ಬೆಂಗಳೂರು | ಕನ್ನಡ ಸಾರಸ್ವತ ಭೂಮಿ ಸಂಶೋಧನೆಯ ಕನ್ನೆ ನೆಲ: ನಾಡೋಜ ಪ್ರೊ. ಹಂಪ ನಾಗರಾಜಯ್ಯ

Date:

Advertisements

ನಮ್ಮ ಕನ್ನಡ ಸಾರಸ್ವತ ಭೂಮಿ ಯಾವತ್ತೂ ಬಂಜೆಯಲ್ಲ. ಅದು ಕಣ್ಣು ಹಾಯಿಸಿದಷ್ಟೂ ಸಂಶೋಧನೆಯ ಸಾಧ್ಯತೆಗಳತ್ತ ದಾರಿ ತೋರುವ ಕನ್ನೆ ನೆಲವಾಗಿದೆ ಎಂದು ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ನಗರದ ಕೆ ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದಿಂದ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ “ಕನ್ನಡ ಸಂಶೋಧನೆಯ ಹೊಸ ಸಾಧ್ಯತೆಗಳು” ಕುರಿತ 5 ದಿನಗಳ ರಾಷ್ಟ್ರಮಟ್ಟದ ‘ಸಂಶೋಧನಾ ಕಾರ್ಯಾಗಾರ’ವನ್ನು ಅಂತರ್ಜಾಲದ ಜ಼ೂಮ್ ವೇದಿಕೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.

“ಸಂಶೋಧನೆ ಎಂದರೆ ಹುಡುಗಾಟವಲ್ಲ. ಅದು ನಿರಂತರವಾಗಿ ನಡೆಸಬೇಕಾದ ಹುಡುಕಾಟ. ಸಂಶೋಧನೆಗಿರುವುದು ಬೆವರಿನ ದಾರಿಯೇ ಹೊರತು ಯಾವುದೇ ಅಡ್ಡದಾರಿಗಳಿಲ್ಲ. ಶಿಸ್ತುಬದ್ಧವಾದ ಪೂರ್ವ ತಯಾರಿ, ಸತತ ಅಭ್ಯಾಸ, ವ್ಯಾಪಕವಾದ ಅಧ್ಯಯನವು ಸಂಶೋಧನೆಗೆ ಅತ್ಯವಶ್ಯಕ. ಭಾಷಾವಿಜ್ಞಾನದ ಅರಿವಿನೊಂದಿಗೆ ಸ್ವಭಾಷಾ ಜ್ಞಾನವೂ ಇರಬೇಕು. ಆಯ್ಕೆ ಮಾಡಿಕೊಳ್ಳುವ ವಸ್ತುವನ್ನು ಕುರಿತು ಈಗಾಗಲೇ ನಡೆದಿರುವ ಸಂಶೋಧನೆಯನ್ನು ಪರಾಮರ್ಶೆ ಮಾಡುವುದು ಔಚಿತ್ಯಪೂರ್ಣವಾದುದು. ಪೂರ್ವಸೂರಿಗಳ ಮಾರ್ಗದಲ್ಲಿ ನಾಲ್ಕು ಹೆಜ್ಜೆ ಮುನ್ನಡೆದು ಸ್ವೋಪಜ್ಞತೆಯಿಂದ ಹೊಸತಾದ ಸಂಶೋಧನೆಯನ್ನು ಕೈಗೊಳ್ಳಬೇಕು. ಹೇಳಿದ್ದನ್ನೇ ಹೇಳಿದರೆ ಸಂಶೋಧನೆಯಾಗದು. ಹಳೇ ಮಾತಿಗೆ ಹೊಸಮಾತನ್ನು ಕೂಡಿಸಿದರೆ ಕರಿಮೋಡಕ್ಕೆ ಬಿಳಿಚೌಕಟ್ಟು ಕಟ್ಟಿದಂತಾಗುತ್ತದೆ” ಎಂದರು.

Advertisements

“ಪ್ರಸ್ತುತ ಯುವಸಮುದಾಯವು ಸೃಜನಶೀಲ ಕ್ಷೇತ್ರದಲ್ಲಿ ಮಾಡುವಷ್ಟು ಕೆಲಸವನ್ನು ಸಂಶೋಧನಾ ಕ್ಷೇತ್ರದಲ್ಲೂ ಮಾಡಲು ಸಾಧ್ಯವಿದೆ. ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಇಂದು ದೊಡ್ಡ ದೊಡ್ಡ ವಿದ್ವಾಂಸರ ಬರಗಾಲ ಬಂದಿದೆ ಎಂದುಕೊಳ್ಳಬಾರದು. ಈಗಿನ ಹೊಸ ತಲೆಮಾರಿನ ಸಂಶೋಧಕರೇ ದೊಡ್ಡ ವಿದ್ವಾಂಸರಾಗಿ ರೂಪುಗೊಳ್ಳಬೇಕು. ಹಿಂದಿನ ಅನೇಕ ವಿದ್ವಾಂಸರ ಮಾದರಿಗಳು ನಮ್ಮ ಮುಂದಿವೆ. ಅವುಗಳನ್ನು ಅನುಸರಿಸಿ ಪುನರವಲೋಕನ ಮಾಡುವ ಮೂಲಕ ಮುಂದೆ ಸಾಗಬೇಕು” ಎಂದು ಕಿವಿಮಾತು ಹೇಳಿದರು.

“ಕನ್ನಡದ ಆದಿಕವಿ ಪಂಪನು ಸಂಸ್ಕೃತ ಮೂಲದ ಮಹಾಭಾರತವನ್ನು ಮೊಟ್ಟಮೊದಲ ಬಾರಿಗೆ ತರುವಾದ ಪ್ರಾದೇಶಿಕ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ತಕ್ಕುದಾಗಿ ಪುನರ್ ಸೃಷ್ಠಿ ಮಾಡಿದನೇ ಹೊರತು ಯಥಾವತ್ತು ಅನುಸೃಷ್ಠಿ ಮಾಡಲಿಲ್ಲ. ಪಂಪನ ಸೃಜನಶೀಲ ಪ್ರತಿಭಾ ವ್ಯಕ್ತಿತ್ವದಿಂದ ಮೂಡಿಬಂದ ಪಂಪಭಾರತವು ತದನಂತರ ಇತರ ಪ್ರಾದೇಶಿಕ ಭಾಷೆಗಳಲ್ಲೂ ಮಹಾಭಾರತಗಳ ಸೃಷ್ಟಿಗೆ ಪ್ರೇರಣೆಯಾಯ್ತು. ತೆಲುಗಿನಲ್ಲಿ ನನ್ನಯ, ಎರ್ರನ, ತಿಕ್ಕನರ ಭಾರತಗಳು ಮೂಡಿಬಂದವು. ಪಂಪನು ಕನ್ನಡದ ಆದಿಕವಿಯಾದಂತೆ, ಆತನ ತಮ್ಮನಾದ ಜಿನವಲ್ಲಭನು ತೆಲುಗಿನ ಆದಿಕವಿಯೇ ಆಗಿದ್ದಾನೆ. ಯಾಕೆಂದರೆ ತಾಯಿ ಭಾಷೆಯಾದ ಕನ್ನಡದಲ್ಲಿ ಪಂಪ ಬರೆದರೆ, ತಂದೆ ಭಾಷೆಯಾದ ತೆಲುಗಿನಲ್ಲಿ ಜಿನವಲ್ಲಭನು ಕಾವ್ಯ ನೀಡುವ ಮೂಲಕ ಕನ್ನಡ ಹಾಗೂ ತೆಲುಗಿಗೆ ತಮ್ಮದೇ ಆದ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಪಂಪನ ಮಹಾಕಾವ್ಯಗಳನ್ನು ಇತರ ಪ್ರಾದೇಶಿಕ ಹಾಗೂ ಜಾಗತಿಕ ಮಹಾಕಾವ್ಯಗಳೊಂದಿಗೆ ತೌಲನಿಕವಾಗಿ ಅಧ್ಯಯನ ನಡೆಸಲು ಸಾಧ್ಯವಿದೆ” ಎಂದು ಅಭಿಪ್ರಾಯಪಟ್ಟರು.‌

ಈ ಸುದ್ದಿ ಓದಿದ್ದೀರಾ? ತುಮಕೂರು | ಕೇಂದ್ರ ಒಬಿಸಿ ಪಟ್ಟಿಗೆ ಕುಂಚಿಟಿಗರನ್ನು ಸೇರಿಸುವ ಶಿಫಾರಸ್ಸು ಜಾರಿಗಾಗಿ ಎಚ್‌ಡಿಡಿಗೆ ಮನವಿ

ಕಾಲೇಜಿನ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರು ಹಾಗೂ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕರೂ ಆದ ಫಾ. ಡಾ ಜೋಶಿ ಮ್ಯಾಥ್ಯೂ ಮಾತನಾಡಿ, “ಸಂಶೋಧನೆ ಎಂಬುದು ನಿರಂತರ ಹುಡುಕಾಟದ ಮೂಲಕ ನಿಚ್ಚಂಪೊಸತಾಗಿ ಮೂಡುವ ಲೋಕದ ಬೆಳಗು. ಕನ್ನಡ ಸಂಶೋಧನಾ ಚರಿತ್ರೆಯಲ್ಲಿ ವಿದ್ವನ್ಮಣಿಗಳಾಗಿ ಬೆಳಗಿದ ಹಿಂದಿನ ಸಂಶೋಧಕ ದೀಪಗಳನ್ನು ಇಂದಿನ ಸಂಶೋಧಕರು ತಮ್ಮೊಳಗೆ ಅಂತಃಸ್ಥ ಮಾಡಿಕೊಂಡು ಸಾಗಬೇಕಿದೆ” ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಪ್ರಾಧ್ಯಾಪಕರೂ ಆದ ಪ್ರೊ. ಎನ್ ಕೆ ಲೋಲಾಕ್ಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ವಿಭಾಗದ ಡೀನ್‌ ಡಾ. ಎ ವಿ ಗೋಪಕುಮಾರ್, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ ಸೈಯದ್ ಮುಯಿನ್, ಡಾ ರವಿಶಂಕರ್ ಎ ಕೆ, ಡಾ ಪ್ರೇಮಕುಮಾರ್ ಕೆ, ಡಾ ಕಿರಣಕುಮಾರ್ ಎಚ್ ಜಿ ಸೇರಿದಂತೆ ಸುಮಾರು 300 ಜನ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

Download Eedina App Android / iOS

X