ಬೆಂಗಳೂರು | ಕಾ.ತ. ಚಿಕ್ಕಣ್ಣನವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ

Date:

Advertisements

“ಅರವತ್ತು ವರ್ಷ ಮೀರಿದವರಿಗೆ ಕಾ.ತ. ಚಿಕ್ಕಣ್ಣ ನೆನಪಾಗುವುದು ಕನ್ನಡ- ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿ. ಆ ಇಲಾಖೆಗೆ ಒಂದು ನಿರ್ದಿಷ್ಟ ಆಕೃತಿ, ಸೃಜನಶೀಲತೆ ಮತ್ತು ಲೇಖಕ-ಕಲಾವಿದರೊಂದಿಗೆ ಮಧುರ ಸಂಬಂಧ ಕಲ್ಪಿಸಿದ ರೂವಾರಿಯಾಗಿದ್ದಾರೆ” ಎಂದು ನಾಡೋಜ, ಹಿರಿಯ ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಹೇಳಿದರು.

ಬೆಂಗಳೂರು ನಗರದಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬಿ.ವಿ ಕಾರಂತ ಇಂಡಿಯನ್‌ ಆಕ್ಟಿಂಗ್‌ ಅಕಾಡೆಮಿ ಟ್ರಸ್ಟ್‌ (ರಿ), ಜನಮನ ಪ್ರತಿಷ್ಠಾನ (ರಿ), ಸಿರಿವರ ಕಲ್ಚರಲ್‌ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ನಾಡಿನ ಹಿರಿಯ ಸಾಹಿತಿ ಹಾಗೂ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷರಾದ ಕಾ.ತ. ಚಿಕ್ಕಣ್ಣ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

1986ರಲ್ಲಿ ನಡೆದ ಪ್ರಥಮ ವಿಶ್ವಕನ್ನಡ ಸಮ್ಮೇಳನ ಸಂದರ್ಭದಲ್ಲಿ ನಮ್ಮಿಬ್ಬರ ಗೆಳೆತನ ಕೆನೆಗಟ್ಟಿತ್ತು. ಬಹುದೊಡ್ಡ ಪುಸ್ತಕಪ್ರದರ್ಶನ ವಿಭಾಗವನ್ನು ಸಂಯೋಜಿಸಿ ಯಶಸ್ವಿಯಾಗಿ ನಿರ್ವಹಿಸುವ ಹೊಣೆ ನಮ್ಮ ಹೆಗಲೇರಿತು. ಆ ಸಂದರ್ಭದಲ್ಲಿ ಅವರ ಅನುಭವ ಕಾರ್ಯಕ್ಷಮತೆ, ಕುಡಿಯಿಟ್ಟು ಹಬ್ಬಿದ ಕಲ್ಪನಾ ವಿಲಾಸ ದಣಿವರಿಯದೆ ದುಡಿಯುವ ಬದ್ಧತೆ ಕಂಡು ಬೆರಗುಗೊಂಡಿದ್ದುದು ಮರೆಯಲಾಗದ ಅನುಭವ ಎಂದರು.

Advertisements

ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ, ಮಾತನಾಡಿ, “ಕಾ.ತ ಚಿಕ್ಕಣ್ಣನವರು ಸ್ನೇಹಜೀವಿ. ನಾನು ಅಧಿಕಾರದಲ್ಲಿದ್ದಾಗ ಸೇತುವೆಯಾಗಿ ಕೆಲಸ ಮಾಡಿದವರು, ರಾಜಕಾರಣಿ. ಸಾಹಿತಿಗಳ ಸಂಕೋಚ ಗುಣ ಒಳ್ಳೆಯದು. ಚಿಕ್ಕಣ್ಣ ಅದಕ್ಕೆ ಹೊರತಾಗಿಲ್ಲ. ಸಣ್ಣ ಕಥೆಗಳನ್ನು ಆರಂಭಿಸುವ ಕಥಾನಕ ನಿರೂಪಣಾ ಗುಣ ಚಿಕ್ಕಣ್ಣನವರಲ್ಲಿ ವಿಶೇಷವಾಗಿದೆ. ಬಂಜೆ ಮಂಗೇಶರಾಯರು ಮೊದಲ ಸಣ್ಣ ಕಥೆಗಾರರು ಅಂತೆಯೇ ವಾಸುದೇವಚಾರ್ಯ ಸಣ್ಣ ಕಥೆಗಳಿಗೆ ಪೂರ್ಣ ಸ್ಥಾನ ನೀಡಿದ್ದಾರೆ” ಎಂದು ಹೇಳಿದರು.

book1

ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, “ಕಾ.ತ ಚಿಕ್ಕಣ್ಣ ಕಥೆಗಾರ, ಕನಸುಗಾರ, ಕೆಲಸಗಾರ ಇವರ ಬರಹಗಳಲ್ಲಿ ಸಂಸ್ಕೃತಿ ನಿರ್ಮಾಣವಾಗಿದೆ. ಸಾಮಾಜಿಕವಾಗಿ ತಳ ಹಿನ್ನೆಲೆಯ ಲೇಖಕರು ಇವರು ಕನಕ, ಕವಿ, ದಾರ್ಶನಿಕ ಚಿಂತಕ ಎಂಬ ಆಲೋಚನೆಯನ್ನು ರಾಜ್ಯಕ್ಕೆ ಕಟ್ಟಿಕೊಟ್ಟವರು. ಕನಕ ರಾಮನುಚಾರ್ಯರ ಶಿಷ್ಯರ ಯಾರ ಶಿಷ್ಯರು ಎಂಬುದು ಕನಕರ ಅಧ್ಯಯನದಿಂದ ಸ್ಪಷ್ಟವಾಗಿದೆ. ಹಠ ಹಿಡಿದು ದುಡಿಯುವ ಜೀವ ಕಾ.ತ . ಚಿಕ್ಕಣ್ಣ” ಎಂದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್ .ಎಂ .ರೇವಣ್ಣ, ಅಧ್ಯಕ್ಷತೆ ವಹಿಸಿ ಮಾತನಾಡಿ, “ಬೂಸ ಸಾಹಿತ್ಯ ಎಂದು ಕರೆದ ಬವಸಲಿಂಗಪ್ಪನವರನ್ನ ಅಧಿಕಾರದಿಂದ ಇಳಿಸಲಾಯಿತು. ನಮ್ಮನ್ನೆಲ್ಲ ತಪ್ಪು ದಾರಿಗೆ ಎಳೆಯಲಾಯಿತು. ನನಗೂ ಇದರ ನೋವಿದೆ. ಮುಖ್ಯಮಂತ್ರಿ ಸಿದ್ದಾರಮಯ್ಯ ಆರಂಭಿಸಿದ ಕಾವಲು ಸಮಿತಿ ಪ್ರಕಾಶಕರಿಗೆ ಅನುಕೂಲವನ್ನು ಮಾಡಿಕೊಟ್ಟಿದೆ. ಇತ್ತೀಚಿಗೆ ಸರ್ಕಾರದ ಗ್ರಂಥಾಲಯಕ್ಕೆ ಕಾವ್ಯ ಹಾಗೂ ಕೆಲವು ಕೃತಿಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಆರೋಪದ ಬಗ್ಗೆ ಕೇಳಿ ತಿಳಿದಿದ್ದೇನೆ. ಅದು ತೊಂದರೆಯಾಗದಂತೆ ಸಾಹಿತಿಗಳಿಗೆ ಕಲಾವಿದರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಬದ್ಧವಾಗಿದೆ. ತೊಂದರೆಯಾಗದಂತೆ ನಮ್ಮ ಸರ್ಕಾರ ನಡೆದುಕೊಳ್ಳುತ್ತದೆ” ಎಂದರು.

ಕನ್ನಡಪರ ಹೋರಾಟಗಾರರಾದ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, “ಕಾ.ತ ಚಿಕ್ಕಣ್ಣ ಬಾಲ್ಯ ಪರಿಸರ ಒಟ್ಟಾರೆ ಅನುಭವ ತಳದಿಂದ ಮಧ್ಯಮ ವರ್ಗದವರೆಗೂ ಅನುಭವಿಸಿದ್ದನ್ನು ನೆನಪಾಗಿ ದಾಖಲಿಸಿದ್ದಾರೆ. ನಗರದ ವಾತ್ಸವ ಸಹ ಇವರ ಗ್ರಾಮೀಣ ಬೇರುಗಳಲ್ಲಿ ಅಡಗಿಸಿದ್ದಾರೆ” ಎಂದರು.

ಕಥೆಗಾರ ಕಾ.ತ ಚಿಕ್ಕಣ್ಣ ಮಾತನಾಡಿ, “ಅಂತರಂಗದ ಮಾತು ಹೇಳುವುದಾದರೆ. ಅತೃಪ್ತಿ ಇದೆ. ಧನ್ಯತಾಭಾವವೂ ಇದೆ. ನನಗೆ ಅತೃಪ್ತಿ. ಏಕೆಂದರೆ ಅಂದುಕೊಂಡ ಕೆಲಸ ಎಲ್ಲಾ ಬಾಕಿ ಇದೆ. ಧನ್ಯತ ಭಾವ ಎಂದರೆ ನನ್ನ ಭಾವಕೋಶದಲ್ಲಿನ ಹಳ್ಳಿ, ಪರಿಸರ ನೆನೆಯುತ್ತೇನೆ. ಹೆಚ್. ಎಮ್. ರೇವಣ್ಣನವರು ಚಾಟಿ ಕೋಲಿನ ಪ್ರೀತಿಯಿಂದ ನಮ್ಮಲ್ಲಿನ ಮೈಗಳ್ಳತನವನ್ನು ಹೋಗಲಾಡಿಸಿ ಕೆಲಸವನ್ನು ಪಡೆದಿದ್ದಾರೆ” ಎಂದರು.

ಸಮಾರಂಭದಲ್ಲಿ ರಂಗತಜ್ಞರು ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಆರ್.ಗೋವಿಂದಸ್ವಾಮಿ ಕಾರ್ಯಕ್ರಮವನ್ನು ನಿರ್ವಹಣೆ ಹಾಗೂ ಸ್ವಾಗತ ಮಾಡಿ ಮಾತನಾಡಿ, “ಕಾ.ತ. ಚಿಕ್ಕಣ್ಣನವರ ಆಂತಕರಿಕ ವಿಕಾಸದಲ್ಲಿ ಅವರು ಹುಟ್ಟಿ ಬೆಳೆದ ಗ್ರಾಮತತ್ವ, ಗ್ರಾಮ ಸ್ವರೂಪದ ನೆಲೆಗಳು, ಬಾಲ್ಯದ ಬಡತನ ಗ್ರಾಮ ಹಾಗೂ ನಗರದ ಈ ನಗರೀಕರಣದ ಮಧ್ಯದಲ್ಲಿ ಬದುಕಿನ ಮಧ್ಯದಲ್ಲಿ ಮಾನಸಿಕ ತೊಳಲಾಟಗಳು, ಭಾವನೆ ಹಾಗೂ ಸಂವೇದನೆಗಳು ಕಥೆಗಳ ಮೂಲಕ ಸ್ವರೂಪಗೊಂಡಿದೆ” ಎಂದರು.

ಇದನ್ನು ಓದಿದ್ದೀರಾ? ‘ಈ ದಿನ.ಕಾಮ್‌’ ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಮಳೆಹಾನಿ ಬಗ್ಗೆ ‌ಡಿಸಿಗಳ ಜೊತೆ ಸಿಎಂ ಸಭೆ

ಸಮಾರಂಭದಲ್ಲಿ ನಾಟಕ ಅಕಾಡೆಮಿ ಸದಸ್ಯ ರವಿ ಸಿರಿವರ, ಸಿರಿವರ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷರಾದ ಜಿ. ರವೀಂದ್ರನಾಥ ಸಿರಿವರ, ಜನಮನ ಪ್ರತಿಷ್ಠಾನದ ಅಧ್ಯಕ್ಷರಾದ ಲಕ್ಷ್ಮಣ ಕೊಡಸೆ, ಕಂಠೀರವ ಪ್ರಕಾಶನದ ಜಾಣಗೆರೆ ವೆಂಕಟರಾಮಯ್ಯ, ಬಿ.ವಿ. ಕಾರಂತ ಇಂಡಿಯನ್‌ ಆಕ್ಟಿಂಗ್‌ ಅಕಾಡೆಮಿ ಟ್ರಸ್ಟ್‌ ಅಧ್ಯಕ್ಷರಾದ ಚಲನ ಜಿ. ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X