ಬೆಂಗಳೂರು | ಜೈಲಿನೊಳಗೆ ಕದ್ದು ಮೊಬೈಲ್‌ ಬಳಸುತ್ತಿದ್ದ ಕೈದಿಗಳ ತಂತ್ರಕ್ಕೆ ಬ್ರೇಕ್

Date:

ಪರಪ್ಪನ ಆಗ್ರಹಾರ ಜೈಲಿನಲ್ಲಿ ಮೊಬೈಲ್‌ ಇಟ್ಟುಕೊಂಡು ಹೊರಗಡೆ ಸಂಪರ್ಕ ಸಾಧಿಸುವ ಕೈದಿಗಳ ಆಟವನ್ನು ನಿಲ್ಲಿಸಲು ಬೆಂಗಳೂರು ಕಮೀಷನರ್ ಮುಂದಾಗಿದ್ದಾರೆ. ಇಲ್ಲಿ ಹೈ ಫ್ರೀಕ್ವೆನ್ಸಿ ಮೋಡ್ ಟವರ್ ನಿರ್ಮಿಸಲಾಗುತ್ತಿದ್ದು, ಇನ್ನು ಮುಂದೆ ಜೈಲಿನೊಳಗಿಂದಲೇ ನಡೆಯುವ ರೌಡಿ ಚಟುವಟಿಕೆಗಳಿಗೆ ಬ್ರೇಕ್‌ ಬೀಳಲಿದೆ.

ಕೆಲವು ಪ್ರಭಾವಿ ರೌಡಿಗಳು ಈವರೆಗೆ ಲಂಚ ನೀಡಿಯೋ, ಕದ್ದು ತರಿಸಿಯೋ ಜೈಲಿನೊಳಗೆ ಮೊಬೈಲ್‌ ಇಟ್ಟುಕೊಳ್ಳುತ್ತಿದ್ದರು. ಇಲ್ಲಿಂದಲೇ ಹೊರಗಿನ ಡೀಲಿಂಗ್‌ಗಳನ್ನು ನಡೆಸುತ್ತಿದ್ದರು. ಆದರೆ, ಇನ್ನು ಮುಂದೆ ಅಂತಹ ಸಾಹಸ ಮಾಡಿ ಮೊಬೈಲ್ ಇಟ್ಟುಕೊಂಡರೂ ಪ್ರಯೋಜನವಿಲ್ಲ. ಜೈಲಿನಿಂದ ಡೀಲ್ ಮಾಡುವ ರೌಡಿಗಳಿಗೆ ಕಮೀಷನರ್ ದಯಾನಂದ್ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ಜೈಲಿನ ಕರೆಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಹೈ ಫ್ರೀಕ್ವೆನ್ಸಿ ಮೋಡ್ ಟವರ್ ಇನ್‌ಸ್ಟಾಲ್‌ ಮಾಡಲಾಗುತ್ತಿದ್ದು, ಹೊಸ ತಂತ್ರಜ್ಞಾನದಿಂದಾಗಿ ಹೊರ ಹೋಗುವ ಮತ್ತು ಒಳಬರುವ ಕರೆಗಳು ಕೂಡ ನಿರ್ಬಂಧಕ್ಕೊಳಗಾಗಲಿವೆ. ಈ ಬಗ್ಗೆ ಕಾರಾಗೃಹ ಇಲಾಖೆ ಅಧಿಕಾರಿಗಳ ಜೊತೆ ಕಮೀಷನರ್ ಚರ್ಚೆ ನಡೆಸಿದ್ದು, ಕಾರಾಗೃಹ ಇಲಾಖೆ ಅಧಿಕಾರಿಗಳು ರೂಪುರೇಷೆ ರಚಿಸಲು ಮುಂದಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಾಂಜಾ ಮಾರಾಟ ಆರೋಪ ; ಮೂವರು ಮಹಿಳೆಯರ ಬಂಧನ

ಜೈಲಿನಿಂದ ಮೊಬೈಲ್ ಬಳಸಿ ಹಲವು ರೌಡಿಗಳು ಹೊರಗಡೆ ಡೀಲಿಂಗ್ ನಡೆಸುವ, ಜೈಲಿನಿಂದಲೇ ಸುಪಾರಿ ನೀಡಿ ದುಷ್ಕೃತ್ಯಗಳಲ್ಲಿ ಭಾಗಿ‌ಯಾಗುತ್ತಿರುವ ಹಿನ್ನೆಲೆ, ಜೈಲಿನ ಎಲ್ಲ ಅಕ್ರಮಗಳಿಗೂ ಕಡಿವಾಣ ಹಾಕಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ. ಜೈಲಿನಲ್ಲಿ ಡ್ರಗ್ಸ್ ಸರಬರಾಜು, ಮಾಫಿಯಾ ಯಾವುದೂ ಇರಬಾರದು ಎಂದು ಸೂಚನೆ ನೀಡಲಾಗಿದ್ದು, ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜ್ವಲ್‌ ರೇವಣ್ಣ ಪ್ರಕರಣ ಯಾವುದೇ ಡಿಟರ್ಜೆಂಟ್‌ನಿಂದ ಹೋಗುವ ಕಲೆಯಲ್ಲ: ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ

ದೇವೇಗೌಡ ಅವರ ಕುಟುಂಬದಿಂದ ಸಮಾಜದ ಮೇಲಾಗಿರುವ ಅತ್ಯಾಚಾರ, ದುರ್ನಡತೆಯನ್ನು ಯಾವುದೇ ನಾಗರಿಕರೂ...

ಎಂ.ಉಷಾ ಅವರ‌ ‘ಬಾಳ‌ ಬಟ್ಟೆ’ ಕಾದಂಬರಿಗೆ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು 2024ನೇ ಸಾಲಿನ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಡಾ.ಎಂ.ಉಷಾ...

ತುಮಕೂರು | ಬಿಯರ್‌ ಬಾಟಲಿ ಹಿಡಿದು ಹೊಡೆದಾಡಿದ ಕೆಪಿಟಿಸಿಎಲ್‌ ಎಂಜಿನಿಯರ್‌ಗಳು

ತುಮಕೂರು ಜಿಲ್ಲೆಯ ಪಾವಗಡದ ಕೆಪಿಟಿಸಿಎಲ್‌ನ ಇಬ್ಬರು ಜೂನಿಯರ್‌ ಎಂಜಿನಿಯರ್‌ಗಳು ಹಾಗೂ ಇಬ್ಬರು...

ಬೆಂಗಳೂರು | ‘ಜಾಹೀರಾತು ಮುಕ್ತ ಅಭಿಯಾನ’ಕ್ಕೆ ಕೈ ಜೋಡಿಸಲು ನಾಗರಿಕರಲ್ಲಿ ಮನವಿ ಮಾಡಿದ ಬಿಬಿಎಂಪಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿದಂತೆ...