ರಂಗಭೂಮಿಯ ಪ್ರತಿಯೊಂದು ಪಾತ್ರಗಳು ಚದುರಂಗದ ಆಟ ಇದ್ದಂತೆ. ಮನದ ಮಾತುಗಳನ್ನು ಅಡುವ ಸಂದರ್ಭದಲ್ಲಿ ಕೋರಸ್ ಮರೆಯಾದವು. ರಂಗಭೂಮಿ ಕಾರ್ಯನಿರ್ವಹಿಸುವುದು ಮೆದುಳಿನಿಂದ ಚಿಂತಿಸಿ ಮುನ್ನಡೆಯುವುದಲ್ಲ, ರಂಗಕರ್ಮಿ ದೇಹದ ಮೂಲಕ ಚಿಂತಿಸುವವನು. ಪಾದಗಳಲ್ಲಿ ಇರುವುದನ್ನು ಮೆದುಳಿಗೆ ತರಬೇತಿ ನೀಡಿ ರಂಗಭೂಮಿಯ ಕಾರ್ಯನಿರ್ವಹಿಸುವುದಾಗಿದೆ ಎಂದು ರಂಗ ತಜ್ಞರು ಹಾಗೂ ತುಘಲಕ್ ನಾಟಕದ ನಿರ್ದೇಶಕ ಡಾ. ಶ್ರೀಪಾದ್ ಭಟ್ ಹೇಳಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರದಂದು ನಡೆದ ಎರಡನೇ ದಿನದ ಕಾರ್ನಾಡ್ ರಂಗೋತ್ಸವದಲ್ಲಿ ʼರಂಗ ಚಿಂತನೆʼ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಹಿರಿಯ ರಂಗಕರ್ಮಿಗಳಾದ ಸಿ ಕೆ ಗುಂಡಣ್ಣ, ರಂಗಕರ್ಮಿ ಕೀರ್ತಿ ತೊಂಡಗೆರೆ ತುಘಲಕ್ ನಾಟಕದ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವಾಲ್ಮೀಕಿ ಜಯಂತಿ ವೇಳೆ ಅವಮಾನ; ನಾಯಕ ಸಮಾಜದ ಮುಖಂಡರ ಆರೋಪ
ಸಮುದಾಯ ಬೆಂಗಳೂರು ಆಯೋಜಿಸಿದ ಕಾರ್ನಾಡ್ ನೆನಪು, ತುಘಲಕ್ ನೂರರ ಸಂಭ್ರಮದ ಹಿನ್ನಲೆಯಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳ ಕಾರ್ನಾಡ್ ರಂಗೋತ್ಸವ ನಡೆಯಿತು. ಎರಡು ದಿನಗಳಲ್ಲಿ ಹಲವು ಗೋಷ್ಠಿಗಳು ನಡೆದವು. ನೂರಾರು ಸಾಹಿತಿಗಳು, ರಂಗಕರ್ಮಿ ಕಲಾವಿದರು ಈ ರಂಗೋತ್ಸವದಲ್ಲಿ ಇದ್ದರು.