆ ಸದಾ ಹೊಡಿ ಬಡಿ ಮಾತುಗಳನ್ನೇ ಆಡುವುದು ನೋಡಿದರೆ ಅವರು ಇನ್ನೂ ಸಾವಿರ ವರ್ಷಗಳ ಹಿಂದಿನ ವಿಷಯಗಳನ್ನು ನಿನ್ನೆ ಮೊನ್ನೆ ನಡೆದಂತೆ ಹೇಳಿ ಜನರನ್ನು ಕೆರಳಿಸಿ ಚುನಾವಣೆಯಲ್ಲಿ ಗೆಲ್ಲುವ ವಿಚಾರದಿಂದ ಹೊರ ಬಂದಿಲ್ಲ ಅನಿಸುತ್ತದೆ.
ಅವರು ಇಂದು ಆಡಿದ ಮಾತುಗಳು ಕಾನೂನಿನ ಪ್ರಕಾರ ದ್ವೇಷ ಭಾಷಣ, ಅದರಿಂದ ಅವರು ಚುನಾವಣೆ ಗೆಲ್ಲಬಹುದು, ಆದರೆ ಸಮಾಜದ ಮೇಲೆ ಆಗುವ ದುಷ್ಪರಿಣಾಮವನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಯಾವುದೋ ಕಾಲಘಟ್ಟದಲ್ಲಿ ಬಾಬರ ಮಾಡಿದ ಕೆಲಸಕ್ಕೆ ನಮ್ಮ ನೆರೆಮನೆಯವರನ್ನು ನಾವು ದ್ವೇಷಿಸಬೇಕೆಂಬ ಪ್ರಚೋದನೆಯನ್ನು ಈ ಹೆಗಡೆ ನೀಡುತ್ತಾ ಇದ್ದಾರೆ. ಇವರೇನು ಸಮಸ್ತ ಹಿಂದೂಗಳ ಮನಸಿನ ಮಾತನ್ನಾಡುವುದಿಲ್ಲ. ಹಿಂದೂಗಳು ಎಲ್ಲರೂ ಸೇರಿ ಇವರಿಗೆ ಯಾವ ವಿಷಯದ ಗುತ್ತಿಗೆಯನ್ನೂ ನೀಡಿಲ್ಲ. ಸಾವಿರ ವರ್ಷಗಳ ಸೇಡು ತೀರಿಸಲು ಹೆಗಡೆಯವರನ್ನು ಸೇರಿಸಿ ಈಗ ಇದ್ದವರು ಆಗ ಯಾರೂ ಭೂಮಿ ಮೇಲೆ ಇರಲಿಲ್ಲ. ಇವರು ಯಾವ ಸೇಡು ಯಾರ ವಿರುದ್ಧ ತೀರಿಸುವುದು?
ಎಲ್ಲಾ ಮಸೀದಿ ಒಡೆಯಲಿಕ್ಕೆ ಇವರು ಹೊರಟರೆ ಸರಕಾರ ಏನು ಕಣ್ಣು ಮುಚ್ಚಿ ಕೂರುತ್ತದಾ? ಸಂಸದ ಆದರೇನು ಕಾನೂನಿಗಿಂತ ಮೇಲಾ ಇವರು? ದುರಾದೃಷ್ಟಕರ ಏನೆಂದರೆ ಇವರ ಮಾತನ್ನು ಕೇಳಿ ಕೆಲವು ಯುವಕರು ಮುಸಲ್ಮಾನರನ್ನು ದ್ವೇಷಿಸುತ್ತಾ ಮಸೀದಿಗಳಿಗೆ ಕಲ್ಲು ಬಿಸಾಡಿ ಜೈಲು ಪಾಲಾಗುತ್ತಾರೆ.
ಹೆಗಡೆಯವರಿಗೆ ಉತ್ತರ ಕನ್ನಡದಲ್ಲಿ ತಾನು ಮಾಡಿದ ಒಂದೇ ಒಂದು ಸಾಧನೆ ಹೇಳಿಕೊಳ್ಳಲಿಕ್ಕೆ ಇಲ್ಲ. ಇಂತಹ ಉದ್ರೇಕಕಾರಿ ಭಾಷಣ ಮಾಡಿದ್ದಕ್ಕೆ ಕರ್ನಾಟಕ ಸರಕಾರ ತಕ್ಷಣ ಇವರನ್ನು ಬಂಧಿಸಬೇಕು ಹಾಗೂ ಯುವಜನರ ಭವಿಷ್ಯವನ್ನೂ ಕಾನೂನು ಸುವ್ಯವಸ್ಥೆಯನ್ನೂ ಸಾಮಾಜಿಕ ಸೌಹಾರ್ದತೆಯನ್ನೂ ಕಾಪಾಡಬೇಕು.
ಅಮೃತ್ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ
ಈ ಹೆಗಡೆನ ಹೆತ್ತವರು ಅದೆಷ್ಟು ಸಂಕಟ ಅನುಭವಿಸುತ್ತಿದ್ದಾರೋ ಏನೋ,,,, ಒಬ್ಬ ಅನಾಗರಿಕ ಅಸಂಸ್ಕೃತ ಅಸಭ್ಯ ಮಗನನ್ನು ಹೆತ್ತದ್ದಕ್ಕಾಗಿ,,,
ರಾಜಕೀಯ ದೃಷ್ಟಿಯಿಂದ ಇಂಥವರು ಆ ಪಕ್ಷಕ್ಕೆ ಬೇಕು,, ಅಂದ್ರೆ ಜನರು ಪಕ್ಷದ ಅಂತಿಮ ಸಂಸ್ಕಾರ ಮಾಡಲು ಸಿದ್ಧತೆ ಈಗಿನಿಂದಲೇ ಪ್ರಾರಂಭಿಸುವರು