ನಾನು ಬರುವುದಕ್ಕೂ ಮುನ್ನ ಒಂದು ಮಾಧ್ಯಮದವರು ನನ್ನನ್ನು ಸಂದರ್ಶನಕ್ಕೆ ಕರೆದಿದ್ದರು. ಅಲ್ಲಿ ಅದಾಲತ್ ನಡೆಸುತ್ತೇವೆಂದು ಹೇಳಿದ್ದರು. ಅಲ್ಲಿ ಸುಮಾರು 30 ಜನರಿದ್ದರು. ಅವರೆಲ್ಲರೂ ಕಾವಿ ಧರಿಸಿದ್ದರು. ಅವರಲ್ಲೊಬ್ಬ ನೀವು ಕಾಂಗ್ರೆಸ್‌ನವರ ಅಂತ ಕೇಳಿದ. ನಾನು ನಿಮ್ಮ ಪಕ್ಷದ ವಿರೋಧಿ ಎಂದೆ. ನಾವು ಒಡೆದು ಆಳುವವರನ್ನು ವಿರೋಧಿಸಲೇಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ನೆನಪಿನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಾವು ಗೌರಿಯನ್ನು ಹೂಳಲಿಲ್ಲ, ಬಿತ್ತಿದ್ದೇವೆ. ಒಂದು ಧ್ವನಿಯನ್ನು ಅಡಗಿಸಿದ್ದಕ್ಕೆ, ನೂರಾರು ಗೌರಿಯರು ಹುಟ್ಟಿದ್ದೇವೆ. ದೇಶಕ್ಕೆ ಗಾಯವಾದಾಗ ನಾವು ಮೌನವಾಗಿದ್ದರೆ, ಅದು ಇಡೀ ದೇಶವನ್ನೇ ಸುಡುತ್ತದೆ. ನಾವು ಧ್ವನಿ ಎತ್ತಬೇಕು. ಪ್ರಶ್ನೆ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಧಾನಿ ನಮ್ಮ ಉಡುಗೆ ತೊಟ್ಟು, ನಮ್ಮನ್ನೇ ದಮನಿಸುತ್ತಿದ್ದಾರೆ: ಏಂಜೆಲಾ ಅಂಗದ್
“ಪ್ರಶ್ನಿಸಿದರೆ ಕೊಲ್ಲುತ್ತೇವೆ ಎನ್ನುತ್ತಾರೆ. ಕೈಯಲ್ಲಿ ಆಯುಧ ಹಿಡಿದು ಬರುತ್ತಾರೆ. ಆಯುಧ ಹಿಡಿದು ಬರುವವರು ಧೀರರಲ್ಲ, ಹೇಡಿಗಳು. ನಾವು ತಪ್ಪನ್ನು ಪ್ರಶ್ನಿಸಲೇಬೇಕಿದೆ. ಆಗ ಮಾತ್ರ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ. ನಾವು ಪ್ರಶ್ನೆ ಕೇಳುತ್ತಲೇ ಇರಬೇಕು” ಎಂದರು.